ರಾಗಿಣಿ CCB ವಶಕ್ಕೆ.. ಸ್ವಲ್ಪದರಲ್ಲಿ ಮುಜುಗರದಿಂದ ಪಾರಾದ ಆರೋಗ್ಯ ಇಲಾಖೆ, ಹೇಗೆ?

ರಾಗಿಣಿ CCB ವಶಕ್ಕೆ.. ಸ್ವಲ್ಪದರಲ್ಲಿ ಮುಜುಗರದಿಂದ ಪಾರಾದ ಆರೋಗ್ಯ ಇಲಾಖೆ, ಹೇಗೆ?

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ ವಿಚಾರವಾಗಿ ನಟಿ ರಾಗಿಣಿಯನ್ನ CCB ಅಧಿಕಾರಿಗಳು ವಶಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಮುಜುಗರದಿಂದ ತಪ್ಪಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಇದಕ್ಕೆ ಕಾರಣ, ಆರೋಗ್ಯ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯೊಂದಕ್ಕೆ ರಾಗಿಣಿ ದ್ವಿವೇದಿ ರಾಯಭಾರಿಯಾಗಲು ಪ್ರಯತ್ನಿಸಿದ್ದರಂತೆ. ವಿಶೇಷಚೇತನ ವ್ಯಕ್ತಿಗಳು ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮದ ಯೋಜನೆಗೆ ರಾಯಭಾರಿಯಾಗಲು ರಾಗಿಣಿ ಯತ್ನ ನಡೆಸಿದ್ದರಂತೆ.

ಸ್ವಯಂಸೇವಾ ಸಂಸ್ಥೆಯ ಮೂಲಕ ವಿಶೇಷಚೇತನ ಮಕ್ಕಳ ಕಲ್ಯಾಣಕ್ಕೆ ಯೋಜನೆ ರೂಪಿಸಿದ್ದ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಲು ಚಿತ್ರನಟಿ ರಾಗಿಣಿ ಮುಂದಾಗಿದ್ದರು ಎಂದು ತಿಳಿದುಬಂದಿದೆ.

ಆದರೆ, ಕೊರೊನಾ ಲಾಕ್​ಡೌನ್​ನಿಂದಾಗಿ ಯೋಜನೆ ಜಾರಿಗೆ ಅಡ್ಡಿಯಾಗಿದ್ದರಿಂದ ರಾಗಿಣಿ ಪ್ರಯತ್ನಕ್ಕೆ ಹಿನ್ನೆಡೆಯಾಗಿತ್ತು ಎಂದು ಹೇಳಲಾಗಿದೆ. ಈ ವಿಚಾರವಾಗಿ ರಾಗಿಣಿ ಸಿಎಂ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಶ್ರೀರಾಮುಲುರನ್ನೂ ಭೇಟಿ ಮಾಡಿ ಪ್ರಸ್ತಾಪಿಸಿದ್ದರಂತೆ. ತಕ್ಷಣಕ್ಕೆ ರಾಯಭಾರಿಯಾಗಿ ನೇಮಿಸಲು ಸಾಧ್ಯವಿಲ್ಲ. ಸಮಿತಿ ರಚಿಸಿ ನಂತರ ತೀರ್ಮಾನ ಮಾಡುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದರಂತೆ.

ಇದೀಗ ಡ್ರಗ್ಸ್ ದಂಧೆ ಆರೋಪದ ಹಿನ್ನೆಲೆಯಲ್ಲಿ ರಾಗಿಣಿ ಪೊಲೀಸ್ ವಶಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಸದ್ಯ ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ಮುಜುಗರದಿಂದ ಪಾರಾಗಿದೆ.

ಇದನ್ನೂ ಓದಿ: ಡ್ರಗ್ಸ್ ದಂಧೆ: ‘ತುಪ್ಪದ ಬೆಡಗಿ’ಗೂ ನೋಟಿಸ್, ಸಿಸಿಬಿಯಿಂದ ಆಪ್ತ ರವಿಗೆ ಫುಲ್ ಡ್ರಿಲ್

CCBಗೆ ನಾಳೆ, ನಾಡಿದ್ದು ಹಾಜರಾಗ್ತೀನಿ ಅಂತಾ ಹೇಳಿದ್ಯಾಕೆ ನಟಿ ರಾಗಿಣಿ?

Published On - 10:53 am, Fri, 4 September 20

Click on your DTH Provider to Add TV9 Kannada