ಭಾರತ್ ಬಂದ್​: ಹೃದಯಾಘಾತದಿಂದ ಕರ್ತವ್ಯನಿರತ ಮುಖ್ಯಪೇದೆ ಸಾವು

ಭಾರತ್ ಬಂದ್​: ಹೃದಯಾಘಾತದಿಂದ ಕರ್ತವ್ಯನಿರತ ಮುಖ್ಯಪೇದೆ ಸಾವು

ಶಿವಮೊಗ್ಗ: ಭಾರತ್ ಬಂದ್​ನ ಬಂದೋಬಸ್ತ್​ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಗ್ರಾಮದಲ್ಲಿ ನಡೆದಿದೆ. ಹೊಳೆಹೊನ್ನೂರು ಠಾಣೆಯ ಮುಖ್ಯಪೇದೆ ರವಿ ಶೇಟ್ ಮೃತ ದುರ್ದೈವಿ. ಇಂದು ಕಾರ್ಮಿಕರ ಮುಷ್ಕರ ಹಿನ್ನೆಲೆಯಲ್ಲಿ ಬಂದೋಬಸ್ತ್​ಗೆ ನಿಯೋಜನೆ ಮಾಡಲಾಗಿತ್ತು. ಕರ್ತವ್ಯ ನಿರ್ವಹಣೆ ವೇಳೆ ರವಿ ಶೇಟ್​ಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಮುಖ್ಯಪೇದೆ ರವಿ ಶೇಟ್ ಮೃತಪಟ್ಟಿದ್ದಾರೆ.

sadhu srinath

|

Jan 08, 2020 | 6:41 PM

ಶಿವಮೊಗ್ಗ: ಭಾರತ್ ಬಂದ್​ನ ಬಂದೋಬಸ್ತ್​ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಗ್ರಾಮದಲ್ಲಿ ನಡೆದಿದೆ. ಹೊಳೆಹೊನ್ನೂರು ಠಾಣೆಯ ಮುಖ್ಯಪೇದೆ ರವಿ ಶೇಟ್ ಮೃತ ದುರ್ದೈವಿ.

ಇಂದು ಕಾರ್ಮಿಕರ ಮುಷ್ಕರ ಹಿನ್ನೆಲೆಯಲ್ಲಿ ಬಂದೋಬಸ್ತ್​ಗೆ ನಿಯೋಜನೆ ಮಾಡಲಾಗಿತ್ತು. ಕರ್ತವ್ಯ ನಿರ್ವಹಣೆ ವೇಳೆ ರವಿ ಶೇಟ್​ಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಮುಖ್ಯಪೇದೆ ರವಿ ಶೇಟ್ ಮೃತಪಟ್ಟಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada