ಆಹಾರ ಇಲಾಖೆ ವೆಬ್​ಸೈಟ್​ ದುರ್ಬಳಕೆ ಪ್ರಕರಣ: ಟಿವಿ9 ವರದಿಯಿಂದ ಎಚ್ಚೆತ್ತ ಆಹಾರ ಇಲಾಖೆ, ಸಮಗ್ರ ತನಿಖೆಗೆ ಆದೇಶ

ನಿರಂತರವಾಗಿ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಜಿಲ್ಲಾಧಿಕಾರಿ ವೆಂಕಟೇಶ್ ಎಡಿಸಿ ರುದ್ರೇಶ್ ನೇತೃತ್ವದ ತನಿಖಾ ತಂಡವನ್ನು ರಚಿಸಿದ್ದಾರೆ. ರಚಿಸಿದ ತಂಡ ಸಮಗ್ರ ತನಿಖೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲು ಆಹಾರ ಇಲಾಖೆ ಆಯುಕ್ತ ಆದೇಶ ನೀಡಿದೆ.

  • TV9 Web Team
  • Published On - 10:30 AM, 6 Mar 2021
ಆಹಾರ ಇಲಾಖೆ ವೆಬ್​ಸೈಟ್​ ದುರ್ಬಳಕೆ ಪ್ರಕರಣ: ಟಿವಿ9 ವರದಿಯಿಂದ ಎಚ್ಚೆತ್ತ ಆಹಾರ ಇಲಾಖೆ, ಸಮಗ್ರ ತನಿಖೆಗೆ ಆದೇಶ
ಆಹಾರ ಇಲಾಖೆಯ ವೆಬ್​ಸೈಟ್​ ಹ್ಯಾಕ್ ಮಾಡಿದವರು

ರಾಯಚೂರು: ಜಿಲ್ಲೆಯಲ್ಲಿ ಆಹಾರ ಇಲಾಖೆಯ ವೆಬ್​ಸೈಟ್ ಹ್ಯಾಕ್ ಮಾಡಿ ಬೆಳಗುರ್ಕಿ ಗ್ರಾಮದ 545 ಜನ ಎಪಿಎಲ್ ಕಾರ್ಡುದಾರರನ್ನ ಬಿಪಿಎಲ್ ಕಾರ್ಡುದಾರರೆಂದು ಆನ್​ಲೈನ್​ನಲ್ಲಿ ಅಪ್ಲೋಡ್ ಮಾಡಿ ಪಡಿತರ ಧಾನ್ಯ ದೋಚುತ್ತಿದ್ದ ಪ್ರಕರಣವನ್ನು ಟಿವಿ9 ಕನ್ನಡ ಡಿಜಿಟಲ್ ವರದಿ ಮಾಡಿತ್ತು. ಟಿವಿ9ನಲ್ಲಿ ವರದಿ ಪ್ರಸಾರವಾದ ಬಳಿಕ ಆಹಾರ ಇಲಾಖೆ ಆಯುಕ್ತ ಸಮಗ್ರ ತನಿಖೆಗೆ ಸೂಚನೆ ನೀಡಿದೆ.

ನಿರಂತರವಾಗಿ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಜಿಲ್ಲಾಧಿಕಾರಿ ವೆಂಕಟೇಶ್ ಎಡಿಸಿ ರುದ್ರೇಶ್ ನೇತೃತ್ವದ ತನಿಖಾ ತಂಡವನ್ನು ರಚಿಸಿದ್ದಾರೆ. ತಂಡವು ಸಮಗ್ರ ತನಿಖೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲು ಆಹಾರ ಇಲಾಖೆ ಆಯುಕ್ತ ಆದೇಶ ನೀಡಿದ್ದಾರೆ.

545 ಎಪಿಲ್ ಕಾರ್ಡುದಾರರನ್ನ ಬಿಪಿಎಲ್ ಕಾರ್ಡುದಾರರಾಗಿ ಅಪ್ಲೋಡ್ ಮಾಡಿ ಪಡಿತರ ಲೂಟಿ ಮಾಡಿದ ಒಟ್ಟು ಐವರ ಆರೋಪಿಗಳ ವಿರುದ್ಧ ಸಿಂಧನೂರ ಠಾಣೆಯಲ್ಲಿ ಈಗಾಗಲೇ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಭಾಗ್ಯಶ್ರೀ, ತಿಮ್ಮಣ್ಣ, ಬಸವರಾಜ ಮತ್ತು ಬಸಪ್ಪ ಸೇರಿ ಒಟ್ಟು ನಾಲ್ವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಅಕ್ರಮದಲ್ಲಿ ಜಿಲ್ಲಾ ಆಹಾರ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಆಹಾರ ಇಲಾಖೆ ವೆಬ್​ಸೈಟ್ ಲಾಗಿನ್ ಮಾಡಿದವರನ್ನ ಕಂಡು ಹಿಡಿಯಲು ಜಿಲ್ಲಾಡಳಿತ ಸಜ್ಜಾಗಿದೆ.

ಪೊಲೀಸ್ ತನಿಖೆಯಿಂದ ಬಯಲು
ಬೆಳಗುರ್ಕಿ ಗ್ರಾಮದ 545 ಜನ ಎಪಿಎಲ್ ಕಾರ್ಡುದಾರರನ್ನ ಬಿಪಿಎಲ್ ಕಾರ್ಡುದಾರರೆಂದು ಇಲಾಖೆಯ ವೆಬ್​ಸೈಟ್​ನಲ್ಲಿ ಅಪ್ಲೋಡ್ ಮಾಡಿ ನಿರಂತರವಾಗಿ ಆಹಾರ ಇಲಾಖೆಯ ಪಡಿತರ ದೋಚುತ್ತಿರುವ ಬಗ್ಗೆ ಪೊಲೀಸರು ನಡೆಸಿರುವ ತನಿಖೆಯಿಂದ ಬಯಲಾಗಿದೆ. ಆದರೆ ಆಹಾರ ಇಲಾಖೆಯಲ್ಲಿ ಇಷ್ಟೆಲ್ಲಾ ಗೋಲ್​ಮಾಲ್ ನಡೆಯುತ್ತಿದ್ದರೂ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬರದೇ ಇರುವುದು ಹತ್ತಾರು ಅನುಮಾನಕ್ಕೆ ಆಸ್ಪದ ನೀಡುತ್ತಿದೆ. ಆಹಾರ ಇಲಾಖೆಯ ಸಿಬ್ಬಂದಿಯ ಸಹಕಾರವಿಲ್ಲದೇ ವೆಬ್​ಸೈಟ್ ಹ್ಯಾಕ್ ಮಾಡಲು ಹೇಗೆ ಸಾಧ್ಯವೆಂಬ ಮಾತುಗಳು ಸಿಂಧನೂರಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ

Food Department website: ಆಹಾರ ಇಲಾಖೆಯ ವೆಬ್​ಸೈಟ್​ ಹ್ಯಾಕ್ ಮಾಡಿ ಪಡಿತರ ಲೂಟಿ; ನಾಲ್ವರು ಜೈಲಿಗೆ

ವಿಶ್ವದ ಸೂತ್ರ ಚೀನಾದ ಕೈಗೆ ಸಿಗಲು ಅವಕಾಶ ಕೊಡಲ್ಲ: ಅಮೆರಿಕ ಅಧ್ಯಕ್ಷ ಜೋ ಬೈಡೆನ್