AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿವೇಶನ ಅವಧಿ ವಿಸ್ತರಣೆ ಕೋರಿ ಸ್ಪೀಕರ್​ಗೆ ಸಿದ್ದರಾಮಯ್ಯ ಪತ್ರ

ಸೆಪ್ಟೆಂಬರ್ 21ರಿಂದ ವಿಧಾನಮಂಡಲ ಅಧಿವೇಶನವನ್ನು ಕೇವಲ 8 ದಿನಗಳವರೆಗೆ ನಡೆಸಲು ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭಾಧ್ಯಕ್ಷರಿಗೆ ಪತ್ರವೊಂದನ್ನು ಬರೆದಿದ್ದು ಅಧಿವೇಶನವನ್ನು ಕನಿಷ್ಠ ಮೂರು ವಾರಗಳವರೆಗೆ ವಿಸ್ತರಿಸಬೇಕೆಂದು ಕೋರಿದ್ದಾರೆ. ರಾಜ್ಯ ಸರ್ಕಾರ ಸುಮಾರು 20 ಸುಗ್ರೀವಾಜ್ಞೆ ಸೇರಿದಂತೆ 35ಕ್ಕೂ ಅಧಿಕ ಮಸೂದೆಗಳನ್ನು ಮಂಡಿಸುವ ಇರಾದೆ ಇಟ್ಟುಕೊಂಡಿದೆ. ಕೇವಲ ಎಂಟು ದಿನಗಳ ಅಧಿವೇಶನದಲ್ಲಿ ಅಷ್ಟೆಲ್ಲ ವಿಷಯಗಳನ್ನು ಚರ್ಚಿಸುವುದು ಸಾಧ್ಯವಾಗುವುದಿಲ್ಲ, ಹಾಗಾಗಿ ಅಧಿವೇಶನದ ಅವಧಿಯನ್ನು ಮೂರು ವಾರಗಳಿಗೆ ವಿಸ್ತರಿಸಬೇಕೆಂದು ಮಾಜಿ ಮುಖ್ಯಮಂತ್ರಿಗಳು ಕೋರಿದ್ದಾರೆ. ‘‘ರಾಜ್ಯ […]

ಅಧಿವೇಶನ ಅವಧಿ ವಿಸ್ತರಣೆ ಕೋರಿ ಸ್ಪೀಕರ್​ಗೆ ಸಿದ್ದರಾಮಯ್ಯ ಪತ್ರ
ವಿಪಕ್ಷ ನಾಯಕ ಸಿದ್ದರಾಮಯ್ಯ
ಅರುಣ್​ ಕುಮಾರ್​ ಬೆಳ್ಳಿ
|

Updated on: Sep 09, 2020 | 6:51 PM

Share

ಸೆಪ್ಟೆಂಬರ್ 21ರಿಂದ ವಿಧಾನಮಂಡಲ ಅಧಿವೇಶನವನ್ನು ಕೇವಲ 8 ದಿನಗಳವರೆಗೆ ನಡೆಸಲು ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭಾಧ್ಯಕ್ಷರಿಗೆ ಪತ್ರವೊಂದನ್ನು ಬರೆದಿದ್ದು ಅಧಿವೇಶನವನ್ನು ಕನಿಷ್ಠ ಮೂರು ವಾರಗಳವರೆಗೆ ವಿಸ್ತರಿಸಬೇಕೆಂದು ಕೋರಿದ್ದಾರೆ.

ರಾಜ್ಯ ಸರ್ಕಾರ ಸುಮಾರು 20 ಸುಗ್ರೀವಾಜ್ಞೆ ಸೇರಿದಂತೆ 35ಕ್ಕೂ ಅಧಿಕ ಮಸೂದೆಗಳನ್ನು ಮಂಡಿಸುವ ಇರಾದೆ ಇಟ್ಟುಕೊಂಡಿದೆ. ಕೇವಲ ಎಂಟು ದಿನಗಳ ಅಧಿವೇಶನದಲ್ಲಿ ಅಷ್ಟೆಲ್ಲ ವಿಷಯಗಳನ್ನು ಚರ್ಚಿಸುವುದು ಸಾಧ್ಯವಾಗುವುದಿಲ್ಲ, ಹಾಗಾಗಿ ಅಧಿವೇಶನದ ಅವಧಿಯನ್ನು ಮೂರು ವಾರಗಳಿಗೆ ವಿಸ್ತರಿಸಬೇಕೆಂದು ಮಾಜಿ ಮುಖ್ಯಮಂತ್ರಿಗಳು ಕೋರಿದ್ದಾರೆ.

‘‘ರಾಜ್ಯ ಈಗ ಅತ್ಯಂತ ಸಂಕಷ್ಟದ ಸಮಯದಲ್ಲಿದೆ, ಕೊವಿಡ್-19 ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಸೋಂಕಿಗೆ ಈಗಾಗಲೇ 6,500ಕ್ಕು ಹೆಚ್ಚು ಜನ ಬಲಿಯಾಗಿದ್ದಾರೆ. ಉತ್ತರ ಕರ್ನಾಟಕದ ಹಲವಾರು ಭಾಗಗಳಲ್ಲಿ ಜನ ನೆರೆ ಹಾವಳಿಯಿಂದ ತತ್ತರಿಸಿದ್ದಾರೆ. ಅಲ್ಲದೆ ಅಧಿವೇಶನವನ್ನು ಕನಿಷ್ಠ 60 ದಿನಗಳವರೆಗೆ ನಡೆಸಬೇಕೆಂದು ಕರ್ನಾಟಕ ರಾಜ್ಯ ವಿಧಾನಮಂಡಲ ಸರ್ಕಾರಿ ಕಾರ್ಯಕಲಾಪಗಳ ನಿರ್ವಹಣೆ ಅಧಿನಿಯಮ ಸೂಚಿಸುತ್ತದೆ. ಆದರೆ, ಸರ್ಕಾರ ಜ್ವಲಂತ ಸಮಸ್ಯೆಗಳನ್ನು ಚರ್ಚಿಸದೆ ಪಲಾಯನಗೈಯಲು ಪ್ರಯತ್ನಿಸುತ್ತಿದೆ. ಅದಕ್ಕೆ ಅವಕಾಶ ನೀಡದೆ ಅಧಿವೇಶನವನ್ನು ಮೂರು ವಾರಗಳಿಗೆ ವಿಸ್ತರಿಸಬೇಕೆಂದು ಮನವಿ ಮಾಡುತ್ತೇನೆ,’’ ಅಂತ ಸಿದ್ದರಾಮಯ್ಯ ಪತ್ರದಲ್ಲಿ ಬರೆದಿದ್ದಾರೆ.

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್