ರಾಯಚೂರಿನಲ್ಲಿ ಬರಗಾಲದ ಛಾಯೆ, ಬೆಳೆ ರಕ್ಷಣೆಗಾಗಿ ಹೊಸ ಪ್ರಯೋಗ ಕಂಡುಕೊಂಡ ರೈತ
ಕರ್ನಾಟಕದಲ್ಲಿ ಈ ಬಾರಿ ಮಳೆ ಅಭಾವ ಹೆಚ್ಚಿದೆ. ಕೆಲವೊಂದು ಜಿಲ್ಲೆಗಳಲ್ಲಿ ಬರಗಾಲದ ಪರಿಸ್ಥಿತಿ ತಲೆದೋರಿದೆ. ಈ ಪೈಕಿ ರಾಯಚೂರು ಜಿಲ್ಲೆಯೂ ಒಂದು. ಸದ್ಯ ಮಳೆ ಬರುವ ನಿರೀಕ್ಷೆಯಿಂದ ಬಿತ್ತನೆ ಮಾಡಿದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಬಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದ್ದು, ಬೆಳೆಗೆ ಕೃತಕವಾಗಿ ನೀರು ಹಾಯಿಸುತ್ತಿದ್ದಾರೆ.
ರಾಯಚೂರು, ಆಗಸ್ಟ್ 31: ಕರ್ನಾಟಕದಲ್ಲಿ ಈ ಬಾರಿ ಮಳೆ (Karnataka Rain) ಅಭಾವ ಹೆಚ್ಚಿದೆ. ಕೆಲವೊಂದು ಜಿಲ್ಲೆಗಳಲ್ಲಿ ಬರಗಾಲದ ಪರಿಸ್ಥಿತಿ ತಲೆದೋರಿದೆ. ಈ ಪೈಕಿ ರಾಯಚೂರು (Raichur) ಜಿಲ್ಲೆಯೂ ಒಂದು. ಮುಂಗಾರು ಮಳೆ ನಂಬಿಕೊಂಡು ಬಿತ್ತನೆ ಮಾಡಿದ ಜಿಲ್ಲೆಯ ರೈತರು ಇದೀಗ ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಸೃಷ್ಟಿಯಾದ ಬರಗಾಲದ ಛಾಯೆ ಮೂಡಿದೆ. ಪರಿಣಾಮ ಮುಂಗಾರು ಮಳೆ ನಂಬಿಕೊಂಡು ಬಿತ್ತನೆ ಮಾಡಿದ್ದ ರೈತರು ಇದೀಗ ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಕೃತಕವಾಗಿ ನೀರು ಹಾಯಿಸುತ್ತಿದ್ದಾರೆ. ಒಂದು ಹತ್ತಿ ಗಿಡಕ್ಕೆ ಅರ್ಧ ತಂಬಿಗೆ ನೀರು ಉಣಿಸುತ್ತಿದ್ದು, ಇಡೀ 15 ಎಕರೆ ಹತ್ತಿ ಬೆಳೆಗೆ ಪ್ಲಾಸ್ಟಿಕ್ ಲೋಟದ ಮೂಲಕ ನೀರು ಸಿಂಪಡಣೆ ಮಾಡಲಾಗುತ್ತಿದೆ. ಈ ಒಂದು ಹೊಸ ಪ್ರಯೋಗ ಕಲ್ಮಲಾ ಗ್ರಾಮದ ಸುತ್ತಲಿನ ಜಮೀನಿನಲ್ಲಿ ನಡೆಸಲಾಗುತ್ತಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಬರಗಾಲಕ್ಕೆ ಮೊದಲ ಬಲಿ, ಬೆಳೆ ನಾಶದಿಂದ ಕಂಗೆಟ್ಟ ರೈತ ಆತ್ಮಹತ್ಯೆ
ಲಕ್ಷಾಂತರ ರೂಪಾಯಿ ಖರ್ಚು ಮಾಡಿ 15 ದಿನಗಳ ಹಿಂದೆ ಹತ್ತಿ ಬಿತ್ತನೆ ಮಾಡಿದ್ದ ರೈತ ಸಿದ್ದಾರೆಡ್ಡಿ, ಗ್ರಾಮದಿಂಲೇ ನೀರು ತಂದು ಬೆಳೆಗೆ ನೀರು ಹರಿಸುತ್ತಿದ್ದಾರೆ. ಸದ್ಯ ಹತ್ತಿ ಬೀಜಗಳು ಮೊಳಕೆ ಒಡೆದಿವೆ. ಆದರೆ ಮಳೆ ಇಲ್ಲದ ಕಾರಣ ಮೊಳಕೆಗಳು ಒಣಗಲು ಆರಂಭವಾಗಿದೆ. ಇದನ್ನ ರಕ್ಷಿಸಲು 10-15 ಕಾರ್ಮಿಕರ ಮೂಲಕ ನೀರು ಉಣಿಸುತ್ತಿದ್ದಾರೆ.
ಲೋಟದ ಮೂಲಕ ನೀರು ಹರಿಸಿ ಬೆಳೆ ರಕ್ಷಣೆ
ಲೋಟದ ಮೂಲಕ ನೀರು ಹರಿಸುವುದು ಮೊದಲ ಪ್ರಯೋಗವಾಗಿದೆ. ಮಳೆ ಅಭಾವ ಹಿನ್ನೆಲೆ ರೈತರು 1000 ರೂ. ನೀಡಿ ಒಂದು ಟ್ಯಾಂಕರ್ ನೀರಿಗೆ ತಂದು 10-15 ಆಳುಗಳಿಗೆ ತಲಾ 400 ರೂ. ಕೂಲಿ ಕೊಟ್ಟು ಬೆಳೆಗಳಿಗೆ ಲೋಟದ ಮೂಲಕ ನೀರು ಸಿಂಪಡಣೆ ಮಾಡುತ್ತಿದ್ದಾರೆ.
ಹೀಗೆ ಎಕರೆ ಹೊಲಕ್ಕೆ ನೀರುಣಿಸಲು ನಾಲ್ಕೈದು ಸಾವಿರ ಹೆಚ್ಚುವರಿ ಖರ್ಚು ಮಾಡುತ್ತಿರುವ ರೈತರಿಗೆ ಬೆಳೆ ಉಳಿಯುತ್ತೇ ಅನ್ನೋ ನಂಬಿಕೆಯಿಲ್ಲ. ಆದರೂ ಒಂದು ಪ್ರಯತ್ನ ಮಾಡುತ್ತಿದ್ದೇವೆ ಅಂತ ರೈತ ಸಿದ್ದಾರೆಡ್ಡಿ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