ಇನ್ನೂ ಬುದ್ಧಿಕಲಿಯದ ಜನ: ಮಾಸ್ಕ್ ಧರಿಸೋಕೂ ಹಿಂದೇಟು, ಅಂತರವಿಲ್ಲದೆ ಅವಾಂತರ!

ಇನ್ನೂ ಬುದ್ಧಿಕಲಿಯದ ಜನ: ಮಾಸ್ಕ್ ಧರಿಸೋಕೂ ಹಿಂದೇಟು, ಅಂತರವಿಲ್ಲದೆ ಅವಾಂತರ!

ಬೆಂಗಳೂರು: ಕೊರೊನಾ.. ಜೀವ ಹಿಂಡೋ ಸೋಂಕು.. ಸೋಂಕಿತ ಕೆಮ್ಮಿದ್ರೆ ಸೋಂಕು ಹರಡುತ್ತೆ. ಸೋಂಕಿತ ವಸ್ತುಗಳನ್ನ ಮುಟ್ಟಿದ್ರೂ ಸೋಂಕು ಬರುತ್ತೆ. ಸೋಂಕು ಬಂದ್ರೆ ಉಸಿರೇ ನಿಂತು ಹೋಗುತ್ತೆ. ಕೊರೊನಾಗೆ ಮದ್ದೂ ಇಲ್ಲಾ. ಮುಲಾಮೂ ಇಲ್ಲ. ಕೊರೊನಾ ಅನ್ನೋ ಈ ಹೆಮ್ಮಾರಿಗೆ ಇಡೀ ಜಗತ್ತೇ ತತ್ತರಿಸಿ ಹೋದ್ರೂ, ಕರ್ನಾಟಕದಲ್ಲಿ ಮರಣ ಮೃದಂಗ ಬಾರಿಸುತ್ತಿದ್ರೂ, ನಮ್ಮ ಜನಕ್ಕೆ ಬುದ್ಧಿನೇ ಬರ್ತಿಲ್ಲಾ. ಕೊರೊನಾಗೆ ಕ್ಯಾರೆ ಅನ್ನದೇ ಅದ್ಹೇಗೆಲ್ಲಾ ಓಡಾಡ್ತಿದ್ದಾರೋ ನೋಡಿ. ಕೊರೊನಾ ನಿಮ್ಮನ್ನಲ್ಲ ಕುಟುಂಬವನ್ನೇ ಕೊಲ್ಲುತ್ತೆ ಹುಷಾರ್..! ಕೊರೊನಾ ಬಂದ್ರೆ ನಿಮ್ಮ ಪ್ರಾಣಕ್ಕೂ […]

sadhu srinath

|

Apr 17, 2020 | 9:27 AM

ಬೆಂಗಳೂರು: ಕೊರೊನಾ.. ಜೀವ ಹಿಂಡೋ ಸೋಂಕು.. ಸೋಂಕಿತ ಕೆಮ್ಮಿದ್ರೆ ಸೋಂಕು ಹರಡುತ್ತೆ. ಸೋಂಕಿತ ವಸ್ತುಗಳನ್ನ ಮುಟ್ಟಿದ್ರೂ ಸೋಂಕು ಬರುತ್ತೆ. ಸೋಂಕು ಬಂದ್ರೆ ಉಸಿರೇ ನಿಂತು ಹೋಗುತ್ತೆ. ಕೊರೊನಾಗೆ ಮದ್ದೂ ಇಲ್ಲಾ. ಮುಲಾಮೂ ಇಲ್ಲ. ಕೊರೊನಾ ಅನ್ನೋ ಈ ಹೆಮ್ಮಾರಿಗೆ ಇಡೀ ಜಗತ್ತೇ ತತ್ತರಿಸಿ ಹೋದ್ರೂ, ಕರ್ನಾಟಕದಲ್ಲಿ ಮರಣ ಮೃದಂಗ ಬಾರಿಸುತ್ತಿದ್ರೂ, ನಮ್ಮ ಜನಕ್ಕೆ ಬುದ್ಧಿನೇ ಬರ್ತಿಲ್ಲಾ. ಕೊರೊನಾಗೆ ಕ್ಯಾರೆ ಅನ್ನದೇ ಅದ್ಹೇಗೆಲ್ಲಾ ಓಡಾಡ್ತಿದ್ದಾರೋ ನೋಡಿ.

