ನಿಷೇಧದ ಹೊರತಾಗಿಯೂ ರಾಜ್ಯದಲ್ಲಿ ಮಲ ಹೊರುವ ಪದ್ಧತಿ; ಹೈಕೋರ್ಟ್​ನಿಂದ ಸ್ವಯಂಪ್ರೇರಿತ ಪಿಐಎಲ್ ದಾಖಲು

ನಿಷೇಧದ ಹೊರತಾಗಿಯೂ ರಾಜ್ಯದಲ್ಲಿ ಮಲ ಹೊರುವ ಪದ್ಧತಿ ಇರುವುದರಿಂದ  ಹೈಕೋರ್ಟ್(High Court​)ನಿಂದ ಸ್ವಯಂಪ್ರೇರಿತ ಪಿಐಎಲ್(PIL) ದಾಖಲು ಮಾಡಲಾಗಿದೆ. ಬಡತನ ಮತ್ತು ಜಾತಿಯ ಕಾರಣಕ್ಕೆ ಅನಿಷ್ಟ ಪದ್ಧತಿ ಜೀವಂತವಿರುವುದು ಶೋಚನೀಯ ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ರಿದ್ದ ಹೈಕೋರ್ಟ್ ಪೀಠ ಆಕ್ರೋಶ ವ್ಯಕ್ತಪಡಿಸಿದೆ.

ನಿಷೇಧದ ಹೊರತಾಗಿಯೂ ರಾಜ್ಯದಲ್ಲಿ ಮಲ ಹೊರುವ ಪದ್ಧತಿ; ಹೈಕೋರ್ಟ್​ನಿಂದ ಸ್ವಯಂಪ್ರೇರಿತ ಪಿಐಎಲ್ ದಾಖಲು
ಹೈಕೋರ್ಟ್​
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Jan 03, 2024 | 6:57 PM

ಬೆಂಗಳೂರು, ಜ.03: ನಿಷೇಧದ ಹೊರತಾಗಿಯೂ ರಾಜ್ಯದಲ್ಲಿ ಮಲ ಹೊರುವ ಪದ್ಧತಿ ಇರುವುದರಿಂದ  ಹೈಕೋರ್ಟ್(High Court​)ನಿಂದ ಸ್ವಯಂಪ್ರೇರಿತ ಪಿಐಎಲ್(PIL) ದಾಖಲು ಮಾಡಲಾಗಿದೆ. ಬಡತನ ಮತ್ತು ಜಾತಿಯ ಕಾರಣಕ್ಕೆ ಅನಿಷ್ಟ ಪದ್ಧತಿ ಜೀವಂತವಿರುವುದು ಶೋಚನೀಯ ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ರಿದ್ದ ಹೈಕೋರ್ಟ್ ಪೀಠ ಆಕ್ರೋಶ ವ್ಯಕ್ತಪಡಿಸಿದೆ. ಈ ವೇಳೆ ನ್ಯಾಯಮೂರ್ತಿ ವರಾಳೆ ಅವರು ‘ ಮಣ್ಣಿಗಾದರೂ ಮೌಲ್ಯವಿದೆ, ಮನುಷ್ಯರಿಗಿಲ್ಲ. ಹಣದಿಂದ ಮರ್ಯಾದೆ ಅಳೆಯದ ದಿನ‌ ಎಂದಾದರೂ ಬರಲಿ ಎಂಬ ಕವಿ ಸಾಯಿದ್ ಲೂಧಿಯಾನ್ವಿ ಕವಿತೆಯನ್ನು ಉಲ್ಲೇಖಿಸಿದ್ದಾರೆ.

ಎಲ್ಲ ಗ್ರಾಮಗಳಲ್ಲಿ ಸ್ವಚ್ಚ ಭಾರತ ಗೊತ್ತಿದೆ. ಆದರೆ, ಮಲ ಹೊರುವುದರ ನಿಷೇಧದ ಅರಿವಿಲ್ಲ. ಮಲದ ಗುಂಡಿ ಸ್ವಚ್ಚತೆಗೆ ಯಂತ್ರಗಳಿದ್ದರೂ ಮನುಷ್ಯರನ್ನು ಬಳಸುತ್ತಿರುವುದೇಕೆ. ಬಡತನದ ಕಾರಣಕ್ಕೆ ಪ್ರಾಣಿಯಂತಹ ಜೀವನ‌ ನಡೆಸಬೇಕೇ?, ಇದು ಮಾನವ ಸಮಾಜವೇ ನಾಚಿಕೆ ಪಡಬೇಕಾದ ವಿಚಾರವಾಗಿದೆ.

ಇದನ್ನೂ ಓದಿ:12 ವರ್ಷದ ಅಪ್ರಾಪ್ತ ಬಾಲಕಿಯ ಗರ್ಭಪಾತ ಮಾಡಲು ಅನುಮತಿ ನಿರಾಕರಿಸಿದ ಕೇರಳ ಹೈಕೋರ್ಟ್: ವರದಿ

ಇನ್ನು ಈ ಕುರಿತು ಜನವರಿ.8 ಕ್ಕೆ ಪಿಐಎಲ್ ವಿಚಾರಣೆ ನಡೆಸಲು ಹೈಕೋರ್ಟ್ ನಿರ್ಧಾರ ಮಾಡಿದೆ. ಜೊತೆಗೆ ಕೋರ್ಟ್​ಗೆ ಸಲಹೆ ನೀಡಲು ಅಮೈಕಸ್ ಕ್ಯೂರಿಯಾಗಿ ವಕೀಲ ಶ್ರೀಧರ್ ಪ್ರಭು ಎಂಬುವವರು ನೇಮಕ ಮಾಡಲಾಗಿದೆ. ಮಲ ಹೊರುವ ಪದ್ಧತಿಯನ್ನು ಕಾನೂನು ನಿಷೇಧಿಸಿದೆ. ಆದರೆ, ಜಾತಿ ತಾರತಮ್ಯ ಮತ್ತು ಬಡತನವು ಈ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದೆ. ನಮ್ಮ ಆರ್ಥಿಕತೆ ಬೆಳೆಯುತ್ತಿದೆ ಮತ್ತು ನಾವು ಅತಿ ದೊಡ್ಡ ಪ್ರಜಾಪ್ರಭುತ್ವವಾಗಿದ್ದೇವೆ. ಆದರೆ, ಇಲ್ಲಿ ಮಲ ಹೊರುವ ಪದ್ಧತಿ ಇನ್ನೂ ಜೀವಂತವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:55 pm, Wed, 3 January 24