ಯಾದಗಿರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅಪಾರ ಪ್ರಮಾಣದ ಸ್ಫೋಟಕ ಜಪ್ತಿ

ಹಾಲಾಳ ಬಳಿಯಿರುವ ಕಲ್ಲು ಕ್ವಾರಿ ಮೇಲೆ ಪೊಲೀಸರು ದಾಳಿ ನಡೆಸಿ ಕ್ವಾರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಸುಮಾರು 30 ಬಾಕ್ಸ್ ಐಡಿಎಲ್, 80 ಎಂಎಂ ಬೂಸ್ಟರ್, ಸ್ಫೋಟಕ್ಕೆ ಬಳಸುವ 750 ಕೆಜಿ ಬೂಸ್ಟರ್ ಹಾಗೂ ಬೊಲೆರೊವನ್ನು ವಶಪಡಿಸಿಕೊಂಡಿದ್ದಾರೆ.

ಯಾದಗಿರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅಪಾರ ಪ್ರಮಾಣದ ಸ್ಫೋಟಕ ಜಪ್ತಿ
ಕ್ವಾರಿಯಲ್ಲಿದ್ದ ಸ್ಫೋಟಕವನ್ನು ವಶಪಡಿಸಿಕೊಂಡ ಪೊಲೀಸರು
sandhya thejappa

| Edited By: Rashmi Kallakatta

Mar 07, 2021 | 6:34 PM


ಯಾದಗಿರಿ: ಶಿವಮೊಗ್ಗದ ಹುಣಸೋಡಿನಲ್ಲಿ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಜಿಲೆಟಿನ್ ಸ್ಫೋಟ ದುರಂತ ಇಂದಿಗೂ ಮೈ ನಡುಕವನ್ನು ಹೆಚ್ಚಿಸುತ್ತದೆ. ದುರಂತದಲ್ಲಿ ಮೃತಪಟ್ಟವರ ಕುಟುಂಬಗಳು ಅಕ್ಷರಶಃ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಅಕ್ರಮ ಸ್ಫೋಟಕ ವಸ್ತುಗಳ ಸಂಗ್ರಹಕ್ಕೆ ಕಡಿವಾಣ ಹಾಕಲು ಸರ್ಕಾರದಿಂದ ಅನುಮತಿ ಪಡೆದವರು ಮಾತ್ರ ಕಲ್ಲು ಕ್ವಾರಿ ಹಾಗೂ ಗಣಿಗಾರಿಕೆ ಪ್ರದೇಶಗಳಲ್ಲಿ ಜಿಲೆಟಿನ್ ಕಡ್ಡಿಗಳನ್ನು ಬಳಕೆ ಮಾಡುವಂತಹ ಹೊಸ ಕಾನೂನನ್ನು ಜಾರಿ ಮಾಡುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ಹೀಗಿದ್ದು, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹಾಲಾಳ ಬಳಿ ಅಕ್ರಮವಾಗಿ ಸಂಗ್ರಹಿಸಿದ್ದ ಅಪಾರ ಪ್ರಮಾಣದ ಸ್ಫೋಟಕವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಹಾಲಾಳ ಬಳಿಯಿರುವ ಕಲ್ಲು ಕ್ವಾರಿ ಮೇಲೆ ಪೊಲೀಸರು ದಾಳಿ ನಡೆಸಿ ಕ್ವಾರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಸುಮಾರು 30 ಬಾಕ್ಸ್ ಐಡಿಎಲ್, 80 ಎಂಎಂ ಬೂಸ್ಟರ್, ಸ್ಫೋಟಕ್ಕೆ ಬಳಸುವ 750 ಕೆಜಿ ಬೂಸ್ಟರ್ ಹಾಗೂ ಬೊಲೆರೊವನ್ನು ವಶಪಡಿಸಿಕೊಂಡಿದ್ದಾರೆ. ಮುದ್ದೇಬಿಹಾಳ ಮೂಲದ ಶಾಂತಗೌಡ ನಡಹಳ್ಳಿಗೆ ಸೇರಿದ ಕ್ವಾರಿಯಲ್ಲಿ ಅಕ್ರಮವಾಗಿ ಸ್ಫೋಟಕ ಸಂಗ್ರಹವಾಗಿದ್ದು, ಕಲ್ಲು ಕ್ವಾರಿಯಲ್ಲಿದ್ದ ಶಾಂತಯ್ಯ, ನಾಗರಾಜ್, ರಾಜಕುಮಾರ್, ದೊಡ್ಡೇಶ್, ಪ್ರಕಾಶ್ ಎಂಬುವವರನ್ನು ಕಲಬುರಗಿ ಮತ್ತು ಯಾದಗಿರಿ ಐಎಸ್‌ಡಿ ಪೊಲೀಸರು ವಶಕ್ಕೆ ಪಡೆದು  ವಿಚಾರಣೆ ನಡೆಸುತ್ತಿದ್ದಾರೆ.

1 ತಿಂಗಳ ಗಡುವು
ರಾಜ್ಯದ ಎಲ್ಲಾ ಕಲ್ಲು ಕ್ವಾರಿಗಳ ಸರ್ವೆ ಮಾಡಿ ವರದಿ ನೀಡಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಕ್ವಾರಿಯಲ್ಲಿ ಕೈಗೊಳ್ಳುತ್ತಿರುವ ಸುರಕ್ಷತಾ ನಿಯಮಾವಳಿಗಳ ಬಗ್ಗೆ ವರದಿ ನೀಡಲು ಒಂದು ತಿಂಗಳ ಕಾಲ ಅವಕಾಶವನ್ನು ನೀಡಿದೆ.

ಕಲ್ಲು ಕ್ವಾರಿ ಮೇಲೆ ಪೊಲೀಸರ ದಾಳಿ

ಜನರಿಗೆ ತರಬೇತಿ
ರಾಜ್ಯದಲ್ಲಿ ಗಣಿಗಾರಿಕೆ ಶಾಲೆಯನ್ನು ಸ್ಥಾಪಿಸಲು ತೀರ್ಮಾನಿಸಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ಜೊತೆಗೆ ಅಕ್ರಮ ಗಣಿಗಾರಿಕೆ ಚಟುವಟಿಕೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಘಟನೆಯಲ್ಲಿ ಯಾರೇ ಪ್ರಭಾವಿಗಳಿದ್ದರೂ, ಎಷ್ಟೇ ದೊಡ್ಡವರಾಗಿದ್ದರೂ ಸುಮ್ಮನೆ ಬಿಡುವ ಮಾತಿಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಎಲ್ಲಾ ಕಲ್ಲು ಕ್ವಾರಿಗಳ ಸರ್ವೆ ನಡೆಸಿ ವರದಿ ನೀಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ನಂದಿಗಿರಿಧಾಮದ ತಪ್ಪಲಿನಲ್ಲಿ ಅಕ್ರಮ ಕಲ್ಲು ಕ್ವಾರಿ ಬ್ಲಾಸ್ಟಿಂಗ್‌, ರಾಶಿ ರಾಶಿ ಸ್ಫೋಟಕಗಳು ಪತ್ತೆ


ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada