ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಲೇಡಿಯ ಬೆನ್ನಟ್ಟಿದ ಪೊಲೀಸರಿಗೆ ಸಿಕ್ತಾ ಮಹತ್ತರ ಸುಳಿವು?
ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದಲ್ಲಿ ವಿಡಿಯೋದಲ್ಲಿರುವ ಲೇಡಿಯ ಬೆನ್ನಟ್ಟಿದ ಪೊಲೀಸರಿಗೆ ಬಹಳಷ್ಟು ಸವಾಲುಗಳು ಎದುರಾಗುತ್ತಿದೆ. ಸದ್ಯ, ಸಂತ್ರಸ್ತೆಗಾಗಿ ತಲಾಶ್ ನಡೆಸುತ್ತಿರುವ ಪೊಲೀಸರಿಗೆ ಆಕೆ ಪಿಜಿ ಬದಲು ಮನೆಯೊಂದರಲ್ಲಿ ವಾಸವಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದಲ್ಲಿ ವಿಡಿಯೋದಲ್ಲಿರುವ ಲೇಡಿಯ ಬೆನ್ನಟ್ಟಿದ ಪೊಲೀಸರಿಗೆ ಬಹಳಷ್ಟು ಸವಾಲುಗಳು ಎದುರಾಗುತ್ತಿದೆ. ಸದ್ಯ, ಸಂತ್ರಸ್ತೆಗಾಗಿ ತಲಾಶ್ ನಡೆಸುತ್ತಿರುವ ಪೊಲೀಸರಿಗೆ ಆಕೆ ಪಿಜಿ ಬದಲು ಮನೆಯೊಂದರಲ್ಲಿ ವಾಸವಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ 3 ವರ್ಷದಿಂದ R.T.ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಸಂತ್ರಸ್ತೆ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದರು ಎಂಬ ಮಾಹಿತಿ ಸಹ ಪೊಲೀಸರಿಗೆ ದೊರೆತಿದೆ. ಸಿಡಿಯಲ್ಲಿರುವ ಲೇಡಿ ಹೆಬ್ಬಾಳದ ಬಳಿಯಿರುವ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದರು ಎಂದು ಹೇಳಲಾಗಿದೆ.
ಮಾ. 1ರವರೆಗೂ ಬಾಡಿಗೆ ಮನೆಯಲ್ಲೇ ವಾಸವಿದ್ದ ಸಂತ್ರಸ್ತೆ ಬಳಿಕ ಸಿಡಿ ಬಹಿರಂಗವಾಗುತ್ತಿದ್ದಂತೆ ತಲೆಮರೆಸಿಕೊಂಡರಾ ಎಂಬ ಗುಮಾನಿ ಹುಟ್ಟಿದೆ. ವಿಡಿಯೋ ಜೊತೆ ಸಂತ್ರಸ್ತೆಯ ಫೋಟೋ ಸಹ ವೈರಲ್ ಆದಾಗಿನಿಂದ ಆಕೆ ನಾಪತ್ತೆಯಾಗಿದ್ದಾರಾ ಎಂಬ ಅನುಮಾನ ಹುಟ್ಟಿದೆ.
ಸದ್ಯ, ಸಿಡಿಯಲ್ಲಿದ್ದ ಲೇಡಿಯ ಫೋಟೋ ವೈರಲ್ ಆದಾಗಿಂದ ಆಕೆ ಕಾಣಿಸಿಲ್ಲ ಎಂದು ಸಂತ್ರಸ್ತೆ ಇದ್ದ ಮನೆಯ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರಂತೆ. ಹೀಗಾಗಿ, ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸ್ತಿದ್ದಾರೆ.
ಅಂದ ಹಾಗೆ, ಈ ಹಿಂದೆ, ವಿಡಿಯೋದಲ್ಲಿದ್ದ ಸಂತ್ರಸ್ತೆ R.T.ನಗರ ವ್ಯಾಪ್ತಿಯ ಪಿ.ಜಿಯಲ್ಲಿ ನೆಲೆಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ಈ ಬಗ್ಗೆ ಉಲ್ಲೇಖವಾದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು R.T.ನಗರದ ವ್ಯಾಪ್ತಿಯಲ್ಲಿರುವ 45 ಪಿ.ಜಿ.ಗಳಲ್ಲಿ ಹುಡುಕಾಟ ನಡೆಸಿ ಪರಿಶೀಲನೆ ಮಾಡಿದ್ರು. ಕಬ್ಬನ್ ಪಾರ್ಕ್ ಮತ್ತು R.T.ನಗರ ಠಾಣಾ ಪೊಲೀಸರಿಂದ ಪರಿಶೀಲನೆ ನಡೆಸಲಾಗಿತ್ತು.
ಪೊಲೀಸರು ಪಿಜಿಯಲ್ಲಿದ್ದವರ ID ಕಾರ್ಡ್ ಮತ್ತು ದಾಖಲೆಗಳ ಪರಿಶೀಲನೆ ನಡೆಸಿದ್ದರು. ಆದರೆ, ಪಿ.ಜಿ. ರಿಜಿಸ್ಟರ್ ಹಾಗೂ ಲೆಡ್ಜರ್ ಪುಸ್ತಕಗಳ ಪರಿಶೀಲನೆ ವೇಳೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಟಿವಿ9ಗೆ ಉನ್ನತ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಪೊಲೀಸರ ಪರಿಶೀಲನೆ ವೇಳೆ ಯಾವುದೇ ದಾಖಲೆ ಸಿಕ್ಕಿಲ್ಲ ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ನನ್ನ ಬಳಿ 19 ಸಿಡಿಗಳಿವೆ ಎಂದಿದ್ದ ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿಗೆ ನೋಟಿಸ್ ಜಾರಿ