ರಾಯಚೂರು: ಪ್ರೇಮಿಗಳ ದಿನಾಚರಣೆಗೂ ಮುನ್ನ ಮಂಡ್ಯದ ಕೆ.ಆರ್ ಪೇಟೆಯಲ್ಲಿ ಮಟಮಟ ಮಧ್ಯಾಹ್ನವೇ ಪ್ರೇಮಿಗಳಿಬ್ಬರು ಕಿಸ್ ಮಾಡಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು. ಈ ಘಟನೆ ಬಗ್ಗೆ ಭಾರೀ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಅಲ್ಲದೆ, ಸಾರ್ವಜನಿಕ ಪ್ರದೇಶದಲ್ಲಿ ಈ ರೀತಿ ಮಾಡೋದು ಸರಿಯಲ್ಲ ಎನ್ನುವ ಅಭಿಪ್ರಾಯ ಜನರಿಂದ ವ್ಯಕ್ತವಾಗಿತ್ತು. ಇದಾದ ಬೆನಲ್ಲೇ ಇದೇ ಮಾದರಿಯ ಮತ್ತೊಂದು ಘಟನೆ ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ನಡೆದಿದೆ.
ಸಿಂಧನೂರಿನ ಬಸ್ ನಿಲ್ದಾಣದಲ್ಲಿ ಯುವಕ-ಯುವತಿ ನಿಂತಿದ್ದರು. ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿ ನಿಂತಿದ್ದರು. ಇಷ್ಟೇ ಆಗಿದ್ದರೆ ಯಾರೂ ತಕರಾರು ತೆಗೆಯುತ್ತಿರಲಿಲ್ಲ. ಆದರೆ, ಈ ಜೋಡಿ ಒಂದು ಹೆಜ್ಜೆ ಮುಂದೆ ಹೋಗಿತ್ತು. ಎಲ್ಲರೂ ಇದ್ದಂತೆಯೇ ಒಬ್ಬರನ್ನೊಬ್ಬರು ಚುಂಬಿಸಿಕೊಂಡಿದ್ದರು.
ಬಸ್ ನಿಲ್ದಾಣದಲ್ಲೇ ಜೋಡಿ ಮೈ ಮರೆತಿದೆ. ಸಾರ್ವಜನಿಕರ ಎದುರಲ್ಲೇ ಜೋಡಿ ಚುಂಬಿಸಿದೆ. ಅಕ್ಕಪಕ್ಕದಲ್ಲಿ ಹಿರಿಯರು-ಸಣ್ಣ ಮಕ್ಕಳು ಇದ್ದರೂ ಗಮನಿಸದೇ ಜೋಡಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಮಂಡ್ಯದಲ್ಲಿ ಏನಾಗಿತ್ತು?
ಅದು ವ್ಯಾಂಲೆಂಟೈನ್ಸ್ ಡೇ ಸಮಯ. ಆಗ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಯುವ ಜೋಡಿಯೊಂದು ಬಸ್ ನಿಲ್ದಾಣಕ್ಕೆ ಬಂದು ನಿಂತಿತ್ತು. ಬಸ್ ಹಿಂಭಾಗಕ್ಕೆ ತೆರಳಿದ ಹುಡುಗ-ಹುಡುಗಿ ಪರಸ್ಪರ ಮುತ್ತಿಕ್ಕಲು ಪ್ರಾರಂಭಿಸಿದ್ದವು. ಸುತ್ತಮುತ್ತ ಜನರು ಓಡಾಡುವುದನ್ನು ನೋಡಿಯೂ ಈ ಜೋಡಿ ಮೈ ಮರೆತು ತಮ್ಮ ಕಾರ್ಯವನ್ನು ಮುಂದುವರಿಸಿತ್ತು. ಹಾಡಹಗಲೇ ಸಾರ್ವಜನಿಕ ಪ್ರದೇಶದಲ್ಲಿ ಯುವ ಜೋಡಿಯ ಚುಂಬನ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಾರ್ವಜನಿಕ ಪ್ರದೇಶದಲ್ಲಿ ಯುವ ಜೋಡಿಯ ಅಶ್ಲೀಲ ವರ್ತನೆ ಈಗ ಆಕ್ರೋಶ ವ್ಯಕ್ತವಾಗಿತ್ತು.
ಕೆ.ಆರ್. ಪೇಟೆ ಬಸ್ ನಿಲ್ದಾಣದಲ್ಲಿ ಮೈ ಮರೆತು ಚುಂಬಿಸಿದ ಯುವ ಜೋಡಿ.. ವಿಡಿಯೋ ಇದೆ ನೋಡಿ