ಕೊರೊನಾ ನಿಮ್ಮನ್ನಲ್ಲ ಕುಟುಂಬವನ್ನೇ ಕೊಲ್ಲುತ್ತೆ ಹುಷಾರ್..! ಕೊರೊನಾ ಬಂದ್ರೆ ನಿಮ್ಮ ಪ್ರಾಣಕ್ಕೂ ಕುತ್ತು.. ನಿಮ್ಮ ಸುತ್ತಮುತ್ತಲಿನವರಿಗೂ ಆಪತ್ತು. ಅಷ್ಟೇ ಏಕೆ ನೀವು ಜೀವಕ್ಕೆ ಜೀವ ಅಂದುಕೊಂಡಿರೋ ನಿಮ್ಮ ಕುಟುಂಬದವರ ಉಸಿರನ್ನೂ ನಿಲ್ಲಿಸಿ ಬಿಡುತ್ತೆ.. ನಿಯಂತ್ರಣಕ್ಕೆ ಸಿಗದೇ ಇಷ್ಟೆಲ್ಲಾ ಅಟ್ಟಹಾಸ ಮೆರೀತಿರೋ ಕೊರೊನಾ ಕಂಡ್ರೆ ನಮ್ಮ ಜನ್ರಿಗೆ ಯಾಕಿಷ್ಟು ನಿರ್ಲಕ್ಷ್ಯ.. ಯಾಕಿಷ್ಟು ಉಡಾಫೆ..? ಯಾಕಿಷ್ಟು ಕೇರ್​ಲೆಸ್…

ಮಾಸ್ಕ್ ಧರಿಸೋಕೆ ಹಿಂದೇಟು.. ಅಂತರವಿಲ್ಲದೇ ಅವಾಂತರ..! ನೋಡಿ ಇವ್ರಿಗೆ ಏನ್​ ಹೇಳ್ಬೇಕು.. ತರಕಾರಿ ಜೀವಮಾನದಲ್ಲಿ ಇನ್ನು ಸಿಗೋದೇ ಇಲ್ವೇನೋ ಅನ್ನೋ ರೀತಿ ಖರೀದಿಗೆ ಮುಗಿಬಿದ್ದಿದ್ದಾರೆ.. ಹಾಲು ಇಲ್ಲದೇ ಜೀವನೇ ಉಳಿಯೋದಿಲ್ಲವೇನೋ ಅಂತಾ ಅಂತರವಿಲ್ಲದೇ ಗಿಜುಗುಡ್ತಿದ್ದಾರೆ.. ದಿನಸಿಗಂತೂ ಸಾಲೇ ಇಲ್ಲಾ.. ಮಾಸ್ಕ್ ಅಂತೂ ಹಾಕೇ ಇಲ್ಲ… ನಮಗೆ ಕೊರೊನಾ ಬರಲ್ಲ ಅನ್ನೋ ಭಂಡ ಧೈರ್ಯವೋ.. ಇಲ್ಲಾ ಬಂದ್ಮೇಲೆ ನೋಡಿದ್ರಾಯ್ತು ಅನ್ನೋ ಬೇಜವಾಬ್ದಾರಿಯೋ ಗೊತ್ತಿಲ್ಲ. ಭಯಭೀತಿ ಇಲ್ಲದೇ ಓಡಾಡ್ತಿದ್ದಾರೆ. ಇದೇ ಇದೇ ಇಂಥಾ ವರ್ತನೆಯೇ ಕೊರೊನಾ ಹೆಮ್ಮಾರಿ ದೇಹ ಹೊಕ್ಕಲು ಸಾಕು..

