AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೆಂಗಲ್​ಗೆ ರಾಯಚೂರು ರೈತರು ಕಂಗಾಲ್: ನೆಲಕಚ್ಚಿದ ಭತ್ತ..ಕಟಾವು ಮಷಿನ್ ದರ ದುಪ್ಪಟ್ಟು

ಅಲ್ಲೋಲ ಕಲ್ಲೋಲ ಸೃಷ್ಟಿಸಿರೊ ಫೆಂಗಲ್ ಚಂಡುಮಾರುತಕ್ಕೆ ರಾಯಚೂರು ಜಿಲ್ಲೆ ರೈತರು ಕಂಗಲಾಗಿದ್ದಾರೆ. ಜಿಲ್ಲೆಯಾದ್ಯಂತ ಭಯಂಕರ ತುಫಾನ್​ಗೆ ಅಪಾರ ಪ್ರಮಾಣದ ಭತ್ತ ಹಾನಿಯಾಗಿದ್ರೆ ಮತ್ತೊಂದು ಕಡೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಮಧ್ಯವರ್ತಿಗಳು ಭತ್ತ ಕಟಾವು ಮಷಿನ್ ದರ ದುಪ್ಪಟ್ಟು ಮಾಡಿ ರೈತರಿಗೆ ಗಾಯದ ಮೇಲೆ ಬರೆ ಎಳೆದಿದ್ದಾರೆ.

ಫೆಂಗಲ್​ಗೆ ರಾಯಚೂರು ರೈತರು ಕಂಗಾಲ್: ನೆಲಕಚ್ಚಿದ ಭತ್ತ..ಕಟಾವು ಮಷಿನ್ ದರ ದುಪ್ಪಟ್ಟು
ಭತ್ತ ನೆಲಕಚ್ಚಿರುವುದು
Follow us
ಭೀಮೇಶ್​​ ಪೂಜಾರ್
| Updated By: ರಮೇಶ್ ಬಿ. ಜವಳಗೇರಾ

Updated on: Dec 04, 2024 | 8:02 PM

ರಾಯಚೂರು, (ಡಿಸೆಂಬರ್ 04): ತಮಿಳುನಾಡಿನ ಫೆಂಗಲ್​ ಚಂಡಮಾರುತ ಕರ್ನಾಟಕದ ಮೇಲೂ ಪರಿಣಾಮ ಬೀರಿದ್ದು, ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಅದರಲ್ಲೂ ರಾಯಚೂರು ಜಿಲ್ಲೆಯಲ್ಲೂ ಸಹ ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗಿದೆ. ಹೌದು…ಭತ್ತ ಮಖಾಡೆ ಮಲಗಿದೆ. ಯಾವುದೋ ರೋಲರ್ ರೋಲ್​ ಮಾಡಿಸಿದಂಗತೆ ಭತ್ತದ ಬೆಳೆ ಸಂಪೂರ್ಣವಾಗಿ ನೆಲಸಮವಾಗಿದೆ. ರಾಯಚೂರು ತಾಲ್ಲೂಕಿನ ಕಲ್ಮಲ,ಸಿರವಾರ,ದೇವದುರ್ಗ,ಸಿಂಧನೂರು ಸೇರಿ ಜಿಲ್ಲೆಯಾದ್ಯಂತ ನೂರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಭತ್ತ ಸದ್ಯ ಕಟಾವಿನ ಹಂತಕ್ಕೆ ಬಂದಿದೆ. ಈಗಾಗಲೇ ಜಿಲ್ಲೆಯಾದ್ಯಂತ ಕಟಾವು ಪ್ರಕ್ರಿಯೆ ಸಹ ಶುರುವಾಗಿದೆ. ಆದ್ರೆ, ಇದರ ಮಧ್ಯ ಫೆಂಗಲ್​ ರೈತರ ಖುಷಿಯನ್ನೇ ಕಸಿದುಕೊಂಡಿದೆ.

