ಶಿವಮೊಗ್ಗ: ಗಾಡಿಕೊಪ್ಪ ಬಳಿ ಪಾನಿಪುರಿ ತಿನ್ನಲು ಕರೆತಂದು ಯುವಕನ ಬರ್ಬರ ಹತ್ಯೆ (murder) ಮಾಡಿರುವಂತಹ ಘಟನೆ ಶಿವಮೊಗ್ಗದ ಗಾಡಿಕೊಪ್ಪ ಬಳಿ ತಡರಾತ್ರಿ ನಡೆದಿದೆ. ಹೊಸಮನೆ ನಿವಾಸಿ ಕಿರಣ್ ಅಲಿಯಾಸ್ ಪುಚ್ಚಿ(23) ಕೊಲೆಯಾದ ಯುವಕ. ನಿನ್ನೆ ರಾತ್ರಿ ಪಾನಿಪುರಿ ತಿನ್ನಲೆಂದು ಕಿರಣ್ನನ್ನು ಕಾರ್ತಿಕ್ ಮನೆಯಿಂದ ಕರೆದುಕೊಂಡು ಬಂದಿದ್ದ. ಗಾಡಿಕೊಪ್ಪದ ಗಂಧರ್ವ ಬಾರ್ ಹಿಂಭಾಗದ ಪ್ರದೇಶದಲ್ಲಿ ಮೂವರು ಯುವಕರು ಪಾರ್ಟಿ ಮಾಡಿದ್ದು, ಪಾರ್ಟಿ ನಡುವೆಯೇ ಯುವಕರು ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಕಿರಣ್ ಮೇಲೆ ಪ್ರಜ್ವಲ್ ಹಾಗೂ ಕಾರ್ತಿಕ್ ಹಲ್ಲೆ ಮಾಡಿದ್ದಾರೆ. ಕಿರಣ್ ತಲೆಗೆ ಬಾಟೆಲ್ ಮತ್ತು ಕಲ್ಲಿನಿಂದ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡಿರುವ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ಸಂಬಂದ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬಾರ್ ಬಿಲ್ ವಿಚಾರಕ್ಕೆ ಮಧ್ಯಸ್ಥಿಕೆ ವಹಿಸಲು ಬಂದ ವ್ಯಕ್ತಿ ಕೊಲೆ
ಬೆಂಗಳೂರು: ಬಾರ್ ಬಿಲ್ ವಿಚಾರಕ್ಕೆ ಮಧ್ಯಸ್ಥಿಕೆ ವಹಿಸಲು ಬಂದ ವ್ಯಕ್ತಿ ಕೊಲೆಯಾಗಿರುವಂತಹ ಘಟನೆ ಕಳೆದ ತಿಂಗಳು ದಿನಾಂಕ 29ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದ ಪ್ರಕಾಶ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಇಂದಿರಾನಗರ ಪೊಲೀಸರಿಂದ ಕೊಲೆ ಆರೊಪಿ ಮಂಜುನಾಥ್ ಬಂಧನ ಮಾಡಲಾಗಿದೆ. ಬಾರ್ನಲ್ಲಿ ಕುಳಿತು ಮಂಜುನಾಥ್ ಕುಡಿಯುತಿದ್ದ. ಈ ವೇಳೆ ಬಿಲ್ ಕೊಡೊ ವಿಚಾರಕ್ಕೆ ಗಲಾಟೆ ಆಗಿದೆ. ಈ ವೇಳೆ ಅಲ್ಲೇ ಇದ್ದ ಪ್ರಕಾಶ್ ಮಧ್ಯ ಪ್ರವೇಶಿಸಿದ್ದ. ಬಿಲ್ ಕೊಡುವಂತೆ ಬುದ್ದಿ ಮಾತು ಹೇಳಿ ಆಚೆ ಬಂದಿದ್ದ. ಆದರೆ ಆಚೆ ಬಂದ ಮಂಜುನಾಥ್ ಹಾಗೂ ಮತ್ತೊರ್ವ ವ್ಯಕ್ತಿಯಿಂದ ಪ್ರಕಾಶ್ ಮೇಲೆ ಹಲ್ಲೆ ಮಾಡಲಾಗಿದೆ. ಆರೋಪಿಗಳು ಪ್ರಕಾಶ್ಗೆ ಚಾಕುವಿನಿಂದ ಹೊಟ್ಟೆ ಇರಿದು, ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದರು. ಗಾಯಾಳು ಪ್ರಕಾಶ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತಿತ್ತು. ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಕುಖ್ಯಾತ ಅಂತಾರಾಜ್ಯ ಡ್ರಗ್ ಪೆಡ್ಲರ್ಗಳ ಬಂಧನ
ಬೆಂಗಳೂರು: ಬೇಗೂರು ಪೊಲೀಸರಿಂದ ಇಬ್ಬರು ಕುಖ್ಯಾತ ಅಂತಾರಾಜ್ಯ ಡ್ರಗ್ ಪೆಡ್ಲರ್ಗಳ ಬಂಧನ ಮಾಡಲಾಗಿದೆ. ಡ್ರಗ್ಸ್ ಮಾರಾಟ ಮಾಡುತ್ತಿದ್ದ ಅಶ್ಪಾಕ್, ಶಿಫಾಸ್ ಬಂಧಿತ ಆರೋಪಿಗಳು. ಬಂಧಿತರಿಂದ 2 ಕೋಟಿ ಮೌಲ್ಯದ ಹ್ಯಾಶ್ ಆಯಿಲ್ ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳು ಮಂಗಳೂರು ಹಾಗೂ ಕೇರಳ ಮೂಲದವರಾಗಿದ್ದಾರೆ.
ಪತಿಯಿಂದಲೇ ಪತ್ನಿಯ ಮರ್ಡರ್
ಕಾರವಾರ: ಪತಿಯಿಂದಲೇ ಪತ್ನಿಯನ್ನು ಮಚ್ಚಿನಿಂದ ಕುತ್ತಿಗೆ ಕುಯ್ದು, ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದಿದೆ. ಅಕ್ಕಮ್ಮ ಬಸವರಾಜ ಮೇಲಿನಮನೆ ಕೊಲೆಯಾದ ಮಹಿಳೆ. ಕೊಲೆಯಾದ ಮಹಿಳೆ ಪಾಳಾ ಗ್ರಾ.ಪಂ ಸದಸ್ಯೆಯಾಗಿದ್ದರು. ಕೊಲೆ ಮಾಡಿ ಆತ್ಮಹತ್ಯೆ ಯತ್ನಿಸಿ ಸಾವುನೋವಿನ ಮದ್ಯೆ ಹೋರಾಡುತ್ತಿರುವ ಪತಿರಾಯ ಬಸವರಾಜ ಹುಬ್ಬಳ್ಳಿ ಕೀಮ್ಸ್ನಲ್ಲಿ ಚಿಕಿತ್ಸೆ ನೀಡಲಾಗಿದೆ. ಮುಂಡಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ
ಚಿಕ್ಕಬಳ್ಳಾಫುರ: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಆದಿಗಾನಹಳ್ಳಿ ಕ್ರಾಸ್ ಬಳಿ ನಡೆದಿದೆ. ಶ್ರೀನಿವಾಸ್ (38) ಮೃತ ವ್ಯಕ್ತಿ. ಶ್ರೀನಿವಾಸ್ ಟೋಲ್ ಪ್ಲಾಜಾ ಬಳಿ ವೇಬ್ರಿಡ್ಜ್ನಲ್ಲಿ ಕೆಲಸ ಮಾಡ್ತಿದ್ದ. ರಾತ್ರಿ ಪಾಳಿಯ ಮುಗಿಸಿ ಮನೆಗೆ ಹೊಗ್ತಿದ್ದಾಗ ಘಟನೆ ನಡೆದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಪೊಲೀಸ್ ಉಪಾದೀಕ್ಷಕ ವಿ.ಕೆ.ವಾಸುದೇವ್ ಭೇಟಿ ಪರಿಶೀಲನೆ ಮಾಡಿದರು.