ಸ್ವಲ್ಪದರಲ್ಲಿ ತಪ್ಪಿತು ಭಾರಿ ಗಂಡಾಂತರ: ಶಿವಮೊಗ್ಗದಿಂದ ತೊಲಗಿತು ದಕ್ಷಿಣ ಆಫ್ರಿಕಾ ರೂಪಾಂತರ

ನಗರದಲ್ಲಿ ಎದುರಾಗಿದ್ದ ದಕ್ಷಿಣ ಆಫ್ರಿಕಾ ಸೋಂಕಿನ ಭೀತಿ ಇದೀಗ ನಿವಾರಣೆಯಾಗಿದೆ. ಹೌದು, ದಕ್ಷಿಣ ಆಫ್ರಿಕಾದ ಹೊಸ ಪ್ರಭೇದ ಹೊಂದಿದ್ದ ಸೋಂಕಿತ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

  • Publish Date - 9:54 pm, Thu, 11 March 21
ಸ್ವಲ್ಪದರಲ್ಲಿ ತಪ್ಪಿತು ಭಾರಿ ಗಂಡಾಂತರ: ಶಿವಮೊಗ್ಗದಿಂದ ತೊಲಗಿತು ದಕ್ಷಿಣ ಆಫ್ರಿಕಾ ರೂಪಾಂತರ
ಪ್ರಾತಿನಿಧಿಕ ಚಿತ್ರ

ಶಿವಮೊಗ್ಗ: ನಗರದಲ್ಲಿ ಎದುರಾಗಿದ್ದ ದಕ್ಷಿಣ ಆಫ್ರಿಕಾ ಸೋಂಕಿನ ಭೀತಿ ಇದೀಗ ನಿವಾರಣೆಯಾಗಿದೆ. ಹೌದು, ದಕ್ಷಿಣ ಆಫ್ರಿಕಾದ ಹೊಸ ಪ್ರಭೇದ ಹೊಂದಿದ್ದ ಸೋಂಕಿತ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ರೂಪಾಂತರಿ ಕೊರೊನಾ ಹೊಂದಿದ್ದ ಸೋಂಕಿತ ಇದೀಗ ಗುಣಮುಖರಾಗಿದ್ದಾರೆ. ಕಳೆದ 15 ದಿನಗಳ ಹಿಂದೆ ದುಬೈನಿಂದ ಬಂದಿದ್ದ 53 ವರ್ಷದ ವ್ಯಕ್ತಿಗೆ ಕೊವಿಡ್ ಟೆಸ್ಟ್​ ವೇಳೆ ರೂಪಾಂತರಿ ಸೋಂಕು ದೃಢಪಟ್ಟಿತ್ತು.

ಆದರೆ, ಇದೀಗ ಚಿಕಿತ್ಸೆ ಬಳಿಕ ರೂಪಾಂತರಿ ಕೊರೊನಾ ಹೊಂದಿದ್ದ ಸೋಂಕಿತ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು DHO ಡಾ.ರಾಜೇಶ್ ಸುರಗಿಹಳ್ಳಿ ಮಾಹಿತಿ ಕೊಟ್ಟಿದ್ದಾರೆ. ಇಂದು ಬಂದ ಕೊವಿಡ್ ರಿಪೋರ್ಟ್​ನಲ್ಲಿ ನೆಗೆಟಿವ್ ಬಂದಿದೆ. ಜೊತೆಗೆ, ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ 9 ಜನರಿಗೆ ನೆಗೆಟಿವ್​ ಎಂದು ವರದಿಯಾಗಿದೆ. ಇದಲ್ಲದೆ, ದ್ವಿತೀಯ ಸಂಪರ್ಕದಲ್ಲಿದ್ದ 30 ಜನರಿಗೂ ಕೊವಿಡ್​ ನೆಗೆಟಿವ್​ ಎಂಬ ಮಾಹಿತಿ ಸಿಕ್ಕಿದೆ.

ರಾಜ್ಯದಲ್ಲಿಂದು ಹೊಸದಾಗಿ 783 ಜನರಿಗೆ ಕೊರೊನಾ ದೃಢ
ರಾಜ್ಯದಲ್ಲಿಂದು ಹೊಸದಾಗಿ 783 ಜನರಿಗೆ ಕೊರೊನಾ ದೃಢಪಟ್ಟಿದೆ. ಇದೀಗ, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,57,584ಕ್ಕೇರಿದೆ. ಇದಲ್ಲದೆ, ಇಂದು ಕೊರೊನಾ ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 12,381 ಜನರು ಕೊನೆಯುಸಿರೆಳೆದಿದ್ದಾರೆ.

ಸೋಂಕಿತರ ಪೈಕಿ 9,37,353 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 7,831 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 492 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದೀಗ, ನಗರದಲ್ಲಿ ಕೊರೊನಾ ಪೀಡಿತರ ಸಂಖ್ಯೆ 4,09,655 ಕ್ಕೇರಿದೆ. ನಗರದಲ್ಲಿ ಇಂದು ಕೊರೊನಾ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ. ಈವರೆಗೆ ಕೊರೊನಾಗೆ 4,514 ಜನರು ಅಸುನೀಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಿದೆ.

‘1ರಿಂದ 5ನೇ ತರಗತಿ ಶಾಲೆ ಆರಂಭಿಸಲು ಸಮ್ಮತಿ ನೀಡಿಲ್ಲ’
1ರಿಂದ 5ನೇ ತರಗತಿ ಶಾಲೆ ಆರಂಭಿಸಲು ಸಮ್ಮತಿ ನೀಡಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಮತಿ ನೀಡಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಆದರೆ, ಸರ್ಕಾರದ ಆದೇಶ ಮೀರಿ ಕೆಲ ಖಾಸಗಿ ಶಾಲೆಗಳು ತರಗತಿ ಆರಂಭಗೊಳಿಸಿದೆ. 1ನೇ ತರಗತಿಯಿಂದ ಶಾಲೆ ನಡೆಸ್ತಿರುವ ‌ಮಾಹಿತಿ ದೊರಕಿದೆ. ಸರ್ಕಾರದ ಆದೇಶ ಮೀರಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಶಾಲೆಗಳು ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ.

ಇಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಎಲ್ಲಾ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಕುಂದಾನಗರಿಯಲ್ಲಿ ನಾಮಫಲಕದಲ್ಲಿದ್ದ ಮರಾಠಿ ಅಕ್ಷರಕ್ಕೆ ಮಸಿ ಬಳಿದ ಕರವೇ ಕಾರ್ಯಕರ್ತರು