ದಿನಕ್ಕೆ 600 ರೂ. ನೀಡುತ್ತೇವೆಂದರೂ ಸಿಗದ ಆಳುಗಳು: ಇದು ಸರ್ಕಾರದ ಫ್ರೀ ಯೋಜನೆಗಳ ಪರಿಣಾಮವೇ?
ಬೀದರ್ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಹೊಲಕ್ಕೆ ಕೂಲಿ ಆಳುಗಳು ಸಿಗದೆ ಸಮಸ್ಯೆಯುಂಟಾಗಿದ್ದು ಎಲ್ಲಾ ಕೆಲಸವನ್ನ ತಾವೇ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಉಚಿತ ಯೋಜನೆಗಳೇ ಇದಕ್ಕೆ ಇದಕ್ಕೆ ಕಾರಣವೆನ್ನಲಾಗುತ್ತಿದೆ. ದಿನಕ್ಕೆ 600 ರೂ. ಕೊಡುತ್ತೇನೆಂದುರು ಕೂಲಿ ಆಳುಗಳು ಸಿಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.
ಬೀದರ್, ಜೂನ್ 2: ಸರ್ಕಾರದ ಉಚಿತ ಯೋಜನೆಯಿಂದಾಗಿ ರೈತರು (Farmers) ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಹೊಲಕ್ಕೆ ಕೂಲಿ ಆಳುಗಳ (Slaves) ಸಮಸ್ಯೆಯುಂಟಾಗಿದ್ದು ಎಲ್ಲಾ ಕೆಲಸವನ್ನ ತಾವೇ ಮಾಡಬೇಕಾಗಿದೆ. ಉಳಿಮೆ ಮಾಡುವ ಯಂತ್ರಗಳ ಬಾಡಿಗೆ ಹೆಚ್ಚಳ, ರಸಗೊಬ್ಬರ ಸಮಸ್ಯೆಯಿಂದ ನಲುಗುತ್ತಿರುವ ರೈತರು ಕೃಷಿ ಕಾಯಕವೇ ಬೇಡ ಅನ್ನೋ ಮಟ್ಟಿಗೆ ಬಂದಿದ್ದಾರೆ. ಹೌದು ಸರ್ಕಾರದ ಉಚಿತ, ಖಚಿತ ಯೋಜನೆಗಳ ಘೋಷನೆಯಿಂದಾಗಿ ಗಡಿ ಜಿಲ್ಲೆ ಬೀದರ್ನಲ್ಲಿ ಕೃಷಿ ಚಟುವಟಿಗೆ ಕೂಲಿ ಆಳುಗಳ ಸಮಸ್ಯೆ ಹೆಚ್ಚಾಗಿದ್ದು ರೈತರು ಕಂಗಾಲಾಗಿದ್ದಾರೆ.
ದಿನಕ್ಕೆ 600 ರೂ. ಕೊಡುತ್ತೇನೆಂದುರು ಸಿಗುತ್ತಿಲ್ಲ ಕೂಲಿ ಆಳುಗಳು
ಜಿಲ್ಲೆಯಲ್ಲಿ ಒಬ್ಬ ರೈತನಿಗೆ ಕನಿಷ್ಟವೆಂದರೂ 10 ಎಕರೆ ಮೇಲೆಯೇ ಜಮೀನಿದೆ. ಆ ಜಮೀನಿನಲ್ಲಿ ಕೆಲಸ ಮಾಡಲು ಕೂಲಿ ಆಳುಗಳು ಸಿಗದಂತಾ ಸ್ಥಿತಿಯಿಲ್ಲಿ ನಿರ್ಮಾಣವಾಗಿದೆ. ಈ ಬಿತ್ತನೆ ಸಮಯವಾಗಿದ್ದರಿಂದಾ ರೈತರು ಹೊಲ ಹದಗೊಳಿಸಿ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಹೊಲ ಹದಗೊಳಿಸುವುದರಿಂದ ಹಿಡಿದ ಬೆಳೆ ರಾಶಿ ಮಾಡುವವರೆಗೂ ಕೂಡ ಕೂಲಿ ಆಳುಗಳು ಬೇಕೇ ಬೇಕು. ಇನ್ನೂ ಕಳೆ ಕಿಳುವ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಆಳುಗಳು ಬೇಕಾಗುತ್ತಿದ್ದಾರೆ. ಆದರೆ ಕಳೆದೊಂದು ವರ್ಷದಿಂದ ಕೂಲಿ ಆಳುಗಳ ಸಮಸ್ಯೆ ಹೆಚ್ಚಾಗುತ್ತಿದ್ದು ದಿನಕ್ಕೆ 600 ರೂ. ಕೊಡುತ್ತೇನೆಂದುರು ಕೂಲಿ ಆಳುಗಳು ಸಿಗುತ್ತಿಲ್ಲ. ಹೀಗಾಗಿ ಎಲ್ಲವನ್ನ ನಾವೇ ಮಾಡಬೇಕಾದ ಸ್ಥಿತಿ ನಿರ್ಮಾನ ವಾಗಿದೆ ಎಂದು ರೈತರು ಅಳಲು ತೊಡಿಕೊಂಡಿದ್ದಾರೆ.
