ರಸ್ತೆ ಪಕ್ಕದಲ್ಲಿದ್ದ ಮನೆ ಮೇಲೆ ಲಾರಿ ಪಲ್ಟಿ, ಇಬ್ಬರ ಸಾವು

  • TV9 Web Team
  • Published On - 10:33 AM, 19 Dec 2019
ರಸ್ತೆ ಪಕ್ಕದಲ್ಲಿದ್ದ ಮನೆ ಮೇಲೆ ಲಾರಿ ಪಲ್ಟಿ, ಇಬ್ಬರ ಸಾವು

ರಾಯಚೂರು: ರಸ್ತೆ ಪಕ್ಕದಲ್ಲಿದ್ದ ಮನೆ ಮೇಲೆ ಲಾರಿ ಪಲ್ಟಿ ಹೊಡೆದು ಮನೆಯಲ್ಲಿದ್ದ ದಂಪತಿ ಮೃತಪಟ್ಟಿರುವ ಘಟನೆ ಸಿಂಧನೂರ ತಾಲೂಕಿನ ಬೂತಲದಿನ್ನಿ ಕ್ರಾಸ್ ಬಳಿ ನಡೆದಿದೆ.
ರಾಜೇಶ್(40), ಜ್ಯೋತಿ(35) ಮೃತಪಟ್ಟಿದ್ದಾರೆ. ಮನೆಯಲ್ಲಿ ಸಿಲುಕಿದ್ದ ದೇವಿಕಾ, ರಾಜು ಎಂಬುವರನ್ನು ಸ್ಥಳೀಯರು ರಕ್ಷಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿದ್ದು, ಲಾರಿ ಚಾಲಕನ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ. ಭತ್ತದ ತುಂಬಿದ್ದ ಲಾರಿ ತನ್ನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕ ಇದ್ದ ಶಡ್ ಮೇಲೆ ಬಿದ್ದಿದೆ. ಬೀಳುತ್ತಿದ್ದಂತೆ ಶಡ್‍ನಲ್ಲಿ ವಾಸಿಸುತ್ತಿದ್ದ ದಂಪತಿ ಮೃತಪಟ್ಟಿದ್ದಾರೆ. ಇನ್ನು ಸಿಂಧನೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.