ಕರ್ನಾಟಕದ ಪಟ್ಟದಕಲ್ಲಿನಲ್ಲಿದೆ ನೂತನ ಸಂಸತ್ ಭವನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಸೆಂಗೋಲ್ ಪ್ರತಿರೂಪದ ಕಲಾಕೃತಿ
ನೂತನ ಸಂಸತ್ ಭವನ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಸದ್ಯ ಸಂಸತ್ ಭವನದ ಆಕರ್ಷಣಾ ಕೇಂದ್ರ ಬಿಂದುವಾಗಿರುವ (ರಾಜದಂಡ) ಸೆಂಗೋಲ್ ಪ್ರತಿಷ್ಠಾಪನೆ ಇಡೀ ದೇಶದ ಗಮನ ಸೆಳೆದಿದೆ. ಹಾಗೆಯೇ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ವಿಶೇಷ ಅಂದ್ರೆ, ಸೆಂಗೋಲ್ ಪ್ರತಿರೂಪ ಒಂದು ಬಾಗಲಕೋಟೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಹಾಗಾದ್ರೆ (ರಾಜದಂಡ) ಸೆಂಗೋಲ್ ಎಂದರೇನು? ಬಾಗಲಕೋಟೆ ಜಿಲ್ಲೆಗೂ ಅದಕ್ಕೂ ಏನು ಸಂಬಂಧ ಇಲ್ಲಿದೆ ನೋಡಿ ಡಿಟೇಲ್ಸ್.
ಬಾಗಲಕೋಟೆ: ವಿಶ್ವಪಾರಂಪರಿಕ ತಾಣಗಳಲ್ಲಿ ಒಂದಾದ ಪಟ್ಟದಕಲ್ಲು, ಕಲೆ ಮತ್ತು ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಚಾಲುಕ್ಯರ ಆಳ್ವಿಕೆಯ ಕಾಲದಲ್ಲಿ ಉಚ್ಛಾಯ ಸ್ಥಿತಿಯಲ್ಲಿತ್ತು ಎಂಬುದಕ್ಕೆ ಇಲ್ಲಿ ಕೆತ್ತನೆಯಾದ ಕಲಾಕೃತಿಗಳೇ ಸಾಕ್ಷಿ. 7ನೇ ಶತಮಾನದಲ್ಲಿ ನಿರ್ಮಾಣವಾದ ಕಲಾಕೃತಿಗಳಲ್ಲಿ ಒಂದಾದ ಒಂದು ಕಲಾಕೃತಿ ಸದ್ಯ ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಇಂದು(ಮೇ.28) ದೆಹಲಿಯಲ್ಲಿ ಪ್ರಧಾನಿ ಮೋದಿ((Narendra Modi)ಯವರಿಂದ ನೂತನ ಸಂಸತ್ ಭವನ(Parliament Building) ಉದ್ಘಾಟನೆಗೊಳ್ಳಲಿದೆ. ಈ ಸಂಸತ್ ಭವನದಲ್ಲಿ ಪ್ರತಿಷ್ಠಾಪಿಸಲ್ಪಡುತ್ತಿರುವ ರಾಜದಂಡ (ಸೆಂಗೋಲ್) ಸದ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಆದರೆ, ಇದೆಲ್ಲದರ ಮಧ್ಯೆ ಈ ಸೆಂಗೋಲ್ ನಂಟು ಬಾಗಲಕೋಟೆ ಜಿಲ್ಲೆಗೆ ವ್ಯಾಪಿಸಿದೆ. ಹೌದು ಬಾದಾಮಿ ತಾಲೂಕಿನ ಪಟ್ಟದಕಲ್ಲು ಗ್ರಾಮದ ವಿರೂಪಾಕ್ಷ ದೇವಾಲಯದ ಬಲ ಗೋಡೆಯ ಮೇಲೆ ಇದೇ (ರಾಜದಂಡ) ಸೆಂಗೋಲ್ ಪ್ರತಿರೂಪದ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನು ನೋಡೋದಕ್ಕೆ ಇದೀಗ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಹರಿದು ಬರುತ್ತಿದ್ದಾರೆ.
