ಶಿವಮೊಗ್ಗ ವೀರಶೈವ ವಿದ್ಯಾರ್ಥಿ ನಿಲಯಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಬಿ.ಎಸ್​. ಯಡಿಯೂರಪ್ಪ

ಜಿಲ್ಲೆಯ ವೀರಶೈವ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಭೂಮಿ ಪೂಜೆಯನ್ನು ಇಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನೆರವೇರಿಸಿದ್ದಾರೆ.

  • TV9 Web Team
  • Published On - 17:10 PM, 1 Mar 2021
ಶಿವಮೊಗ್ಗ ವೀರಶೈವ ವಿದ್ಯಾರ್ಥಿ ನಿಲಯಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಬಿ.ಎಸ್​. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ

ಶಿವಮೊಗ್ಗ: ಜಿಲ್ಲೆಯ ವೀರಶೈವ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಭೂಮಿ ಪೂಜೆಯನ್ನು ಇಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನೆರವೇರಿಸಿದ್ದಾರೆ. ವಿದ್ಯಾರ್ಥಿ ನಿಲಯಕ್ಕೆ 5 ಕೋಟಿ ರೂಪಾಯಿ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಬಡ ಮಕ್ಕಳಿಗೆ ಉಚಿತ ವಸತಿ, ಶಿಕ್ಷಣ ಸಿಗಬೇಕು ಎಂದು ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮದ ವೇಳೆ ಬಿ.ಎಸ್​ ಯಡಿಯೂರಪ್ಪನವರಿಗೆ ಬೆಕ್ಕಿನ ಕಲ್ಮಠದ ಮುರುಘರಾಜೇಂದ್ರ ಶ್ರೀಗಳು, ಎಂಎಲ್​ಸಿ ರುದ್ರೇಗೌಡ, ಸೂಡಾದ ಅಧ್ಯಕ್ಷ ಜ್ಯೋತಿ ಪ್ರಕಾಶ್, ರಾಜ್ಯ ನೌಕರ ಸಂಘದ ರಾಜ್ಯಾಧ್ಯಕ್ಷರು ಸಾಥ್​ ನೀಡಿದ್ದಾರೆ.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ಎನ್ ಡಿವಿ ಹಾಸ್ಟೆಲ್​​ಗೆ ದೊಡ್ಡ ಇತಿಹಾಸ ಇದೆ. ಸಾವಿರಾರು ಬಡ ಮಕ್ಕಳು ಹಾಸ್ಟೆಲ್​​​ನಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಉತ್ತಮ ಹಾಸ್ಟೆಲ್​​ ನಿರ್ಮಾಣವಾಗಿ ಬಡ ಮಕ್ಕಳಿಗೆ ಅನುಕೂಲ ಆಗಲಿದೆ. ಈ ಪರಂಪರೆ ಇದೇ ರೀತಿ ಮುಂದುವರೆದು ಬಡ ಮಕ್ಕಳಿಗೆ ಉಚಿತ ವಸತಿ ಶಿಕ್ಷಣ ಸಿಗಬೇಕು ಎಂದು ಮಾತನಾಡಿದರು.

ಈ ಕುರಿತಂತೆ ಮಾತನಾಡುತ್ತಿದ್ದ ಅವರು, ಪ್ರಧಾನಿ ನರೇಂದ್ರ ಮೋದಿ ಕೊವಿಡ್ ಲಸಿಕೆ ಪಡೆದಿದ್ದಾರೆ. ನಾನು ಕೂಡ ಕೊವಿಡ್ ಲಸಿಕೆಯನ್ನು ತೆಗೆದುಕೊಳ್ಳುತ್ತೇನೆ. ಪ್ರತಿಯೊಬ್ಬ ನಾಗರಿಕನೂ ಕೊವಿಡ್ ಲಸಿಕೆ ಪಡೆಯಬೇಕು. 60 ವರ್ಷ ಮೇಲ್ಪಟ್ಟವರು ಲಸಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ತರುವಾಯ, 8ನೇ ತಾರೀಖಿನಂದು ಬಜೆಟ್ ಮಂಡಿಸುತ್ತೇವೆ. ಯಾವುದಕ್ಕೂ ಕೊರತೆ ಆಗದ ರೀತಿಯಲ್ಲಿ ಒಳ್ಳೆಯ ಬಜೆಟ್ ಕೊಡುವ ಬಗ್ಗೆ ಪ್ರಯತ್ನ ಮಾಡುತ್ತಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಬಿಎಸ್​ವೈ

ಇದನ್ನೂ ಓದಿ: ಬೆಂಗಳೂರಿಗೆ ಬಿಎಸ್​ವೈ ಭರ್ಜರಿ ಕೊಡುಗೆ