ಮಾಲೂರು ಶಾಸಕನಿಗೆ ನಾನು ಹೆದರೋನಲ್ಲ, ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ: ಎಸ್ಎನ್ ನಾರಾಯಣಸ್ವಾಮಿ, ಶಾಸಕ
ನಂಜೇಗೌಡ ಅವರು ತನ್ನ ವಿರುದ್ಧ ಹೈಕಮಾಂಡ್ ಗೆ ಏನಂಂತ ದೂರು ಕೊಟ್ಟಾರು? ಮಾಲೂರುನಲ್ಲಿ ನಾನು ವಿರೋಧ ಪಕ್ಷದ ನಾಯಕರ ಜೊತೆ ವೇದಿಕೆ ಹಂಚಿಕೊಂಡೆ ಅಂತ ಹೇಳಬಹುದು, ಅದರೆ ಅವರು ಮಾಡುವ ಆರೋಪ ಸುಳ್ಳು, ಅದು ಪಕ್ಷದ ವೇದಿಕೆಯಾಗಿರಲಿಲ್ಲ ಎಂದ ನಾರಾಯಣಸ್ವಾಮಿ, ಕೋಲಾರ ರೈತ ಮಹಿಳೆಯರ ಬಗ್ಗೆ ನನಗೆ ಅಪಾರ ಗೌರವವಿದೆ, ಅವರಿಗೆ ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದು ಹೇಳಿದರು.
ಬೆಂಗಳೂರು, ಜೂನ್ 30: ಮಾಲೂರು ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ (KY Nanjegowda) ಅವರನ್ನು ಕಂಡು ಹೆದರಲು ಅವರೇನು ಹುಲಿಯೋ ಸಿಂಹವೋ? ಅವರಲ್ಲಿ ಹಣ ಇರಬಹುದು, ಕ್ವಾರಿಗಳಿರಬಹುದು; ತಾನು ಯಾವುದಕ್ಕೂ ಹೆದರೋನಲ್ಲ, ಆದರೆ ಹೈಕಮಾಂಡ್ ಹೇಳಿದಂತೆ ಕೇಳುವವನು ಎಂದು ಬಂಗಾರುಪೇಟೆ ಶಾಸಕ ಎಸ್ಎನ್ ನಾರಾಯಣಸ್ವಾಮಿ ಹೇಳಿದರು. ಇವತ್ತು ನಗರದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಅವರು, ಕೋಲಾರ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷನಾಗುವ ಅವಕಾಶ ಒಬ್ಬ ಪರಿಶಿಷ್ಟ ಜಾತಿಗೆ ಸೇರಿದವನಾದ ತನಗೆ ಸಿಕ್ಕಿದೆ, ಕೋಲಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಪಕ್ಷದ ವಿದ್ಯಮಾನಗಳನ್ನು ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಅವರ ಗಮನಕ್ಕೆ ತಂದಿದ್ದೇನೆ, ನಂಜೇಗೌಡರು ಅಧಿಕಾರ ಅನುಭವಿಸುವಾಗ ಯಾವ ತೊಂದರೆಯನ್ನೂ ತಾನು ತಂದೊಡ್ಡಿಲ್ಲ, ಆದರೆ ಅವರು ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ನಾರಾಯಣಸ್ವಾಮಿ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಒಳಜಗಳ: ಡಿಸಿಸಿ ಬ್ಯಾಂಕ್ ಮತ್ತು ಕೋಮುಲ್ಗೆ ಸಂಕಷ್ಟ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