ಸಹಕಾರ ಸಂಘ ನಿರ್ದೇಶಕರ ಚುನಾವಣೆಯಲ್ಲಿ ಗೆಲುವು, ವಿಧಾನಸೌಧದಲ್ಲಿ ಭರ್ಜರಿ ಬಾಡೂಟ
ಬೆಂಗಳೂರು: ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಕಚೇರಿಯಲ್ಲಿ ಭರ್ಜರಿ ಬಾಡೂಟ ಪಾರ್ಟಿ ಏರ್ಪಡಿಸಲಾಗಿದೆ. ಕರ್ನಾಟಕ ವಿಧಾನಮಂಡಲ ಗೃಹ ನಿರ್ಮಾಣ ಸಹಕಾರ ಸಂಘ ನಿರ್ದೇಶಕರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ಉಪಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ಅನಂತ್ ಇಂದು ಮಧ್ಯಾಹ್ನ ಭರ್ಜರಿ ಬಾಡೂಟ ಆಯೋಜಿಸಿದ್ದರು. ಉಪ ಸಭಾಧ್ಯಕ್ಷರು ಇಲ್ಲದ ವೇಳೆ ಸಿಬ್ಬಂದಿಗಳಿಂದ ಕಚೇರಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಸಿಬ್ಬಂದಿ ಮಾತ್ರ ಇವತ್ತು ಚಿಕನ್, ಮಟನ್, ಫಿಶ್, ಕಬಾಬ್, ಮೊಟ್ಟೆ ಸೇರಿ ನಾನಾ ನಾನ್ ವೆಜ್ […]
ಬೆಂಗಳೂರು: ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಕಚೇರಿಯಲ್ಲಿ ಭರ್ಜರಿ ಬಾಡೂಟ ಪಾರ್ಟಿ ಏರ್ಪಡಿಸಲಾಗಿದೆ. ಕರ್ನಾಟಕ ವಿಧಾನಮಂಡಲ ಗೃಹ ನಿರ್ಮಾಣ ಸಹಕಾರ ಸಂಘ ನಿರ್ದೇಶಕರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ಉಪಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ಅನಂತ್ ಇಂದು ಮಧ್ಯಾಹ್ನ ಭರ್ಜರಿ ಬಾಡೂಟ ಆಯೋಜಿಸಿದ್ದರು.
ಉಪ ಸಭಾಧ್ಯಕ್ಷರು ಇಲ್ಲದ ವೇಳೆ ಸಿಬ್ಬಂದಿಗಳಿಂದ ಕಚೇರಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಸಿಬ್ಬಂದಿ ಮಾತ್ರ ಇವತ್ತು ಚಿಕನ್, ಮಟನ್, ಫಿಶ್, ಕಬಾಬ್, ಮೊಟ್ಟೆ ಸೇರಿ ನಾನಾ ನಾನ್ ವೆಜ್ ಊಟವನ್ನು ಭರ್ಜರಿಯಾಗಿ ಸವಿದಿದ್ದಾರೆ.