ಭಾರತದಲ್ಲೂ ಕೆಲ ರಾಜ್ಯಗಳ ಸಾಲ ಪ್ರಮಾಣ ಶ್ರೀಲಂಕಾದಷ್ಟೇ ಇದೆ! ನಮ್ಮ ಕರ್ನಾಟಕದ ಸಾಲ ಶೂಲ ಎಷ್ಟಿದೆ? ಸ್ಪೆಷಲ್ ರಿಪೋರ್ಟ್ ಇಲ್ಲಿದೆ
ಭಾರತದ ನೆರೆಯ ಶ್ರೀಲಂಕಾ ದೇಶವು ಸದ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಶ್ರೀಲಂಕಾದ ಸಾಲದ ಪ್ರಮಾಣ 6 ಲಕ್ಷ ಕೋಟಿ ರೂಪಾಯಿಯಷ್ಟಿದೆ. ಆದರೆ, ಭಾರತದಲ್ಲೂ ಕೆಲ ರಾಜ್ಯಗಳ ಸಾಲದ ಪ್ರಮಾಣವು ಶ್ರೀಲಂಕಾ ದೇಶದಷ್ಟೇ ಇರೋದು ವಿಶೇಷ. ಭಾರತದಲ್ಲಿ ಯಾವ್ಯಾವ ರಾಜ್ಯಗಳ ಸಾಲದ ಪ್ರಮಾಣ ಎಷ್ಟಿದೆ? ನಮ್ಮ ಕರ್ನಾಟಕ ರಾಜ್ಯದ ಸಾಲದ ಪ್ರಮಾಣ ಎಷ್ಟಿದೆ? ಎಂಬುದರ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.
ಭಾರತದ ನೆರೆಯ ಶ್ರೀಲಂಕಾ ದೇಶವು ಸದ್ಯ ಆರ್ಥಿಕವಾಗಿ ದಿವಾಳಿಯಾಗಿದೆ (Default). ಶ್ರೀಲಂಕಾದ ಸಾಲದ ಪ್ರಮಾಣ 6 ಲಕ್ಷ ಕೋಟಿ ರೂಪಾಯಿಯಷ್ಟಿದೆ. ಆದರೆ, ಭಾರತದಲ್ಲೂ ಕೆಲ ರಾಜ್ಯಗಳ ಸಾಲದ ಪ್ರಮಾಣವು ಶ್ರೀಲಂಕಾ ದೇಶದಷ್ಟೇ ಇರೋದು ವಿಶೇಷ. ಭಾರತದಲ್ಲಿ ಯಾವ್ಯಾವ ರಾಜ್ಯಗಳ ಸಾಲದ ಪ್ರಮಾಣ ಎಷ್ಟಿದೆ? ನಮ್ಮ ಕರ್ನಾಟಕ ರಾಜ್ಯದ (Karnataka) ಸಾಲದ ಪ್ರಮಾಣ ಎಷ್ಟಿದೆ (Loan)? ಎಂಬುದರ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.
ಭಾರತದ ರಾಜ್ಯಗಳ ಸಾಲದ ಪ್ರಮಾಣ ಶ್ರೀಲಂಕಾಕ್ಕಿಂತ ಹೆಚ್ಚು!! ಭಾರತದ ನೆರೆಯ ಶ್ರೀಲಂಕಾ ದೇಶವು ಈಗ ಆರ್ಥಿಕವಾಗಿ ದಿವಾಳಿಯಾಗಿದೆ. ಶ್ರೀಲಂಕಾದ ವಿದೇಶಿ ವಿನಿಯಮ ಸಂಗ್ರಹ ಸಂಪೂರ್ಣ ಖಾಲಿಯಾಗಿದೆ. ಶ್ರೀಲಂಕಾದ ಸಾಲದ ಪ್ರಮಾಣವೇ 79 ಬಿಲಿಯನ್ ಡಾಲರ್ ನಷ್ಟಿದೆ. ಶ್ರೀಲಂಕಾದ ವಾರ್ಷಿಕ ಜಿಡಿಪಿ ಪ್ರಮಾಣ 81 ಬಿಲಿಯನ್ ಡಾಲರ್. ಶ್ರೀಲಂಕಾದ ಬಳಿ ವಿದೇಶಿ ವಿನಿಮಯ ಸಂಗ್ರಹ ಖಾಲಿಯಾಗಿರುವುದರಿಂದ ವಿದೇಶಗಳಿಂದ ಪೆಟ್ರೋಲ್, ಡೀಸೆಲ್, ಆಹಾರ ಸಾಮಗ್ರಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಖರೀದಿ ಮಾಡಲು ಹಣ ಇಲ್ಲ. ಪೆಟ್ರೋಲ್, ಡೀಸೆಲ್, ಆಹಾರ ಸಾಮಗ್ರಿ, ಔಷಧ ಸಾಮಗ್ರಿ ಖರೀದಿಗೂ ಶ್ರೀಲಂಕಾ ಈಗ ಭಾರತದ ಬಳಿ ಹಣವನ್ನು ಸಾಲವಾಗಿ ಪಡೆದಿದೆ.
