ಸದ್ಯಕ್ಕೆ ನಾಲೆಗೆ ನೀರು ಬಿಡಲ್ಲ ಎಂದ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಬ್ಬು ಬೆಳೆಗಾರರು
ಸದ್ಯಕ್ಕೆ ನಾಲೆಗೆ ನೀರು ಬಿಡಲು ಆಗುವುದಿ ಎಂದ ಅಧಿಕಾರಿಗಳ ವಿರುದ್ಧ ಕಬ್ಬು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಆರ್ಎಸ್ ಜಲಾಶಯ 90 ಅಡಿ ತಲುಪಿದೆ. ಹೀಗಾಗಿ ಜಲಾಶಯಗಳಿಂದ ನಾಲೆಗಳಿಗೆ ಕೂಡಲೇ ನೀರು ಬಿಡುಗಡೆ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.
ಮೈಸೂರು: ಸದ್ಯಕ್ಕೆ ನಾಲೆಗೆ ನೀರು ಬಿಡಲು ಆಗುವುದಿ ಎಂದ ಅಧಿಕಾರಿಗಳ ವಿರುದ್ಧ ಕಬ್ಬು ಬೆಳೆಗಾರರು (Sugarcane growers) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರು ಅರಮನೆ ಬಳಿ ಇರುವ ಕಾಡಾ ಕಚೇರಿಗೆ ಇಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಭೇಟಿ ನೀಡಿದ್ದಾರೆ. ಡೆಪ್ಯುಟಿ ಚೀಫ್ ಎಂಜಿನಿಯರ್ ರಂಗನಾಥ್ ಜೊತೆ ನಾಲೆಗೆ ನೀರು ಬಿಡುವ ಕುರಿತಾಗಿ ಮಾತನಾಡಿದ್ದಾರೆ.
ನೀರಾವರಿ ಪ್ರದೇಶದಲ್ಲಿರುವ ಕಬ್ಬು ಸೇರಿದಂತೆ ಇನ್ನಿತರ ಬೆಳೆಗಳು ಒಣಗುತ್ತಿವೆ. ಕೆಆರ್ಎಸ್ ಜಲಾಶಯ 90 ಅಡಿ ತಲುಪಿದೆ. ಹೀಗಾಗಿ ಜಲಾಶಯಗಳಿಂದ ನಾಲೆಗಳಿಗೆ ಕೂಡಲೇ ನೀರು ಬಿಡುಗಡೆ ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ನಾಲೆಗಳಿಗೆ ನೀರು ಬಿಡುಗಡೆ ಮಾಡುವುದಾಗಿ ಅಧಿಕಾರಿ ರಂಗನಾಥ್ ತಿಳಿಸಿದ್ದಾರೆ. ಆದರೆ ಇದಕ್ಕೆ ಒಪ್ಪದ ರೈತರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ರಾಜಕೀಯ ಭಿನ್ನಮತ ದೂರವಿಟ್ಟು ಪ್ರಧಾನಿ ಮೋದಿಗೆ ಬೆಂಬಲ ನೀಡಬೇಕು: ಶೋಭಾ ಕರಂದ್ಲಾಜೆ
ಕಳಪೆ ಬಿತ್ತನೆ ಬೀಜ ಪೂರೈಕೆ ಆರೋಪ: ಆಕ್ರೋಶ ವ್ಯಕ್ತಪಡಿಸಿದ ರೈತರು
ದಾವಣಗೆರೆ: ಜಗಳೂರಿನಲ್ಲಿ ಕಳಪೆ ಬಿತ್ತನೆ ಬೀಜ ಪೂರೈಕೆ ಆರೋಪ ಕೇಳಿಬಂದಿದ್ದು, ರೈತ ಬಿತ್ತನೆಗೆ ಜಮೀನಿಗೆ ಹೋದಾಗ ತೊಗರಿ ಬೀಜ ಕಳಪೆ ಇರುವುದು ಪತ್ತೆಯಾಗಿದೆ. ಕಳಪೆ ತೊಗರಿ ಬೀಜದ ಬಗ್ಗೆ ಗಮನಕ್ಕೆ ತಂದರೂ ಜಗಳೂರು ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಅರಿಶಿನಗುಂಡಿ ಗ್ರಾಮದ ದೇವೇಂದ್ರಪ್ಪ ಲಿಂಗದಹಳ್ಳಿ ಸೇರಿದಂತೆ ಕೆಲವು ರೈತರಿಗೆ ಕಳಪೆ ಬಿತ್ತನೆ ಬೀಜ ಪೂರೈಕೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ಯಾಂಕರ್ ನೀರಿನ ಮೊರೆ ಹೋದ ರೈತರು
ಯಾದಗಿರಿ: ಜಿಲ್ಲೆಯ ಮೇಲೆ ವರುಣಾದೇವ ಅಕ್ಷರಶ ಮುನಿಸಿಕೊಂಡಂತೆ ಕಾಣುತ್ತಿದೆ. ಮುಂಗಾರು ಮಳೆ ಆರಂಭವಾಗಿ ಒಂದುವರೆ ತಿಂಗಳು ಕಳೆದರೂ ಮಳೆರಾಯ ಮಾತ್ರ ಮುನಿಸು ಮರೆಯುತ್ತಿಲ್ಲ. ಮಳೆಯನ್ನ ನಂಬಿ ಬಿತ್ತನೆ ಮಾಡಿದ ಜಿಲ್ಲೆಯ ರೈತರು ಈಗ ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಮುಂಗಾರು ಆರಂಭವದಲ್ಲಿ ಅಲ್ವ ಪ್ರಮಾಣದಲ್ಲಿ ಮಳೆಯಾಗಿರುವ ಕಾರಣಕ್ಕೆ ರೈತರು ಬರದಿಂದ ಹತ್ತಿ ಹಾಗೂ ಹೆಸರು ಬಿತ್ತನೆ ಮಾಡಿದ್ದಾರೆ. ಸಾವಿರಾರು ರೂ. ಖರ್ಚು ಮಾಡಿ ಬೀಜ, ರಸಗೊಬ್ಬರವನ್ನ ಖರೀದಿ ಮಾಡಿಕೊಂಡು ಭೂಮಿತಾಯಿ ಒಡಲಿಗೆ ಹಾಕಿದ್ದಾರೆ.
ಇದನ್ನೂ ಓದಿ: Chikkamagaluru News: ಮದ್ಯದ ನಶೆಯಲ್ಲಿ ಆಟೋ ಚಾಲನೆ ಮಾಡಿ, ಕಂದಕಕ್ಕೆ ಉರುಳಿಸಿದ ಚಾಲಕ; ವಿಡಿಯೋ ವೈರಲ್
ಆದರೆ ಮಳೆರಾಯ ಮಾತ್ರ ಅಬ್ಬರಿಸುತ್ತಿಲ್ಲ, ಹೀಗಾಗಿ ರೈತರ ಜಮೀನಿನಲ್ಲಿರುವ ಹತ್ತಿ ಬೆಳೆ ಒಣಗುವ ಸ್ಥಿತಿಗೆ ಬಂದಿದೆ. ಹೀಗಾಗಿ ರೈತರು ಹೇಗಾದರೂ ಮಾಡಿ ಬೆಳೆಯನ್ನ ಉಳಿಸಿಕೊಳ್ಳಬೇಕು ಅಂತ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.