Dubai Millenium Duty Free Lottery | ದುಬೈ ಲಾಟರಿಯಲ್ಲಿ ರೂ 24 ಕೋಟಿ ಗೆದ್ದ ಶಿವಮೊಗ್ಗದ ಶಿವಮೂರ್ತಿ

ಕೆಲವರಿಗೆ ಲಕ್​ ಹೇಗೆ ಬರುತ್ತೆ ಎಂಬುದು ಗೊತ್ತಾಗೋದಿಲ್ಲ. ಹೀಗೆ ಲಕ್​ ಬರುವುದಕ್ಕೆ ಲಾಟರಿ ಹೊಡೆಯುವುದು ಎಂದು ಹೇಳುತ್ತಾರೆ. ಶಿವಮೊಗ್ಗ ಮೂಲದ ಶಿವಮೂರ್ತಿ ಅವರು ದುಬೈ ಮಿಲೇನಿಯಮ್​ ಡ್ಯೂಟಿ ಫ್ರೀ ಲಾಟರಿ ಗೆದ್ದು 24 ಕೋಟಿಯ ಒಡೆಯ ಆಗಿದ್ದಾರೆ.

  • TV9 Web Team
  • Published On - 19:16 PM, 5 Mar 2021
Dubai Millenium Duty Free Lottery | ದುಬೈ ಲಾಟರಿಯಲ್ಲಿ ರೂ 24 ಕೋಟಿ ಗೆದ್ದ ಶಿವಮೊಗ್ಗದ ಶಿವಮೂರ್ತಿ
ಪ್ರಾತಿನಿಧಿಕ ಚಿತ್ರ

ಕೆಲವರಿಗೆ ಲಕ್​ ಯಾವಾಗ ಬರುತ್ತೆ ಎನ್ನೋದು ಗೊತ್ತಾಗೋಲ್ಲ. ಇದು ಮತ್ತೊಮ್ಮೆ ಖಚಿತವಾಗಿದೆ. ದುಬೈನಲ್ಲಿರುವ ಶಿವಮೊಗ್ಗ ಮೂಲದ ಶಿವಮೂರ್ತಿ ಕೃಷ್ಣಪ್ಪ ಅಲ್ಲಿ ನಡೆಸುವ ಲಾಟರಿ ಟಿಕೆಟ್ ಖರೀದಿಸಿ ಈ ಬಾರಿಯ ಡ್ರಾನಲ್ಲಿ ಬಂಪರ್​ ಬಹುಮಾನ ಗೆದ್ದು ರೂ 24 ಕೋಟಿ ತಮ್ಮದಾಗಿಸಿಕೊಂಡಿದ್ದಾರೆ. UAE ನಲ್ಲಿ ವಾಸವಾಗಿರುವ ಶಿವಮೂರ್ತಿ ಫೆಬ್ರುವರಿ 17 ರಂದು 12 ಮಿಲಿಯನ್​ ದಿರ್ಹಮ್ (ರೂ. 24 ಕೋಟಿ) ಮೊತ್ತದ ಡ್ರಾ ಮೌಲ್ಯವಿರುವ ಟಿಕೆಟ್​ ಖರೀದಿಸಿದ್ದರು. ನಿನ್ನೆ ಡ್ರಾ ಎತ್ತಿದಾಗ ಶಿವಮೂರ್ತಿ ಅವರಿಗೆ ಆಶ್ಚರ್ಯ ಕಾದಿತ್ತು. ಅದಕ್ಕೂ ಮಿಗಿಲಾಗಿ ಇಡೀ ಲಾಟರಿಯ ಡ್ರಾವನ್ನು ಲೈವ್​ನಲ್ಲಿ ತೋರಿಸಲಾಗುತ್ತಿತ್ತು. ಶಿವಮೂರ್ತಿ ಅದನ್ನು ಟಿವಿಯಲ್ಲಿ ನೋಡುತ್ತಿದ್ದರು. ಲಾಟರಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ರಿಚರ್ಡ್ ಫೋನ್​ ಮಾಡಿ ವಿಷಯ ತಿಳಿಸಿದಾಗ ಶಿವಮೂರ್ತಿಗೆ ಆಕಾಶದಲ್ಲಿ ತೇಲುವಷ್ಟು ಖುಷಿ. ನಾನು ಲೈವ್ ನೋಡುತ್ತಿದ್ದೇನೆ. ನನಗೆ ನಂಬೋಕೆ ಆಗುತ್ತಿಲ್ಲ ಎಂದು ಹೇಳಿದರು.

