ಹಚ್ಚ ಹಸಿರಿನ ವನಸಿರಿ ನಡುವೆ ಇಬ್ಬನಿಯಾಟ.. ಶಿವಮೊಗ್ಗದ ವಾತಾವರಣಕ್ಕೆ ಜನ ಫುಲ್ ಫಿದಾ

ಮಲೆನಾಡು ಅಂದ್ರೆ ಸಾಕು ಅದೊಂದು ಭೂಲೋಕದ ಸ್ವರ್ಗ. ಎಲ್ಲಿನೋಡಿದ್ರೂ ಹಚ್ಚ ಹಸಿರು. ತುಂಬಿ ತುಳುಕುವ ನದಿ, ಹೊಳೆ, ಹಳ್ಳ ಕೆರೆಗಳು. ಎಲ್ಲಿ ನೋಡಿದ್ರೂ ದಟ್ಟವಾದ ಕಾಡು. ಇಂತಹ ಸೌಂದರ್ಯಕ್ಕೆ ಇಬ್ಬನಿಯಾಟ ಮತ್ತಷ್ಟು ಮೆರಗು ನೀಡಿದೆ.

  • TV9 Web Team
  • Published On - 16:14 PM, 9 Mar 2021
ಹಚ್ಚ ಹಸಿರಿನ ವನಸಿರಿ ನಡುವೆ ಇಬ್ಬನಿಯಾಟ.. ಶಿವಮೊಗ್ಗದ ವಾತಾವರಣಕ್ಕೆ ಜನ ಫುಲ್ ಫಿದಾ
ಶಿವಮೊಗ್ಗದ ವಾತಾವರಣಕ್ಕೆ ಜನ ಫಿದಾ

ಶಿವಮೊಗ್ಗ: ನಗರದ ಮಧ್ಯ ಭಾಗದಲ್ಲಿ ಹರಿದು ಹೋಗುವ ತುಂಗೆ.. ಕಣ್ಣು ಹಾಯಿಸಿದ ಕಡೆಯಲ್ಲ ಹಚ್ಚ ಹಸಿರಿನ ಗಿಡ ಮರಗಳು.. ಕಿವಿಗೆ ಇಂಪು ನೀಡುತ್ತಿರುವ ಹಕ್ಕಿಗಳ ಚಿಲಿಪಿಲಿ ಸದ್ದು.. ಗಿಡ, ಮರ ನೀರು, ಕಟ್ಟಡಗಳಿಗೆ ಚುಂಬಿಸುತ್ತಿರುವ ಇಬ್ಬನಿ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಇಂತಹ ಸುಂದರ ದೃಶ್ಯಗಳು ಕಾಣ ಸಿಗುತ್ತವೆ. ಚುಮು ಚುಮು ಚಳಿಗೆ ಇಬ್ಬನಿಯಾಟ ನಗರದ ಜನರಿಗೆ ಒಳ್ಳೆಯ ಅನುಭವ ನೀಡುತ್ತಿದೆ. ದಟ್ಟವಾದ ಮಂಜು ನಗರವನ್ನ ಸಂಪೂರ್ಣ ಆವರಿಸಿಕೊಂಡಿದ್ದು, ಬೆಳಗ್ಗಿನ ಜಾವ 8 ಘಂಟೆಯಾದ್ರೂ ಸೂರ್ಯನ ದರ್ಶನವಾಗುತ್ತಿಲ್ಲ. ಚಳಿಯಿಂದಾಗಿ ಜನರು ಫುಲ್ ಪ್ಯಾಕ್ ಆಗಿಯೇ ರಸ್ತೆಗಿಳಿಯುತ್ತಿದ್ದಾರೆ. ಪ್ರತಿನಿತ್ಯ ಬೆಳಗಿನ ವಾಕಿಂಗ್ ಜಾಗಿಂಗ್ ವ್ಯಾಯಾಮ ಮಾಡುವವರಿಗೆ ಈ ಮಂಜು ಸಖತ್ ಮಜಾ ಕೊಡುತ್ತಿದೆ. ಅದರಲ್ಲೂ ಗಾಂಧಿ ಪಾರ್ಕ್ ಮತ್ತು ನಗರದ ಪ್ರವಾಸಿ ಮಂದಿರದ ಆವರಣ ಮಂಜಿನಿಂದ ಕಂಗೊಳಿಸುತ್ತಿದೆ.

