ದಾರುಣ: ಕಳ್ಳರಿಬ್ಬರಿಂದ ವೃದ್ಧೆ ಕತ್ತು ಹಿಸುಕಿ ಕೊಲೆಗೆ ಯತ್ನ.. ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಸಾವು

ಅಕ್ಕಪಕ್ಕದವರು ವೃದ್ಧೆಯ ಸಹಾಯಕ್ಕೆ ಬಂದಿದ್ದಾರೆ. ಓರ್ವ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ. ಮತ್ತೊಬ್ಬ ಕಳ್ಳ ಬೈಕ್ ಹತ್ತಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ. ಸ್ಥಳೀಯರ ನೆರವಿನಿಂದ ವೃದ್ಧೆಯನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಕೊನೆಯುಸಿರೆಳೆದಿದ್ದಾರೆ.

ದಾರುಣ: ಕಳ್ಳರಿಬ್ಬರಿಂದ ವೃದ್ಧೆ ಕತ್ತು ಹಿಸುಕಿ ಕೊಲೆಗೆ ಯತ್ನ.. ಚಿಕಿತ್ಸೆ  ಫಲಕಾರಿಯಾಗದೆ ವೃದ್ಧೆ ಸಾವು
ದಾರುಣ: ಕಳ್ಳರಿಬ್ಬರಿಂದ ವೃದ್ಧೆ ಕತ್ತು ಹಿಸುಕಿ ಕೊಲೆಗೆ ಯತ್ನ.. ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಸಾವು

ಶಿವಮೊಗ್ಗ: ಇದು ನಿಜಕ್ಕೂ ದಾರುಣ. ಐನಾತಿ ಕಳ್ಳರಿಬ್ಬರು ವೃದ್ಧೆಯೊಬ್ಬರ ಕತ್ತು ಹಿಸುಕಿ ಕೊಲೆಗೆ ಯತ್ನಿಸಿ, ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಆದರೆ ಇತ್ತ ಆಕೆಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿಸಲಾಗಿ, ಅದು ಫಲಕಾರಿಯಾಗದೆ ವೃದ್ಧೆ ಸಾವಿಗೀಡಾಗಿದ್ದಾರೆ.

ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆಹಕ್ಕಲು ಗ್ರಾಮದಲ್ಲಿ ನಿನ್ನೆ ಬುಧವಾರ ಈ ದಾರುಣ ಘಟನೆ ನಡೆದಿದೆ. ವೃದ್ಧೆ ಭವಾನಿ (85) ಮನೆಗೆ ನುಗ್ಗಿದ ಇಬ್ಬರು ಕಳ್ಳರು ಹಣ ಒಡವೆ ದೋಚಲು ಮುಂದಾಗಿದ್ದಾರೆ. ಆ ವೇಲೆ ಕಳ್ಳರು ವೃದ್ಧೆಯ ಕತ್ತು ಹಿಸುಕಿ, ಕೊಲೆಗೆ ಯತ್ನಿಸಿದ್ದಾರೆ. ವೃದ್ಧೆಯ ಮೇಲೆ ಹಲ್ಲೆ ಮಾಡಿ ಕೊರಳಲ್ಲಿದ್ದ ಚಿನ್ನದ ಸರ ಮತ್ತು ನಗದು ಅಪಹರಿಸಿದ್ದಾರೆ.

ಬಳಿಕ, ಅಕ್ಕಪಕ್ಕದವರು ವೃದ್ಧೆಯ ಸಹಾಯಕ್ಕೆ ಬಂದಿದ್ದಾರೆ. ಓರ್ವ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ. ಮತ್ತೊಬ್ಬ ಕಳ್ಳ ಬೈಕ್ ಹತ್ತಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ. ಸ್ಥಳೀಯರ ನೆರವಿನಿಂದ ವೃದ್ಧೆಯನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಕೊನೆಯುಸಿರೆಳೆದಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(thieves attack eder woman in thirthahalli to loot gold and money but woman admitted to hospital died)

ಮಹಿಳೆಯ ಅಂತ್ಯಕ್ರಿಯೆಗೆ ಬಾರದ ಕುಟುಂಬಸ್ಥರು; ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಿದ ಮುಸ್ಲಿಂ ಯುವಕರು