ನಗರಸಭೆ ಅರಾಜಕತೆ, ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆ ಸ್ಥಳಾಂತರ ವಿರೋಧಿಸಿ ಇಂದು ರಾಮನಗರ ಬಂದ್

ಜಿಲ್ಲೆಯ ನಗರಸಭೆ ಅರಾಜಕತೆ ಹಾಗೂ ರಾಮನಗರದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆ ಸ್ಥಳಾಂತರ ವಿರೋಧಿಸಿ ಇಂದು ರಾಮನಗರ ನಗರ ಬಂದ್​ಗೆ ಕರೆ ನೀಡಲಾಗಗಿದೆ.

  • TV9 Web Team
  • Published On - 9:15 AM, 20 Feb 2021
ನಗರಸಭೆ ಅರಾಜಕತೆ, ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆ ಸ್ಥಳಾಂತರ ವಿರೋಧಿಸಿ ಇಂದು ರಾಮನಗರ ಬಂದ್
ರಾಮನಗರ ಬಂದ್​

ರಾಮನಗರ: ಜಿಲ್ಲೆಯ ನಗರಸಭೆ ಅರಾಜಕತೆ ಹಾಗೂ ರಾಮನಗರದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆ ಸ್ಥಳಾಂತರ ವಿರೋಧಿಸಿ ಇಂದು ರಾಮನಗರ ನಗರ ಬಂದ್​ಗೆ ಕರೆ ನೀಡಲಾಗಗಿದೆ. ಜಾನ ಜಾಗೃತಿ ವೇದಿಕೆವತಿಯಿಂದ ಬಂದ್​ಗೆ ಕರೆ ನೀಡಲಾಗಿದ್ದು, ಬಂದ್ ಹಿನ್ನೆಲೆಯಿಂದಾಗಿ ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಮುಚ್ಚಿವೆ.

ವ್ಯಾಪರಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನ ಬಂದ್ ಮಾಡಿದ್ದಾರೆ. ಬಂದ್ ಹಿನ್ನೆಲೆಯಿಂದಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈಗಾಗಲೇ ನಗರಸಭಾ ವ್ಯಾಪ್ತಿಯಲ್ಲಿ ನಿಷೇಧಾಜ್ಷೆ ಜಾರಿಯಾಗಿದೆ. ಅಲ್ಲದೆ ಬಂದ್​ಗೆ ಮಾಜಿ ಸಿಎಂ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ರಾಮನಗರ ನಗರ ಬಂದ್ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ನಗರದಾದ್ಯಂತ ಬೈಕ್ ರ್ಯಾಲಿ‌ ನಡೆಸಿ ಬಂದ್​ಗೆ ಬೆಂಬಲ ವ್ಯಕ್ತಪಡಿಸುವಂತೆ ಮನವಿ ಮಾಡಲಾಗಿತ್ತು.