ಭಾರತವು 1 ಬಿಲಿಯನ್ ಡಾಲರ್ ಹಣವನ್ನು ಸಾಲದ ರೂಪದಲ್ಲಿ ಶ್ರೀಲಂಕಾಗೆ ನೀಡುತ್ತಿದೆ. 1 ಬಿಲಿಯನ್ ಡಾಲರ್ ಅಂದರೇ, 7,500 ಕೋಟಿ ರೂಪಾಯಿ. ಸಾಲದ ಹಣದಲ್ಲೇ ಭಾರತದಿಂದ ಪೆಟ್ರೋಲ್, ಡೀಸೆಲ್, ಅಕ್ಕಿ, ಔಷಧ ಸಾಮಗ್ರಿಗಳನ್ನು ಶ್ರೀಲಂಕಾಕ್ಕೆ ಕಳೆದ ತಿಂಗಳಿನಿಂದ ರವಾನೆ ಮಾಡಲಾಗುತ್ತಿದೆ. ಶ್ರೀಲಂಕಾ ಮತ್ತು ಪಾಕಿಸ್ತಾನ ದೇಶಗಳು ಚೀನಾದಿಂದ ಬಾರಿ ಪ್ರಮಾಣದ ಸಾಲ ಪಡೆದು, ಸಾಲದ ಸುಳಿಗೆ ಸಿಲುಕಿವೆ. ಚೀನಾ ತನ್ನ ಸ್ನೇಹಿ ರಾಷ್ಟ್ರಗಳಿಗೆ ಬಾರಿ ಪ್ರಮಾಣದ ಸಾಲ ನೀಡಿ, ಅವುಗಳನ್ನು ಸಾಲದ ಸುಳಿಗೆ ಸಿಲುಕುವಂತೆ ಮಾಡುತ್ತಿದೆ. ಹೀಗಾಗಿ ಚೀನಾದ ಸಾಲ, ಶ್ರೀಲಂಕಾ, ಪಾಕಿಸ್ತಾನ ದೇಶಗಳಿಗೆ ಶೂಲವಾಗಿ ಪರಿಣಮಿಸಿದೆ. ಚೀನಾದ ಸಾಲ ಪಡೆದು ಬಡ್ಡಿ ಪಾವತಿಸಲಾಗದೇ, ಈಗ ಪಾಕಿಸ್ತಾನದ ಇಮ್ರಾನ್ ಖಾನ್ ತಮ್ಮ ಪ್ರಧಾನಿ ಹುದ್ದೆ ಕಳೆದುಕೊಂಡಿದ್ದಾರೆ. ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಕುರ್ಚಿಗೆ ಸಂಚಕಾರ ಬಂದಿದೆ.
ಶ್ರೀಲಂಕಾದ ಸಾಲ ಹಾಗೂ ಆರ್ಥಿಕ ದಿವಾಳಿತನದ ಬಗ್ಗೆ ಭಾರತದಲ್ಲೂ ಚರ್ಚೆಯಾಗುತ್ತಿದೆ. ಭಾರತದಲ್ಲೂ ರಾಜ್ಯ ಸರ್ಕಾರಗಳು ಜನರಿಗೆ ಉಚಿತ ಗಿಫ್ಟ್ ನೀಡುತ್ತಿರುವುದರಿಂದ ಮುಂದೆ ಶ್ರೀಲಂಕಾದ ಆರ್ಥಿಕ ದಿವಾಳಿತನದ ಸ್ಥಿತಿ ಬಂದೊದಗಲು ಕಾರಣವಾಗಬಹುದು ಎಂದು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಪ್ರಧಾನಿ ಮೋದಿ ಜೊತೆಗಿನ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಬಿಜೆಪಿ, ಕಾಂಗ್ರೆಸ್, ಆಪ್, ಡಿಎಂಕೆ, ಟಿಎಂಸಿ, ಜೆಎಂಎಂ ಸೇರಿದಂತೆ ಎಲ್ಲ ಪಕ್ಷಗಳು ಕೂಡ ತಮ್ಮ ತಮ್ಮ ಆಳ್ವಿಕೆಯ ರಾಜ್ಯಗಳಲ್ಲಿ ಜನರಿಗೆ ಉಚಿತ ಗಿಫ್ಟ್ ಗಳನ್ನು ನೀಡುತ್ತಿವೆ.