ಜಿಲ್ಲಾ ಉಸ್ತುವಾರಿ ಸಚಿವರುಗಳೇ ಏನ್ಮಾಡ್ತಿದ್ದಾರಾ..? ಕೊರೊನಾ ಸೋಂಕು ನಗರಗಳನ್ನ ಬಿಟ್ಟು ಹಳ್ಳಿಹಳ್ಳಿಗಳಿಗೂ.. ಗಲ್ಲಿ ಗಲ್ಲಿಗೂ ನುಸುಳ್ತಿದೆ.. ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ, ವಿದೇಶಕ್ಕೆ ಹೋಗದೇ ಇರೋರಿಗೂ ಸೋಂಕು ಹರಡ್ತಿದೆ.. ಮಕ್ಕಳಿಗೂ ಪುಟ್ಟ ಪುಟ್ಟ ಕಂದಮ್ಮಗಳಿಗೂ ಸುಳಿವೇ ಸಿಗದಂತೆ ಬಂದು ವಕ್ಕರಿಸಿಕೊಳ್ತಿದೆ. ರಾಜ್ಯದಲ್ಲಿ 8ಜಿಲ್ಲೆಗಳನ್ನ ಹಾಟ್​ಸ್ಪಾಟ್​ಗಳಂತೂ ಗುರ್ತಿಸಿದ್ರೂ, ದಿನೇ ದಿನೆ ಸೋಂಕಿತರು ಹೆಚ್ಚಾಗ್ತಿದ್ರೂ, ಜಿಲ್ಲಾ ಉಸ್ತುವಾರಿ ಸಚಿವರುಗಳು ಮಾತ್ರ ಕ್ಯಾರೆ ಅಂತಿಲ್ಲ. ಸರ್ಕಾರದಿಂದ ಬರೋ ಪರಿಹಾರದ ಕಿಟ್​ಗಳಿಗೆ ನಿಮ್ಮ ಫೋಟೋ ಅಂಟಿಸಿಕೊಂಡು, ಬ್ಯಾನರ್ ಹಾಕಿಸಿಕೊಳ್ಳೋಕೆ ಆಗುತ್ತೆ. ಆದ್ರೆ ಎಚ್ಚರ ವಹಿಸದ ಜನ್ರ ಬಗ್ಗೆ ಬೀದಿಗೆ ಇಳಿದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳೋದಿಕ್ಕೆ ನಿಮ್ಗೆ ಆಗಲ್ವಾ..?

ಕಣ್ಣು ಮುಚ್ಚಿ ಕುಳಿತಿದ್ದಾರಾ ಜಿಲ್ಲಾಧಿಕಾರಿಗಳು..? ಅತ್ತ ಜಿಲ್ಲಾ ಉಸ್ತುವಾರಿ ಸಚಿವರು ರೋಡಿಗಳಿಯೋಕೂ ಹಿಂದೇಟು ಹಾಕ್ತಿದ್ರೆ, ಜಿಲ್ಲಾಧಿಕಾರಿಗಳು ಜನರ ದಂಡು ಕಂಡ್ರೂ ಕಣ್ಣುಮುಚ್ಚಿ ಕುಳಿತಿದ್ದಾರಾ ಅನ್ಸುತ್ತೆ. ಯಾಕಂದ್ರೆ, ಪ್ರತಿ ಜಿಲ್ಲೆಗಳಲ್ಲೂ ದಿನಬೆಳಗಾದ್ರೆ ಸಾಕು ಜನ ಸಂತೆಗೆ ಸೇರಿದಂತೆ ಓಡಾಡ್ತಿದ್ದಾರೆ. ಇವ್ರೆಲ್ಲರಿಗೂ ಸೋಂಕು ತಗುಲದಂತೆ ಅಂತರ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳೋಱರು..? ದಿನಸಿ ಖರೀದಿಗೆ ಪ್ರತ್ಯೇಕ ವ್ಯವಸ್ಥೆ ಮಾಡೋಕೆ ಆಗಲ್ವಾ. ಇದನ್ನ ಜಿಲ್ಲಾಧಿಕಾರಿಗಳು ಮಾಡದೇ ಇನ್ಯಾರು ಮಾಡಬೇಕು..?