ಇದನ್ನೂ ಓದಿ: ಬೀದರ್ನ ಆ ಪುಟ್ಟ ಗ್ರಾಮದಲ್ಲಿರುವ ಬಾವಿಗಳು ಎಂದಿಗೂ ಬತ್ತಿಲ್ಲ: ವರ್ಷದ 12 ತಿಂಗಳು ತುಂಬಿ ತುಳುಕುತ್ತೆ ನೀರು
ಕೂಲಿ ಆಳುಗಳ ಸಹಾಯವಿಲ್ಲದೆ ಒಬ್ಬ ರೈತ ತನ್ನ ಜಮೀನಿನಲ್ಲಿ ತನ್ನ ಕುಟುಂಬದವರಷ್ಟೇ ಸೇರಿಕೊಂಡು ಕೃಷಿ ಮಾಡಲು ಸಾಧ್ಯವಿಲ್ಲ ಕೂಲಿ ಆಳುಗಳು ಬೇಕೆ ಬೇಕು ಆದರೆ ಕೂಲಿ ಆಳು ಸಿಗುತ್ತಿಲ್ಲ, ಎಕರೆಗೆ 25 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿರುತ್ತೇವೇ ಆದರೆ ಕಳೆ ತೆಗೆಯಲು ಕೂಲಿ ಆಳುಗಳು ಸಿಗದೇ ಹೋದರೆ ಇಳುವರು ಕುಟಿಂತಗೊಳ್ಳುತ್ತದೆ ಆವಾಗ ನಷ್ಟ ರೈತನಿಗೆ ಆಗುತ್ತದೆ ಏನು ಮಾಡೋದು ಸರ್ಕಾರ ದ ಉಚಿತ ಯೋಜನೆಯಿಂದಾಗಿ ಕೂಲಿ ಆಳುಗಳ ಸಮಸ್ಯೆಯಿಂದ ನಾವು ಏನು ಮಾಡಬೇಕು ತಿಳಿಯದಾಗಿದೆ ಎಂದು ರೈತ ಹೇಳುತ್ತಿದ್ದಾರೆ.
ಕೂಲಿ ಆಳುಗಳ ಸಮಸ್ಯೆಯ ಜೊತೆಗೆ ಪ್ರತಿ ವರ್ಷವೂ ಕೂಡ ಬಿತ್ತನೆ ಬೀಜ, ರಸಗೊಬ್ಬರದ ದರದಲ್ಲಿ ಏರಿಕೆಗಾಗುತ್ತಿದೆ, ಜೊತೆಗೆ ಕೂಲಿ ಆಳುಗಳು ಕೊರತೆಯಿಂದಾಗಿ ಕೂಲಿ ಆಳುಗಳ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ. ಹೀಗಾಗಿ ಅವರು ಕೂಡ ವರ್ಷದಿಂದ ವರ್ಷಕ್ಕೆ ತಮ್ಮ ಕೂಲಿ ಹಣ ಹೆಚ್ಚು ಮಾಡುತ್ತಿದ್ದಾರೆ. ಇದೆಲ್ಲವನ್ನ ನೋಡಿದರೆ ಕೃಷಿ ಕಾಯಕವೇ ಬೇಡ ಅಂತಾ ಅನುಸುತ್ತಿದೆಂದು ರೈತರು ಹೇಳುತ್ತಿದ್ದಾರೆ.