ಜನರಿಗೆ ಉಚಿತ ಅಕ್ಕಿ, ಉಚಿತ ಆಹಾರ ಧಾನ್ಯ, ಉಚಿತ ಕ್ಯಾಂಟೀನ್ ಊಟ, ರೈತರಿಗೆ, ನೇಕಾರರಿಗೆ ಸಬ್ಸಿಡಿ ಸೇರಿದಂತೆ ಅನೇಕ ಉಚಿತ ಗಿಫ್ಟ್ ಗಳನ್ನು ನೀಡುತ್ತಿವೆ. ಇವುಗಳಿಂದ ರಾಜ್ಯ ಸರ್ಕಾರಗಳು ಸಾಲದ ಪ್ರಮಾಣ ಏರಿಕೆಯಾಗುತ್ತಿದೆ. ಇವು ಉತ್ಪಾದಕ ಹೂಡಿಕೆಗಳಲ್ಲ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ರಾಜ್ಯ ಸರ್ಕಾರಗಳು ಸರಿಯಾಗಿ ಆರ್ಥಿಕ ನಿರ್ವಹಣೆ ಮಾಡದೇ ಇದ್ದರೇ, ಶ್ರೀಲಂಕಾದ ಹಾದಿಯಲ್ಲಿ ಹೋಗಬಹುದು ಎಂಬ ಆತಂಕ ಆರ್ಥಿಕ ತಜ್ಞರಲ್ಲಿದೆ. ಭಾರತದಲ್ಲೂ ಈಗ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಾಲದ ಪ್ರಮಾಣದ ಬಗ್ಗೆ ಚರ್ಚೆಯಾಗುತ್ತಿದೆ. ಟಿಎಂಸಿ ಸೇರಿದಂತೆ ವಿಪಕ್ಷಗಳು ಕೇಂದ್ರ ಸರ್ಕಾರ ಸರಿಯಾಗಿ ಆರ್ಥಿಕತೆಯನ್ನು ನಿರ್ವಹಿಸಬೇಕು. ಇಲ್ಲದಿದ್ದರೇ, ದೇಶ ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿ, ಧೋರಣೆಗಳಿಂದ ದಿವಾಳಿಯಾಗುತ್ತೆ ಎಂದು ಕೇಂದ್ರ ಸರ್ಕಾರವನ್ನು ಎಚ್ಚರಿಸಿವೆ.
ಆದರೇ, ಸದ್ಯಕ್ಕೆ ದೇಶದ ವಿದೇಶಿ ವಿನಿಮಯ ಸಂಗ್ರಹ ಸದೃಢವಾಗಿದೆ. ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ 2022ರ ಮಾರ್ಚ್ 25ಕ್ಕೆ ಕೊನೆಗೊಂಡ ವಾರದಲ್ಲಿ 617 ಬಿಲಿಯನ್ ಡಾಲರ್ ಸಂಗ್ರಹ ಇದೆ. ಆದರೆ, ಕಳೆದ ಮೂರು ವಾರಗಳಿಂದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಕುಸಿತವಾಗುತ್ತಿದೆ. ರಷ್ಯಾ-ಉಕ್ರೇನ್ ಯುದ್ಧ, ಕಚ್ಚಾತೈಲದ ಬೆಲೆ ಏರಿಕೆ ಸೇರಿದಂತೆ ಕೆಲ ಕಾರಣಗಳಿಂದ ಭಾರತದ ವಿದೇಶಿ ವಿನಿಮಯ ಸಂಗ್ರಹ ಕುಸಿಯುತ್ತಿದೆ. ಮಾರ್ಚ್ 25ಕ್ಕೆ ಕೊನೆಗೊಂಡ ವಾರದಲ್ಲಿ 2.3 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಸಂಗ್ರಹದಲ್ಲಿ ಕುಸಿತವಾಗಿದೆ. ಇದಕ್ಕೂ ಮೊದಲ 2 ವಾರಗಳಲ್ಲೂ ಕೂಡ 2.5 ಬಿಲಿಯನ್ ಡಾಲರ್ ಹಾಗೂ 9.6 ಬಿಲಿಯನ್ ಡಾಲರ್ ಕುಸಿತವಾಗಿತ್ತು. ಕಳೆದ ಮೂರು ವಾರಗಳಲ್ಲೂ ಹತ್ತಿರ ಹತ್ತಿರ 15 ಬಿಲಿಯನ್ ಡಾಲರ್ ನಷ್ಟು ವಿದೇಶಿ ವಿನಿಮಯ ಸಂಗ್ರಹದಲ್ಲಿ ಕುಸಿತವಾಗಿದೆ. ಆದರೂ, ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಸಾಕಷ್ಟು ಹಣ ಇದೆ.
