ಬ್ಯಾನರ್ಜಿ ಮಮತೆಯಿಂದ ನೀಡಿದ್ದ 2 ಎಕರೆ ಜಾಗ ಹಿಂದಿರುಗಿಸಿದ ದಾದಾ!

ಬ್ಯಾನರ್ಜಿ ಮಮತೆಯಿಂದ ನೀಡಿದ್ದ 2 ಎಕರೆ ಜಾಗ ಹಿಂದಿರುಗಿಸಿದ ದಾದಾ!
ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ

ಜಮೈಕಾದ ವಿಶ್ವ ದಾಖಲೆಯ ಓಟಗಾರ ಉಸೇನ್ ಬೋಲ್ಟ್‌ಗೆ ಕೊರೊನಾ ವೈರಸ್ ತಗುಲಿರೋದು ದೃಢಪಟ್ಟಿದೆ. ಹೀಗಾಗಿ ಅವರು ತಮ್ಮ ಮನೆಯಲ್ಲಿಯೇ ಸೆಲ್ಫ್ ಕ್ವಾರಂಟೈನ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಉಸೇನ್ ಬೋಲ್ಟ್‌ಗೆ ಯಾವುದೇ ರೀತಿಯ ಕೊರೊನಾ ಲಕ್ಷಣಗಳು ಇಲ್ಲದೇ ಇದ್ದರೂ ಸೋಂಕು ತಗುಲಿಕೊಂಡಿದೆಯಂತೆ. ಬಿಜೆಪಿ ನೇತೃತ್ವ ವಹಿಸುತ್ತಾರಾ ದಾದಾ? ಮುಂದಿನ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವವನ್ನು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ವಹಿಸುತ್ತಾರೆಂಬ ವರದಿಗಳು ಈಗಾಗಲೇ ಓಡಾಡುತ್ತಿವೆ. ಈ ಚರ್ಚೆ ಜೋರಾಗಿರುವಾಗಲೇ ಸೌರವ್‌ ಗಂಗೂಲಿ, ಮಮತಾ ಬ್ಯಾನರ್ಜಿ ನೇತೃತ್ವದ […]

Ayesha Banu

|

Aug 25, 2020 | 4:24 PM

ಜಮೈಕಾದ ವಿಶ್ವ ದಾಖಲೆಯ ಓಟಗಾರ ಉಸೇನ್ ಬೋಲ್ಟ್‌ಗೆ ಕೊರೊನಾ ವೈರಸ್ ತಗುಲಿರೋದು ದೃಢಪಟ್ಟಿದೆ. ಹೀಗಾಗಿ ಅವರು ತಮ್ಮ ಮನೆಯಲ್ಲಿಯೇ ಸೆಲ್ಫ್ ಕ್ವಾರಂಟೈನ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಉಸೇನ್ ಬೋಲ್ಟ್‌ಗೆ ಯಾವುದೇ ರೀತಿಯ ಕೊರೊನಾ ಲಕ್ಷಣಗಳು ಇಲ್ಲದೇ ಇದ್ದರೂ ಸೋಂಕು ತಗುಲಿಕೊಂಡಿದೆಯಂತೆ.

ಬಿಜೆಪಿ ನೇತೃತ್ವ ವಹಿಸುತ್ತಾರಾ ದಾದಾ? ಮುಂದಿನ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವವನ್ನು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ವಹಿಸುತ್ತಾರೆಂಬ ವರದಿಗಳು ಈಗಾಗಲೇ ಓಡಾಡುತ್ತಿವೆ. ಈ ಚರ್ಚೆ ಜೋರಾಗಿರುವಾಗಲೇ ಸೌರವ್‌ ಗಂಗೂಲಿ, ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಲ ಸರಕಾರ ತನಗೆ ನೀಡಿದ್ದ 2 ಎಕರೆ ಜಾಗವನ್ನು ಹಿಂತಿರುಗಿಸಿದ್ದಾರೆ.

ವಾರದೊಳಗೆ ಐಪಿಎಲ್ ವೇಳಾಪಟ್ಟಿ ಐಪಿಎಲ್ ಸೀಸನ್ 14ರ ವೇಳಾಪಟ್ಟಿ ಪ್ರಕಟಿಸಲು ವಿಳಂಬವಾಗಿದೆ, ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ವಾರದೊಳಗೆ ವೇಳಾಪಟ್ಟಿ ಗೊಂದಲವನ್ನು ಪರಿಹರಿಸಲಾಗುತ್ತದೆ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ. ಯುಎಇ ತಲುಪಿರೋ ಎಂಟು ತಂಡಗಳು ಸದ್ಯ ಕ್ವಾರಂಟೈನ್ ನಲ್ಲಿವೆ.

ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಈ ಬಾರಿಯ ಅರ್ಜುನ್ ಪ್ರಶಸ್ತಿ ಪಡೆದುಕೊಂಡಿರೋ ಟೀಮ್ ಇಂಡಿಯಾದ ವೇಗಿ ಇಶಾಂತ್ ಶರ್ಮಾ, ಸಂತಸ ಹಂಚಿಕೊಂಡಿದ್ದಾರೆ. ಕಳೆದ 13 ವರ್ಷಗಳ ಕಾಲ ಪಟ್ಟಿರುವ ಪರಿಶ್ರಮಕ್ಕೆ ದೊರೆತ ಗೌರವ ಇದು. ತನಗೆ ಹಾಗೂ ತನ್ನ ಕುಟುಂಬಕ್ಕೆ ಈ ಕ್ಷಣ ತುಂಬಾ ಹೆಮ್ಮೆಯ ಸಂದರ್ಭವಾಗಿದೆ ಅಂತಾ ಇಶಾಂತ್ ಶರ್ಮಾ ಹೇಳಿದ್ದಾರೆ.

600ನೇ ವಿಕೆಟ್ ನತ್ತ ಜಿಮ್ಮಿ ಇಂಗ್ಲೆಂಡ್​ನ ಹಿರಿಯ ವೇಗಿ, ಟೆಸ್ಟ್ ಕ್ರಿಕೆಟ್​ನಲ್ಲಿ 599 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಪಾಕ್​ ವಿರುದ್ದ ನಡೆಯುತ್ತಿರೋ ಮೂರನೇ ಟೆಸ್ಟ್ ನಲ್ಲಿ ಜಿಮ್ಮಿ‌ ಇನ್ನೊಂದು ವಿಕೆಟ್ ಪಡೆದ್ರೆ 600 ವಿಕೆಟ್ ಕ್ಲಬ್ ಸೇರಲಿದ್ದಾರೆ. ಇಂಗ್ಲೆಂಡ್​ನಲ್ಲಿ ಪಾಕ್​ ನೀಡುತ್ತಿರುವ ಪ್ರದರ್ಶನದ ಬಗ್ಗೆ ಟೀಕೆ ವ್ಯಕ್ತವಾಗ್ತಿದ್ದಂತೆ, ಅಚ್ಚರಿ ಫಲಿತಾಂಶ ನೀಡೋ ತವಕದಲ್ಲಿ ಜಿಮ್ಮಿ ಇದ್ದಾರೆ.

ರಾಘಣ್ಣ ಈಸ್ ಬ್ಯಾಕ್ ಬಣ್ಣದ ಲೋಕದಲ್ಲಿ ಮತ್ತೆ ಹೊಸ ಛಾಪು ಮೂಡಿಸಲು ನಟ ರಾಘವೇಂದ್ರ ರಾಜಕುಮಾರ್ ಮುಂದಾಗಿದ್ದಾರೆ. ಆಡಿಸಿದಾತ ಅನ್ನೋ ಹೊಸ ಟೈಟಲ್ ನೊಂದಿಗೆ ರಗಡ್ ಲುಕ್ ನಲ್ಲಿ ಕಿಕ್ ಕೊಡ್ತಿದ್ದಾರೆ. ಇದು ರಾಘಣ್ಣನ 25 ನೇ ಸಿನಿಮಾ. ರಾಘವೇಂದ್ರ ರಾಜಕುಮಾರ್ ಪಾತ್ರ ಪರಿಚಯಿಸೋ ಟೀಸರ್ ಗಮನ ಸೆಳೆದಿದೆ.

ಬ್ಯೂಟಿಫುಲ್ ಲೈಫ್​ನಲ್ಲಿ ಪೃಥ್ವಿ ಲೈಫ್ ಈಸ್ ಬ್ಯೂಟಿಫುಲ್ ಅಂತಿದ್ದಾರೆ ನಟ ಪೃಥ್ವಿ ಅಂಬರ್. ದಿಯಾ ಚಿತ್ರದಲ್ಲಿ ಆದಿ ಆಗಿ ಮಿಂಚಿದ್ದ ಪೃಥ್ವಿಯ ಹೊಸ ಚಿತ್ರ ಲಾಂಚ್ ಆಗಿದೆ. ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಮಮ್ಮಿ ಸೇವ್ ಮಿ ಚಿತ್ರ ಖ್ಯಾತಿಯ ನಿರ್ದೇಶಕ ಲೋಹಿತ್ ಆ್ಯಕ್ಷನ್ ಕಟ್ ಹೇಳೋದ್ರ ಜೊತೆಗೆ ನಿರ್ಮಾಣ ಮಾಡ್ತಿದ್ದಾರೆ.

ಌಕ್ಷನ್ ಪ್ರಿನ್ಸ್ ಹೊಸ ದಾಖಲೆ ಸ್ಯಾಂಡಲ್ ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಧ್ರುವ ಸರ್ಜಾರ ಇನ್ಸ್ಟಾಗ್ರಾಂ ಫಾಲೋಯರ್ಸ್ ಸಂಖ್ಯೆ ಒಂದು ಮಿಲಿಯನ್ ದಾಟಿದೆ. ಈ ಖುಷಿಯನ್ನ ಧನ್ಯವಾದ ಹೇಳೋದ್ರ ಮೂಲಕ ಅಭಿಮಾನಿಗಳು ಸೆಲಬ್ರೇಟ್ ಮಾಡ್ತಿದ್ದಾರೆ.

‘ಸ್ಟಾರ್’​ಗೆ ‘ಸೂಪರ್’ ವೆಲ್ಕಂ ರಿಯಲ್ ಸ್ಟಾರ್ ಉಪೇಂದ್ರ‌ ಕುಟುಂಬದಿಂದ ಸೂಪರ್ ಸ್ಟಾರ್ ಒಬ್ರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಉಪ್ಪಿ ಅಣ್ಣನ ಮಗ ನಿರಂಜನ್ ಸೂಪರ್ ಸ್ಟಾರ್ ಟೈಟಲ್ ನಲ್ಲಿ ಹೀರೋ ಆಗಿ ಎಂಟ್ರಿಕೊಡ್ತಿದ್ದಾರೆ. ಟೀಸರ್ ಮೂಲಕವೇ ನಿರಂಜನ್‌ ನಿರೀಕ್ಷೆ ಹುಟ್ಟು ಹಾಕಿದ್ದಾರೆ. ರಿಲೀಸ್ ಆಗಿರೋ ಟೀಸರ್ 1 ಮಿಲಿಯನ್ ವ್ಯೂಸ್ ನತ್ತ ಹೆಜ್ಜೆ ಹಾಕ್ತಿದೆ.

Follow us on

Related Stories

Most Read Stories

Click on your DTH Provider to Add TV9 Kannada