Malenadu Ibbani Nature 1

ಹೀಗೆ ನಗರದಲ್ಲಿ ವಾತಾವರಣವು ಇಷ್ಟೊಂದು ಸುಂದರವಾಗಿರುವುದು ನೋಡಿದ ಜನರಿಗೆ ಎಲ್ಲಿಲ್ಲದ ಸಂತಸ ಸಂದಿದೆ. ಗಿಡಮರಗಳ ನಡುವೆ ದಟ್ಟ ಮಂಜು ಆವರಿಸಿದ್ರೆ, ವಾಕ್ ಗೆ ಬರುವ ಜನರು ಈ ಸೀನ್​ಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿರುವ ಇಬ್ಬನಿಯ ವಾತಾವರಣ ನೋಡಿದ ಪ್ರವಾಸಿಗರು ಸಖತ್ ಖುಷಿ ಪಡುತ್ತಿದ್ದಾರೆ.

Malenadu Ibbani Nature

ವನರಾಶಿ ನಡುವೆ ಇಬ್ಬನಿಯಾಟ

ಪ್ರವಾಸಿ ತಾಣಗಳ ಹಾಟ್ ಫೇವರೆಟ್ ಅಂದ್ರೆ ಅದು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ. ಇಂತಹ ಪ್ರವಾಸಿತಾಣಕ್ಕೆ ಇಬ್ಬನಿಯು ಮತ್ತಷ್ಟು ಮೆರಗು ಹೆಚ್ಚು ಮಾಡಿದೆ. ಮಲೆನಾಡಿನ ಈ ನಿಸರ್ಗದ ಸೌಂದರ್ಯ ನೋಡಿದ ಎಲ್ಲರೂ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಈ ಸಮಯದಲ್ಲಿ ನೀವು ಶಿವಮೊಗ್ಗಕ್ಕೆ ಭೀಟಿ ಕೊಟ್ರೆ ಇಬ್ಬನಿ ನಿಮ್ಮನ್ನು ಮೋಹಗೊಳಿಸುವುದರಲ್ಲಿ ಸಂಶಯವೇ ಇಲ್ಲ.

Malenadu Ibbani Nature

ಶಿವಮೊಗ್ಗದಲ್ಲಿ ಕಂಡು ಬಂದ ಸುಂದರ ವಾತಾವರಣ

Malenadu Ibbani Nature

ಶಿವಮೊಗ್ಗದಲ್ಲಿ ಕಂಡು ಬಂದ ಸುಂದರ ವಾತಾವರಣ

Malenadu Ibbani Nature

ಶಿವಮೊಗ್ಗದಲ್ಲಿ ಕಂಡು ಬಂದ ಸುಂದರ ವಾತಾವರಣ

Malenadu Ibbani Nature

ಶಿವಮೊಗ್ಗದಲ್ಲಿ ಕಂಡು ಬಂದ ಸುಂದರ ವಾತಾವರಣ

Malenadu Ibbani Nature

ಶಿವಮೊಗ್ಗದಲ್ಲಿ ಕಂಡು ಬಂದ ಸುಂದರ ವಾತಾವರಣ

Malenadu Ibbani Nature

ಶಿವಮೊಗ್ಗದಲ್ಲಿ ಕಂಡು ಬಂದ ಸುಂದರ ವಾತಾವರಣಇದನ್ನೂ ಓದಿ: ಲಾಕ್​ಡೌನ್ ನಿಂದ ಹೆಚ್ಚಾಯ್ತು ‘ಭೂಲೋಕದ ಸ್ವರ್ಗ’ ಮುಳ್ಳಯ್ಯನಗಿರಿಯ ಸೊಬಗು!