ಯುವಕರ ತಂಡದಿಂದ ಹಲ್ಲೆ; ಓರ್ವ ಸಾವು, ಮತ್ತೋರ್ವನಿಗೆ ಗಂಭೀರ ಗಾಯ: ಯಾವೂರಲ್ಲಿ?

ಯುವಕರ ತಂಡ ಇಬ್ಬರ ಮೇಲೆ ಹಲ್ಲೆ ನಡೆಸಿದ್ದು, ಜೀವನ್ ಎಂಬಾತ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಕೇಶವ್​ಗೆ ಗಂಭೀರ ಗಾಯವಾಗಿದೆ.

  • TV9 Web Team
  • Published On - 10:39 AM, 28 Jan 2021
ಯುವಕರ ತಂಡದಿಂದ ಹಲ್ಲೆ; ಓರ್ವ ಸಾವು, ಮತ್ತೋರ್ವನಿಗೆ ಗಂಭೀರ ಗಾಯ: ಯಾವೂರಲ್ಲಿ?
ಜೀವನ್ (ಸಾವಿಗೀಡಾದ ಯುವಕ)

ಶಿವಮೊಗ್ಗ: ಇಬ್ಬರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವನಿಗೆ ಗಂಭೀರ ಗಾಯವಾಗಿದ ಘಟನೆ ನಗರದ ಸುಂದರ ಆಶ್ರಯ ಬಾರ್ ಬಳಿ ನಡೆದಿದೆ.

ಐದಾರು ಯುವಕರ ತಂಡದಿಂದ ಇಬ್ಬರ ಮೇಲೆ ಮಾರಣಾಂತಿಕ ದಾಳಿ ನಡೆಸಿ ಘಟನೆ ಬಳಿಕ ಯುವಕರ ಗ್ಯಾಂಗ್ ಎಸ್ಕೇಪ್ ಆಗಿದೆ. ಹಲ್ಲೆಯಲ್ಲಿ ಜೀವನ್ (26) ಎಂಬಾತ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಕೇಶವ್​ಗೆ ಗಂಭೀರ ಗಾಯವಾದ ಪರಿಣಾಮ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಈ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಜೊತೆಗೆ ಘಟನಾ ಸ್ಥಳದ ಸುತ್ತಮುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಗಾಯಗೊಂಡ ಕೇಶವ್

ರಸ್ತೆ ಬದಿ ಮಲಗಿದ್ದ ನಾಯಿಯ ಮೇಲೆ ಕಾರು ಹತ್ತಿಸಿ.. ಅಮಾನುಷವಾಗಿ ಕೊಂದ ನಿವೃತ್ತ ಪೊಲೀಸ್‌ ಇನ್​ಸ್ಪೆಕ್ಟರ್​