ರಾಜ್ಯದಲ್ಲಿ 18-44 ವಯೋಮಾನದ 8,606 ಜನರಿಗೆ ಮಾತ್ರ ಲಸಿಕೆ; ಕರ್ನಾಟಕಕ್ಕಿಂತ ಜಮ್ಮು ಕಾಶ್ಮೀರದಲ್ಲೇ ಹೆಚ್ಚು ಲಸಿಕೆ ವಿತರಣೆ

ರಾಜ್ಯದಲ್ಲಿ 18-44 ವಯೋಮಾನದ 8,606 ಜನರಿಗೆ ಮಾತ್ರ ಲಸಿಕೆ; ಕರ್ನಾಟಕಕ್ಕಿಂತ ಜಮ್ಮು ಕಾಶ್ಮೀರದಲ್ಲೇ ಹೆಚ್ಚು ಲಸಿಕೆ ವಿತರಣೆ
ಕೊರೊನಾ ಲಸಿಕೆ

ಕರ್ನಾಟಕದಲ್ಲಿ ಈಗಾಗಲೇ ಮೊದಲ ಡೋಸ್ ಪಡೆದಿರುವ 45 ವರ್ಷ ಮತ್ತು ಅದರ ಮೇಲ್ಪಟ್ಟವರಿಗೆ ಎರಡನೇ ಡೋಸ್ ಪಡೆಯುವುದಕ್ಕೂ ಲಸಿಕೆ ಅಭಾವ ಎದುರಾಗಿದೆ. ಜತೆಗೆ, ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸುತ್ತಿರುವ ಜಿಲ್ಲೆ ಎಂದು ಬೆಂಗಳೂರು ಗುರುತಿಸಿಕೊಂಡಿದೆ. ಅಷ್ಟಾಗಿಯೂ ಲಸಿಕೆ ವಿಚಾರದಲ್ಲಿ ಕರ್ನಾಟಕ ಮಾತ್ರ ನೀರಸ ಪ್ರದರ್ಶನ ತೋರಿಸುತ್ತಿದೆ.

Skanda

|

May 08, 2021 | 11:04 AM

ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಎಗ್ಗಿಲ್ಲದೆ ಹಬ್ಬುತ್ತಿದೆ. ಬಹುತೇಕ ಎಲ್ಲಾ ರಾಜ್ಯಗಳೂ ಸೋಂಕಿನ ಹೊಡೆತಕ್ಕೆ ತತ್ತರಿಸಿದ್ದು ವೈದ್ಯಕೀಯ ವಲಯ ಪರಿಸ್ಥಿತಿ ನಿಭಾಯಿಸಲು ಪರದಾಡುತ್ತಿದೆ. ಏತನ್ಮಧ್ಯೆ, ಮೇ.1ರಿಂದ ದೇಶದಲ್ಲಿ 18 ರಿಂದ 44 ವಯೋಮಾನದವರಿಗೂ ಲಸಿಕೆ ವಿತರಣೆ ಮಾಡುವುದಾಗಿ ಭಾರತ ಸರ್ಕಾರ ತಿಳಿಸಿತ್ತು. ಅದರಂತೆ ಲಸಿಕೆ ವಿತರಣೆ ಆರಂಭಿಸಿ ಒಂದು ವಾರ ಕಳೆದಿದ್ದು, ದೇಶದಲ್ಲಿ ಒಟ್ಟಾರೆಯಾಗಿ 18-44 ವರ್ಷದ 14 ಲಕ್ಷ ಜನರಿಗೆ ಲಸಿಕೆ ನೀಡಿರುವುದಾಗಿ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ಆ ಪ್ರಕಾರವಾಗಿ ನೋಡಿದರೆ ನೆರೆಯ ಮಹಾರಾಷ್ಟ್ರ, ಪ್ರಧಾನಿಗಳ ತವರು ರಾಜ್ಯ ಗುಜರಾತ್, ರಾಷ್ಟ್ರ ರಾಜಧಾನಿ ದೆಹಲಿ, ಉತ್ತರಪ್ರದೇಶ, ರಾಜಸ್ಥಾನಗಳಲ್ಲಿ ಲಕ್ಷದ ಲೆಕ್ಕದಲ್ಲಿ ಲಸಿಕೆ ವಿತರಣೆಯಾಗಿದ್ದು, ಎರಡನೇ ಅಲೆಗೆ ಸಿಕ್ಕು ತತ್ತರಿಸಿರುವ ಕರ್ನಾಟಕದಲ್ಲಿ ಮಾತ್ರ 8,606 ಜನರಿಗೆ ಲಸಿಕೆ ನೀಡಲಾಗಿದೆ.

ದುರದೃಷ್ಟವಶಾತ್ ಕರ್ನಾಟಕದಲ್ಲಿ ಈಗಾಗಲೇ ಮೊದಲ ಡೋಸ್ ಪಡೆದಿರುವ 45 ವರ್ಷ ಮತ್ತು ಅದರ ಮೇಲ್ಪಟ್ಟವರಿಗೆ ಎರಡನೇ ಡೋಸ್ ಪಡೆಯುವುದಕ್ಕೂ ಲಸಿಕೆ ಅಭಾವ ಎದುರಾಗಿದೆ. ಜತೆಗೆ, ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸುತ್ತಿರುವ ಜಿಲ್ಲೆ ಎಂದು ಬೆಂಗಳೂರು ಗುರುತಿಸಿಕೊಂಡಿದೆ. ಅಷ್ಟಾಗಿಯೂ ಲಸಿಕೆ ವಿಚಾರದಲ್ಲಿ ಕರ್ನಾಟಕ ಮಾತ್ರ ನೀರಸ ಪ್ರದರ್ಶನ ತೋರಿಸುತ್ತಿದೆ.

ದೇಶದಲ್ಲಿ ಇದುವರೆಗೂ 18 ರಿಂದ 44 ವರ್ಷದ 14 ಲಕ್ಷ ಮಂದಿಗೆ ಕೊರೊನ ಲಸಿಕೆ ನೀಡಲಾಗಿದ್ದು, ದೆಹಲಿಯಲ್ಲಿ 2.41 ಲಕ್ಷ ಮಂದಿ, ಗುಜರಾತ್​ನಲ್ಲಿ 2.46 ಲಕ್ಷ ಮಂದಿ, ಮಹಾರಾಷ್ಟ್ರದಲ್ಲಿ 3 ಲಕ್ಷ ಮಂದಿ, ಜಮ್ಮು ಕಾಶ್ಮೀರದಲ್ಲಿ 25,968 ಮಂದಿ ಲಸಿಕೆ ಪಡೆದಿದ್ದಾರೆ. ಕರ್ನಾಟಕದಲ್ಲಿ 8,606 ಮಂದಿ ಮಾತ್ರ ಲಸಿಕೆ ಸ್ವೀಕರಿಸಿದ್ದು ಕರ್ನಾಟಕದಂತೆ ಹಲವು ರಾಜ್ಯಗಳು ಕಡಿಮೆ ಪ್ರಮಾಣದ ಲಸಿಕೆ ವಿತರಣೆಗೆ ಸಾಕ್ಷಿಯಾಗಿವೆ.

ಕರ್ನಾಟಕದಲ್ಲಿ 18ರಿಂದ44 ವರ್ಷ ವಯೋಮಾನದವರು 3.2 ಕೋಟಿ ಜನರಿದ್ದರೂ ಆ ಪೈಕಿ ಇದುವರೆಗೆ ಕೇವಲ 8,606 ಮಂದಿಗೆ ಲಸಿಕೆ ನೀಡಲಾಗಿರುವುದು ಅನೇಕರಿಗೆ ಆಚ್ಚರಿ ಮೂಡಿಸಿದೆ. ಅಲ್ಲದೇ 45 ವರ್ಷ ಮೇಲ್ಪಟ್ಟವರಿಗೂ ರಾಜ್ಯದಲ್ಲಿ ಎರಡನೇ ಡೋಸ್ ಲಸಿಕೆ ಸಿಗುತ್ತಿಲ್ಲವಾದ್ದರಿಂದ ರಾಜ್ಯ ಸರ್ಕಾರ ಲಸಿಕೆ ಪೂರೈಕೆ ಬಗ್ಗೆ ಗಮನ ನೀಡಬೇಕಿದೆ.

ಇದನ್ನೂ ಓದಿ: ಕೊರೊನಾ ಲಸಿಕೆಗೆ ಪೇಟೆಂಟ್​ ಬೇಡ, ಯಾವ ಸಂಸ್ಥೆ ಬೇಕಿದ್ದರೂ ಅಂಗೀಕೃತ ಲಸಿಕೆ ಉತ್ಪಾದಿಸಲಿ; ಭಾರತದ ಬೇಡಿಕೆಗೆ ಅಮೆರಿಕಾ ಬೆಂಬಲ

Follow us on

Related Stories

Most Read Stories

Click on your DTH Provider to Add TV9 Kannada