ರೈತರು ಭತ್ತ ಕಟಾವು ಮಾಡಿ, ರಾಶಿ ಮಾಡಿ ಮಾರಾಟಕ್ಕೆ ಮುಂದಾಗುತ್ತಿದ್ದಾರೆ. ಈ ಮಧ್ಯೆಯೇ ಈಗ ಫೆಂಗಲ್ ಚಂಡಮಾರುತ ರೈತರ ಖುಷಿಯನ್ನೇ ಕೊಂದು ಹಾಕಿದೆ. ಭರ್ಜರಿಯಾಗಿ ಬೆಳೆದಿದ್ದ ಭತ್ತ ಇನ್ನೇನು ಒಂದೇರಡು ದಿನಗಳಲ್ಲಿ ಕಟಾವು ಆಗ್ತಿತ್ತು..ಆದ್ರೆ ತುಫಾನ್​ನಿಂದ ಉಂಟಾಗಿರೊ ಗಾಳಿ, ತುಂತುರು ಮಳೆಗೆ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದೆ.

ಭತ್ತೆ ನೆಲಕಚ್ಚಿದ್ದರಿಂದ ರೈತರು ಕಂಗಾಲಾಗಿದ್ರೆ ಮತ್ತೊಂದು ಕಡೆ ಫೆಂಗಲ್ ಚಂಡಮಾರುತದ ಸಮಸ್ಯೆಯನ್ನೇ ಮಧ್ಯವರ್ತಿಗಳು ಬಂಡವಾಳ ಮಾಡಿಕೊಂಡಿದ್ದಾರೆ.. ಹೇಗಿದ್ದರೂ ರೈತರು ಭತ್ತ ಕಟಾವು ಮಾಡೇ ಮಾಡ್ತಾರೆ ಎಂದು ಭತ್ತ ಕಟಾವು ಮಷಿನ್ ದರವನ್ನ ದುಪ್ಪಟ್ಟು ಮಾಡುವ ಮೂಲಕ ರೈತರ ಗಾಯದ ಮೇಲೆ ಬರೆ ಎಳೆದಿದ್ದಾರೆ.

ಇತ್ತೀಚೆಗೆ ಒಂದು ಗಂಟೆ ಭತ್ತ ಕಟಾವಿಗೆ 1500 ರೂ.ಇತ್ತು. ಆದ್ರೆ ಈಗ 3300 ರೂಪಾಯಿ ಆಗಿದೆ. ಅದರಲ್ಲೂ ಸಾಮಾನ್ಯವಾಗಿ ಒಂದು ಎಕರೆ ಭತ್ತ ಕಟಾವು ಮಾಡಲು ಒಂದುವರೆ ಗಂಟೆ ಆಗುತ್ತಿತ್ತು. ಈಗ ಭತ್ತ ನೆಲಕಚ್ಚಿರುವುದರಿಂದ ಭತ್ತ ಕಟಾವು ಮಾಡಲು ಮೂರು ಗಂಟೆ ಬೇಕು. ಇದರಿಂದ ಬೆಳೆದ ಬೆಳೆಯಿಂದ ಬರುವ ಹಣ ಎಲ್ಲಾ ಭತ್ತ ಕಟಾವು ಮಷಿನ್​ಗೆ ಕೊಡುವ ಸ್ಥಿತಿ ಬಂದಿದೆ. ಇನ್ನು ಭತ್ತ ನೆಲಕಚ್ಚಿರುವುದರಿಂದ ಭತ್ತ ಕಪ್ಪು ಬಣ್ಣಕ್ಕೆ ತಿರುಗುವುದರಿಂದ ಕ್ವಾಲಿಟಿ ಉಳಿಯಲ್ಲ. ಇದನ್ನು ಕಡಿಮೆ ಬೆಲೆಗೆ ಕೇಳುತ್ತಾರೆ. ಹೀಗಾಗಿ ರೈತರು ಕಣ್ಣೀರಿರುವ ಸ್ಥಿತಿ ನಿರ್ಮಾಣವಾಗಿದೆ.

ಇದಷ್ಟೇ ಅಲ್ಲ ಭತ್ತದ ದರ ಕೂಡ ಕುಸಿದಿದೆ. ಭತ್ತ ಖರೀದಿ ಕೇಂದ್ರಗಳಲ್ಲಿ ಭತ್ತದ ದರ ಇತ್ತೀಚೆಗೆ ಕುಸಿದಿದ್ದೂ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಕೂಡಲೇ ಸರ್ಕಾರ, ಜಿಲ್ಲಾಡಳಿತ ರೈತರ ಪಾಲಿಗೆ ಬರಬೇಕಿದೆ.