ಕೊರೊನಾ ವಿರುದ್ಧ ಕೈ ಚೆಲ್ಲಿ ಕುಳಿತರಾ ಪೊಲೀಸರು..? ಹೊಸದ್ರಲ್ಲಿ ಲಾಕ್​ಡೌನ್ ನಿಯಮಕ್ಕೆ ಕಟ್ಟುನಿಟ್ಟಿನ ರೂಲ್ಸ್​ ಮಾಡ್ತಿದ್ದ ಪೊಲೀಸರು, ರಸ್ತೆಗೆ ಇಳಿದವರಿಗೆ ಲಾಠಿ ಬೀಸ್ತಿದ್ದ ಖಾಕಿ ಪಡೆ, ಈಗ ಅದ್ಯಾಕೋ ಕೈ ಚೆಲ್ಲಿ ಕುಳಿತಿದ್ದಾರೆ. ರೆಡ್​ ಜೋನ್​ ಇರ್ಲಿ, ಸೀಲ್​ಡೌನ್​ ಇರ್ಲಿ ಜನ ಡೋಂಟ್​ಕೇರ್ ಅಂಥಾ ರೋಡ್​ನಲ್ಲೇ ಜಾತ್ರೆ ಮಾಡ್ತಿದ್ದಾರೆ.. ಇಂಥಾ ಟೈಮಲ್ಲೂ ಪೊಲೀಸರು ಇವ್ರನ್ನ ನಿಯಂತ್ರಿಸಲು ಉತ್ಸಾಹ ತೋರ್ತಿಲ್ಲ…

ದೇಶದ ಪ್ರಜೆಯಾಗಿ ನಿಮಗೆ ಜವಾಬ್ದಾರಿ ಇಲ್ವಾ..? ಕೊರೊನಾ ವಿರುದ್ಧ ಕೇವಲ ಸರ್ಕಾರ ಮಾತ್ರ ಸಮರ ಸಾರಿದ್ರೆ ಸಾಲಲ್ಲ.. ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು, ಪೊಲೀಸರಿಗಿಂತ ಹೆಚ್ಚಾಗಿ ದೇಶದ ಪ್ರಜೆಯಾಗಿ ಒಬ್ಬೊಬ್ಬರ ಮೇಲೂ ಜವಾಬ್ದಾರಿ ಇದೆ. ಇದನ್ನ ಎಲ್ಲರೂ ಅರಿತು ಕೊಳ್ಳಬೇಕು. ಕ್ಷಣ ಕ್ಷಣಕ್ಕೂ ಸಂಪರ್ಕಕ್ಕೆ ಸಿಗದೇ ಕೊರೊನಾ ಹೀಗೆ ಹರಡ್ತಿದ್ರೆ, ಮುಂದಾಗೋ ಅನಾಹುತಗಳಿಗೆ ಯಾರು ಹೊಣೆ..? ರಾಜ್ಯದ ಜನರೆ ಈಗ್ಲಾದ್ರೂ ಎಚ್ಚೆತ್ತುಕೊಳ್ಳಿ… ಇಲ್ಲದಿದ್ರೆ ಬಾರಿ ಗಂಡಾಂತರಕ್ಕೆ ಕರ್ನಾಟಕವೇ ಬೆಲೆ ತೆರಬೇಕಾಗುತ್ತೆ.

Follow us on

Related Stories

Most Read Stories

Click on your DTH Provider to Add TV9 Kannada