ಆ ವ್ಯಕ್ತಿ ಕೆ.ಆರ್​.ಮಾರುಕಟ್ಟೆಯಲ್ಲಿ ಬ್ಯಾಗ್​ ಮೂಲಕ ಕೊರೊನಾ ಮಾರುತ್ತಿದ್ದನಾ? ಆತಂಕ ಶುರು

ಆ ವ್ಯಕ್ತಿ ಕೆ.ಆರ್​.ಮಾರುಕಟ್ಟೆಯಲ್ಲಿ ಬ್ಯಾಗ್​ ಮೂಲಕ ಕೊರೊನಾ ಮಾರುತ್ತಿದ್ದನಾ? ಆತಂಕ ಶುರು

ಬೆಂಗಳೂರು: ಬೆನ್ನು ಬಿಡದೆ ಕಾಡುತ್ತಿರುವ ಕೊರೊನಾ ವೈರಸ್ ದಿನೇ ದಿನೆ ಬೆಂಗಳೂರಿಗರನ್ನು ಬೆಚ್ಚಿಬೀಳುವಂತೆ ಮಾಡುತ್ತಿದೆ. ಅದರಲ್ಲೂ ನಿನ್ನೆ ಱಂಡಮ್​ ಟೆಸ್ಟ್ ವೇಳೆ ಪತ್ತೆಯಾದ ಕೊರೊನಾ ಸೊಂಕಿತ ವ್ಯಕ್ತಿ ನಗರದಲ್ಲಿ ಮತ್ತಷ್ಟು ಆತಂಕ ಸೃಷ್ಟಿ ಮಾಡಿದ್ದಾನೆ. 513 ಸೋಂಕಿತನಾಗಿರುವ ವ್ಯಕ್ತಿ ಬೆಂಗಳೂರಿನ ಕೆ.ಆರ್​.ಮಾರುಕಟ್ಟೆಯಲ್ಲಿ ಬ್ಯಾಗ್​ ಮಾರುತ್ತಿದ್ದ. ಹಾಗೂ ಪಾದರಾಯನಪುರದ ನಿವಾಸಿ.

ಲಾಕ್ ಡೌನ್ ಮಧ್ಯೆಯೂ ಬ್ಯಾಗ್ ಮಾರಾಟಕ್ಕೆ ಕೆ.ಆರ್ ಮಾರ್ಕೆಟ್​ಗೆ ಹೋಗಿ ಬಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. 513ನೇ ಸೋಂಕಿತನ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಐವರಿಗೆ ಕ್ವಾರಂಟೈನ್​ ಮಾಡಲಾಗಿದೆ. ಇಂದು 7 ಜನ ಸೆಕೆಂಡರಿ ಕಾಂಟ್ಯಾಕ್ಟ್​ಗಳ ಶಿಫ್ಟ್​ಗೆ ಬಿಬಿಎಂಪಿಯಿಂದ ಸಿದ್ಧತೆ ನಡೆದಿದೆ. ಯಾರಿಂದ ಈತನಿಗೆ ಕೊರೊನಾ ಬಂತೆಂದು ಪತ್ತೆಯಾಗಿಲ್ಲ. https://www.facebook.com/Tv9Kannada/videos/542734293340325/

Published On - 12:07 pm, Wed, 29 April 20

Click on your DTH Provider to Add TV9 Kannada