ಈಗ ರೈತರು ಸಾಮಾನ್ಯವಾಗಿ ಇತ್ತಚಿನ ದಿನಗಳಲ್ಲಿ ಬಿತ್ತನೆಗೆ ಜೋಡೆತ್ತುಗಳು ಸಿಗದ ಕಾರಣ ಟ್ರ್ಯಾಕ್ಟರ್ಗಳ ಮೇಲೆಯೇ ರೈತರು ಹೆಚ್ಚಿನದಾಗಿ ಅವಲಂಬಿತರಾಗಿದ್ದಾರೆ ಹೀಗಾಗಿ ಈಗ ತೈಲ್ ಬೆಲೆ ಏರಿಕೆಯಿಂದ ರೈತರಿಗೆ ಹೊರೆಯಾಗಿ ಪರಿಣಮಿಸಿದೆ. ಈ ಹಿಂದೆಲ್ಲ ಒಂದು ಎಕ್ಕರೆಗೆ ಬಿತ್ತನೆ ಮಾಡಬೇಕಾದರೆ ಈ ಹಿಂದಿನ ವರ್ಷ 6 ನೂರರಿಂದ 8 ನೂರರವರೆಗೆ ಹಣ ಪಡೆದುಕೊಂಡು ಬಿತ್ತನೆ ಮಾಡಿಕೊಡುತ್ತಿದ್ದರು ಆದರೇ ಈ ವರ್ಷ 1 ಸಾವಿರದಿಂದ 14 ನೂರು ರೂಪಾಯಿ ಗಳ ವರೆಗೂ ಬಾಡಿಗೆ ಹಣ ತೆಗೆದುಕೊಳ್ಳುತ್ತಿದ್ದಾರೆ ಇದರಿಂದ ರೈತರಿಗೆ ಬಹಳ ಕಷ್ಟ ವಾಗುತ್ತಿದೆ.
ಇದನ್ನೂ ಓದಿ: ಬೀದರ್ನ ಸ್ಮಾರಕಗಳಿಗಿಲ್ಲ ಜೀರ್ಣೋದ್ಧಾರ ಕಾರ್ಯ: ಅವನತಿಯತ್ತ ಪ್ರವಾಸಿ ತಾಣಗಳು
ಕೃಷಿ ಚಟುವಟಿಕೆ ಯಂತ್ರವನ್ನೇ ಅವಲಂಬಿಸಿರುವ ರೈತರು ಬಾಡಿಗೆ ಏರಿಕೆಯಿಂದ ಸಂಕಷ್ಟ ಅನುಭವಿಸುತ್ತಿದ್ದು ಇದು ಕೃಷಿಕರಿಗೆ ದುಬಾರಿ ವ್ಯವಹಾರವಾಗಿದೆ. ನಿರ್ವಹಣೆ ಮಾಡುವುದೆ ಇದರಿಂದ ಕಷ್ಟ ವಾಗುತ್ತಿದೆ. ಜಮೀನು ಉಳುಮೆ ಮಾಡಲು ತಕ್ಷಣ ಬೆಕೆಂದರೆ ಸಿಗುವುದಿಲ್ಲ ಸಿಕ್ಕರೂ ಬಾಡಿಗೆ ದುಬಾರಿಯಾಗಿರುತ್ತದೆ. ಟ್ರ್ಯಾಕ್ಟರ್ ಇಲ್ಲದೆ ಈಗಿನ ಕಾಲದಲ್ಲಿ ಬಿತ್ತನೆ ಮಾಡಲು ಆಗುವುದಿಲ್ಲ ಹೀಗಾಗಿ ಡಿಸೇಲ್ ಏರಿಕೆಯಿಂದ ಸಾಮಾನ್ಯ ರೈತರಿಗೆ ಇದು ಹೊರೆಯಾಗುತ್ತಿದೆ. ಇನ್ನೂ ಸರಕಾರ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಕೊಡುತ್ತದೆ ಅದು ಕೂಡ ಅವರ್ಷದಿಂದ ವರ್ಷಕ್ಕೆ ಅದರ ದರದಲ್ಲಿಯೂ ಕೂಡ ಏರಿಕೆಯಾಗುತ್ತಿದೆಂದು ರೈತರು ಹೇಳುತ್ತಿದ್ದಾರೆ.
ರೈತರ ಕಷ್ಟಗಳನ್ನು ಯಾರು ಕೆಳುತ್ತಾರೆ. ಕೂಲಿ ಆಳುಗಳ ಸಮಸ್ಯೆ, ರಸಗೊಬ್ಬರದ ದರಲ್ಲಿ ಏರಿಕೆ, ಉಳುಮೆ ಮಾಡುವ ಟ್ರಾಕ್ಟರ್ ದರದಲ್ಲಿ ಏರಿಕೆ, ಇನ್ನೊಂದು ಕಡೆ ಬೀಜಗಳ ಕೊರೆತೆ ಹೀಗಾದ್ರೆ ರೈತರು ಜೀವನ ಮಾಡುವುದು ಹೇಗೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.