ಹೀಗಾಗಿ ದೇಶಕ್ಕೆ ಆರ್ಥಿಕ ದಿವಾಳಿತನದ ಆತಂಕ ಇಲ್ಲ. 1991ರ ಸ್ಥಿತಿ ಮರುಕಳಿಸುವ ಯಾವುದೇ ಭಯವೂ ಇಲ್ಲ. 1991ರಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಹಣ ಇಲ್ಲದೇ, ಚಿನ್ನ ಮಾರಬೇಕಾದ ಸ್ಥಿತಿ ಬಂದಿತ್ತು. ಆದರೇ, ರಾಜ್ಯ ಸರ್ಕಾರಗಳ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಎಂಬುದು ರಾಜ್ಯಗಳ ಸಾಲದ ಪ್ರಮಾಣವನ್ನು ನೋಡಿದರೆ, ಸ್ಪಷ್ಟವಾಗುತ್ತೆ.
ಶ್ರೀಲಂಕಾ ದೇಶದ ಸಾಲದ ಪ್ರಮಾಣ 79.6 ಬಿಲಿಯನ್ ಡಾಲರ್. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೇ, 6 ಲಕ್ಷ ಕೋಟಿ ರೂಪಾಯಿ. ಆದರೆ, ಭಾರತದ ಕೆಲ ರಾಜ್ಯಗಳ ಸಾಲದ ಪ್ರಮಾಣವು ಶ್ರೀಲಂಕಾದ ಸಾಲದ ಪ್ರಮಾಣದಷ್ಟೇ ಇದೆ ಎನ್ನುವುದು ಕೂಡ ವಾಸ್ತವ. ಕೆಲ ರಾಜ್ಯಗಳ ಸಾಲದ ಪ್ರಮಾಣವು ಶ್ರೀಲಂಕಾ ದೇಶದ ಸಾಲಕ್ಕಿಂತ ಹೆಚ್ಚಾಗಿಯೂ ಇದೆ. ಈಗ ವಿವಿಧ ರಾಜ್ಯಗಳ ಸಾಲದ ಪ್ರಮಾಣವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ವಿವಿಧ ರಾಜ್ಯಗಳ ಸಾಲದ ಪ್ರಮಾಣ ತಮಿಳುನಾಡು ರಾಜ್ಯದ ಸಾಲದ ಪ್ರಮಾಣ 6.6 ಲಕ್ಷ ಕೋಟಿ ರೂಪಾಯಿ. ಮಹಾರಾಷ್ಟ್ರ ರಾಜ್ಯ ಸರ್ಕಾರದ ಸಾಲದ ಪ್ರಮಾಣ 6.8 ಲಕ್ಷ ಕೋಟಿ ರೂ. ಪಶ್ಚಿಮ ಬಂಗಾಳದ ಸಾಲದ ಪ್ರಮಾಣ 5.62 ಲಕ್ಷ ಕೋಟಿ ರೂಪಾಯಿ ರಾಜಸ್ಥಾನದ ಸಾಲದ ಪ್ರಮಾಣ 4.7 ಲಕ್ಷ ಕೋಟಿ ರೂ. ಪಂಜಾಬ್ ರಾಜ್ಯದ ಸಾಲದ ಪ್ರಮಾಣ 3 ಲಕ್ಷ ಕೋಟಿ ರೂ. ಉತ್ತರ ಪ್ರದೇಶ ರಾಜ್ಯದ ಸಾಲದ ಪ್ರಮಾಣ 6.6 ಲಕ್ಷ ಕೋಟಿ ರೂ ಕರ್ನಾಟಕದ ಸಾಲದ ಪ್ರಮಾಣ 5.18 ಲಕ್ಷ ಕೋಟಿ ರೂಪಾಯಿ ಮಧ್ಯಪ್ರದೇಶ ರಾಜ್ಯದ ಸಾಲದ ಪ್ರಮಾಣ 3.37 ಲಕ್ಷ ಕೋಟಿ ರೂಪಾಯಿ ಗುಜರಾತ್ ರಾಜ್ಯದ ಸಾಲದ ಪ್ರಮಾಣ 3.1 ಲಕ್ಷ ಕೋಟಿ ರೂಪಾಯಿ ಹರಿಯಾಣ ರಾಜ್ಯದ ಸಾಲದ ಪ್ರಮಾಣ 2.29 ಲಕ್ಷ ಕೋಟಿ ರೂ. ಉತ್ತರಾಖಂಡ್ ರಾಜ್ಯದ ಸಾಲದ ಪ್ರಮಾಣ 72 ಸಾವಿರ ಕೋಟಿ ರೂಪಾಯಿ ಹಿಮಾಚಲ ಪ್ರದೇಶದ ಸಾಲದ ಪ್ರಮಾಣ 63 ಸಾವಿರ ಕೋಟಿ ರೂಪಾಯಿ
ಕರ್ನಾಟಕದ ಸಾಲದ ಪ್ರಮಾಣವು 2024-25ನೇ ಸಾಲಿಗೆ 6.60 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಲಿದೆ. 2025-26ರ ವೇಳೆಗೆ 7.38 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಲಿದೆ ಎಂದು ಕಳೆದ ತಿಂಗಳು ಕರ್ನಾಟಕದ ವಿಧಾನಸಭೆಯಲ್ಲಿ ಮಂಡಿಸಿದ ವರದಿಯಲ್ಲಿ ಹೇಳಲಾಗಿದೆ. ರಾಜ್ಯಗಳು ಸಾಲ ಪಡೆಯುವುದಷ್ಟೇ ಅಲ್ಲದೇ, ಸಾಲ ಮರುಪಾವತಿಸಲು ಕೂಡ ಒತ್ತು ನೀಡಬೇಕಾಗಿದೆ. ಆದಾಯ ಇಲ್ಲದೇ ಇದ್ದಾಗ, ಅಭಿವೃದ್ದಿ ಕಾರ್ಯಗಳನ್ನು ನಡೆಸಲು ಸಾಲ ಪಡೆಯುವುದು ಅನಿವಾರ್ಯ ಎಂಬುದು ರಾಜ್ಯ ಸರ್ಕಾರಗಳು ನೀಡುವ ಸಮರ್ಥನೆ. ಸಾಲ ಪಡೆಯುವುದು ತಪ್ಪು ಅಲ್ಲ.
ಆದರೆ, ರಾಜ್ಯ ಸರ್ಕಾರಗಳು ಪಡೆದ ಸಾಲವನ್ನು ಮರುಪಾವತಿ ಮಾಡಲು ಕೂಡ ಒತ್ತು ನೀಡಬೇಕು. ಪಂಜಾಬ್ ರಾಜ್ಯದ ಜಿಡಿಪಿಯ ಶೇ.50ಕ್ಕಿಂತ ಹೆಚ್ಚಿನ ಪ್ರಮಾಣದ ಸಾಲ ಪಡೆಯಲಾಗಿದೆ. ಇದು ಸರಿಯಾದ ಆರ್ಥಿಕ ಸ್ಥಿತಿಯ ನಿರ್ವಹಣೆ ಅಲ್ಲ. ಕೊರೊನಾ ವೈರಸ್, ಲಾಕ್ ಡೌನ್, ಉದ್ಯಮ ವ್ಯವಹಾರಗಳ ಕುಸಿತದ ಕಾರಣದಿಂದ ರಾಜ್ಯ ಸರ್ಕಾರಗಳ ನಿರ್ವಹಣೆಗೆ ಹಣ ಇಲ್ಲದೇ, ಸಾಲದ ಪ್ರಮಾಣವು ಕಳೆದೆರೆಡು ವರ್ಷದಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.