ಶಿವಮೂರ್ತಿ ಕನಸು ಏನು?
ಶಿವಮೂರ್ತಿ ನಮ್ಮ ನಿಮ್ಮಂತೆ ಕನಸು ಇಟ್ಟುಕೊಂಡವರು. ನನ್ನ ಹುಟ್ಟಿದೂರಿನಲ್ಲಿ ದೊಡ್ಡದೊಂದು ಮನೆ ಕಟ್ಟಿಸಬೇಕು ಎಂಬ ಆಸೆ ಇದೆ. ಅದನ್ನು ಸಾಕಾರಗೊಳಿಸುವ ಕ್ಷಣ ಈಗ ಬಂದಿದೆ ಎಂದು ಅವರು ಹೇಳಿದರು. ನನಗೆ ಇಬ್ಬರು ಮಕ್ಕಳು. ಅವರ ಶಿಕ್ಷಣ ಮತ್ತು ಭವಿಷ್ಯಕ್ಕೋಸ್ಕರ ಇನ್ನೊಂದಿಷ್ಟು ಹಣ ಇಡುತ್ತೇನೆ, ಎಂದು ಅವರು ಲೈವ್ ಕಾರ್ಯಕ್ರಮದಲ್ಲಿ ಹೇಳಿದರು.

ಶಿವಮೂರ್ತಿ 2005ರಲ್ಲಿ ದುಬೈಗೆ ಬಂದು ಮೆಕಾನಿಕಲ್​ ಎಂಜಿನಿಯರ್ ಆಗಿ ಆಗಿ ಕೆಲಸ ಮಾಡುತ್ತಿದ್ದಾರೆ. ಇಷ್ಟು ದಿನ ಅವರು ತಮ್ಮ ಗೆಳೆಯರ ಜೊತೆ ಸೇರಿ ಲಾಟರಿ ಟಿಕೆಟ್​ ಖರೀದಿಸುತ್ತಿದ್ದರು. ಈ ವಿಚಾರವನ್ನು ಅವರೇ ಹೇಳಿಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ನಾನೊಬ್ಬನೇ ಟಿಕೆಟ್​ ಖರೀದಿಸುತ್ತಿದ್ದೇನೆ. ಕಾಯಂ ಆಗಿ ಟಿಕೆಟ್​ ಖರೀದಿಸುವವರಿಗೆ ಅಂತ ಈ ಬಾರಿ ವಿಶೇಷ ಕೊಡುಗೆ ನೀಡುವುದಾಗಿ ಹೇಳಿದ್ದರು. ಹಾಗಾಗಿ ನಾನು ಎರಡು ಟಿಕೆಟ್​ ಖರೀದಿಸಿದ್ದೆ ಎಂದು ಶಿವಮೂರ್ತಿ ಗಲ್ಫ ನ್ಯೂಸ್​ಗೆ ಕೊಟ್ಟ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಮಧ್ಯೆ ದುಬೈ ಲಾಟರಿ ನಡೆಸುವ ಕಂಪೆನಿ ಹೊಸ ಯೋಜನೆಯೊಂದನ್ನು ಹಾಕಿ ಕೊಂಡಿದೆ. ಆ ಪ್ರಕಾರ, ದುಬೈ ಲಾಟರಿ ಯೋಜನೆಯ ಲೈವ್​ ಕಾರ್ಯಕ್ರಮವನ್ನು ಇನ್ನೂ ವೈವಿಧ್ಯಮಯ ಮಾಡುವ ಯೋಜನೆ ಇದೆ ಎಂದು ಲೈವ್​ನಲ್ಲಿ ಹೇಳಿದರು. ಲಕ್ಷಾಂತರ ಜನ ನಮ್ಮ ಕಾರ್ಯಕ್ರಮ ನೋಡುತ್ತಾರೆ. ಬೇರೆ ಬೇರೆ ಜನ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮತ್ತು ಕಾರ್ಯಕ್ರಮದಲ್ಲಿ ಈಗ ಪಾಲ್ಗೊಂಡ ಜನರಿಗೆ ಪ್ರೋತ್ಸಾಹಿಸಲು ಇನ್ನೂ ಹೆಚ್ಚಿನ ತತ್​ಕ್ಷಣದ (on the spot) ಲಾಟರಿ ಯೋಜನೆಯನ್ನು ಕೈಗೊಳ್ಳುತ್ತೇವೆ. ಮುಂದಿನ ತಿಂಗಳು 5ನೇ ತಾರೀಕಿನ ದಿನ ನಡೆಯುವ ಮುಂದಿನ ಲಾಟರಿಯಲ್ಲಿ 10 ದೀರಮ್​, 5 ದೀರಮ್​ ಮತ್ತು ರೇಂಜ್​ ರೋವರ್​ ಡ್ರೀಮ್​ ಕಾರ್​ ಹಂಚುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ.

ಇದನ್ನೂ ಓದಿ: 

ಲಾಟರಿ ಸೇಲ್ ಮಾಡ್ತಿದ್ದವನಿಗೆ ಹೊಡೀತು 12 ಕೋಟಿ ಬಂಪರ್ ಬಹುಮಾನ! ಡಬಲ್ ಧಮಾಕಾ! ಯಾಕೆ ಗೊತ್ತಾ?

ಮಂಡ್ಯದ ಯುವಕನನ್ನು ಕೋಟ್ಯಾಧಿಪತಿ ಮಾಡಿದ ಕೇರಳದ ಲಾಟರಿ