ವಿರೂಪಾಕ್ಷ ದೇವಾಲಯದ ಬಲ ಗೋಡೆಯ ಮೇಲೆ ಕಲಾವಿದನಿಂದ ಕೆತ್ತಲ್ಪಟ್ಟ ಶಿವನ ಎಡಗೈಯಲ್ಲಿನ (ರಾಜದಂಡ) ಸೆಂಗೋಲ್ಗೆ ಸಾಮ್ಯತೆ ಹೊಂದಿದೆ. ಕಲಾಕೃತಿಯಲ್ಲಿ ನಾಟ್ಯರೂಪದ ಚತುರ್ಭುಜದ ಶಿವನ ಎಡಗೈನಲ್ಲಿ ಸೆಂಗೋಲ್ ಕಾಣಿಸುತ್ತಿದೆ. (ರಾಜದಂಡ) ಸೆಂಗೋಲ್ ಮೇಲೆ ನಂದಿಯ ಕೆತ್ತನೆಯಾಗಿದೆ. ಅಜ್ಞಾನದ ಸಂಕೇತವಾಗಿರುವ ಅಪಸ್ಮಾರ ಮೂರ್ತಿಯನ್ನ ನಾಶಪಡಿಸಿ, ದುಷ್ಟಶಕ್ತಿಯನ್ನ ಕಾಲಿನಿಂದ ನಿರ್ನಾಮ ಮಾಡುವ ರೂಪದಲ್ಲಿ ಶಿವನ ಮೂರ್ತಿಯಲ್ಲಿ ಕಲಾಕೃತಿ ಕೆತ್ತನೆಯಾಗಿದೆ.
ಇದನ್ನೂ ಓದಿ:New Parliament Inauguration Live: ನೂತನ ಸಂಸತ್ ಭವನ ಲೋಕಾರ್ಪಣೆ; ವಿವಿಧ ಧರ್ಮದ ಮುಖಂಡರಿಂದ ಪ್ರಾರ್ಥನೆ ಆರಂಭ
ಚಾಲುಕ್ಯರ ಅರಸ ಎರಡನೇ ವಿಕ್ರಮಾದಿತ್ಯನ ಕಾಲದಲ್ಲಿ ಕಟ್ಟಿಸಲಾಗಿದೆ. ಕಂಚಿಯ ಪಲ್ಲವರ ಜೊತೆ ಯುದ್ದ ಗೆದ್ದ ನೆನಪಿಗಾಗಿ 2 ನೇ ವಿಕ್ರಮಾದಿತ್ಯನ ಮಹಾರಾಣಿ ಲೋಕಮಹಾದೇವಿ ಈ ವಿರೂಪಾಕ್ಷ ದೇವಾಲಯ ಕಟ್ಟಿಸಿದ್ದು, ದೇವಾಲಯದಲ್ಲಿ ಈ ಕಲಾಕೃತಿ ಕಂಡು ಬಂದಿದೆ. ಈ ಒಂದು ರಾಜದಂಡಕ್ಕೆ ನಂದಿಧ್ವಜ ಅಂತಲೂ ಕರೆಯುತ್ತಾರೆ. ಸೆಂಗೋಲ್ 7ನೇ ಶತಮಾನದಲ್ಲಿ ಚಾಲನೆಯಲ್ಲಿತ್ತು ಅನ್ನೋದಕ್ಕೆ ಇದು ಸಾಕ್ಷಿಯಾಗಿದೆ. ಸಂಸತ್ ನೂತನ ಭವನದ ರಾಜದಂಡ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಅದರ ರೂಪ ಚಾಲುಕ್ಯರ ರಾಜದಂಡಕ್ಕೆ ಸಾಮ್ಯತೆಯಿದ್ದು, ಸ್ಥಳೀಯರಿಗೆ ಹೆಮ್ಮೆಯ ಗರಿ ಮೂಡಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