AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​ಲೈನ್ ಕ್ಲಾಸ್ ತಂದ ಅವಾಂತರ: ವಿದ್ಯಾರ್ಥಿಗಳ ಆರೋಗ್ಯಕ್ಕೆ ಮಾರಕವಾಗ್ತಿದ್ಯಾ ಆನ್​ಲೈನ್​​ ಪಾಠ?

ಸತತ ಆನ್​ಲೈನ್ ಕ್ಲಾಸ್​ಗಳಿಂದ ಮತ್ತೊಂದು ಅವಾಂತರ ಸೃಷ್ಟಿಯಾಗಿದೆ. ಹೌದು, ಆನ್​ಲೈನ್​ ಕ್ಲಾಸ್​​ಗಳಿಂದ ಇದೀಗ ಪೋಷಕರು ಹಾಗೂ ಶಿಕ್ಷಕರಲ್ಲಿ ಹೊಸ ಟೆನ್ಷನ್ ಶುರುವಾಗಿದೆ. ಆನ್​ಲೈನ್ ಪಾಠಗಳಿಂದ ಮಕ್ಕಳ ಕಣ್ಣಿಗೆ ಕುತ್ತು ಬಂದಿದೆ.

ಆನ್​ಲೈನ್ ಕ್ಲಾಸ್ ತಂದ ಅವಾಂತರ: ವಿದ್ಯಾರ್ಥಿಗಳ ಆರೋಗ್ಯಕ್ಕೆ ಮಾರಕವಾಗ್ತಿದ್ಯಾ ಆನ್​ಲೈನ್​​ ಪಾಠ?
ಸಾಂದರ್ಭಿಕ ಚಿತ್ರ
KUSHAL V
|

Updated on: Mar 07, 2021 | 4:44 PM

Share

ಬೆಂಗಳೂರು: ಕೊರೊನಾ ಮಹಾಮಾರಿಯ ಕೆಂಗಣ್ಣಿನಿಂದ ಶಾಲಾ ಮಕ್ಕಳನ್ನು ದೂರವಿಡಲು ಶಿಕ್ಷಣ ಇಲಾಖೆ ತಜ್ಞರ ಸಲಹೆ ಮೇರೆಗೆ ಆನ್​ಲೈನ್​ ಕ್ಲಾಸ್​ಗಳ ಮುಖಾಂತರ ಪಾಠ ಮಾಡುವ ಸಲಹೆ ನೀಡಿತ್ತು. ವಿದ್ಯಾರ್ಥಿಗಳು ತಮ್ಮ ನಿವಾಸದ ಸುರಕ್ಷತೆಯಲ್ಲೇ ಕುಳಿತು ಪಾಠ ಕೇಳಿದರೆ ಚಿಣ್ಣರಲ್ಲಿ ವೈರಸ್​ ಹರಡುವಿಕೆಯನ್ನು ತಡೆಯಬಹುದು ಎಂಬ ನಿರೀಕ್ಷೆಯಲ್ಲಿ ಈ ಯೋಚನೆಯನ್ನು ಕಾರ್ಯರೂಪಕ್ಕೆ ತರಲಾಗಿತ್ತು.

ಆದರೆ, ಈಗ ಸತತ ಆನ್​ಲೈನ್ ಕ್ಲಾಸ್​ಗಳಿಂದ ಮತ್ತೊಂದು ಅವಾಂತರ ಸೃಷ್ಟಿಯಾಗಿದೆ. ಹೌದು, ಆನ್​ಲೈನ್​ ಕ್ಲಾಸ್​​ಗಳಿಂದ ಇದೀಗ ಪೋಷಕರು ಹಾಗೂ ಶಿಕ್ಷಕರಲ್ಲಿ ಹೊಸ ಟೆನ್ಷನ್ ಶುರುವಾಗಿದೆ. ಆನ್​ಲೈನ್ ಪಾಠಗಳಿಂದ ಮಕ್ಕಳ ಕಣ್ಣಿಗೆ ಕುತ್ತು ಬಂದಿದೆ.

ಯೆಸ್​, ಇ-ಕಲಿಕೆಯಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಳವಾಗಿರುವುದು ಕಂಡುಬಂದಿದೆ. ಆನ್​ಲೈನ್ ಕಲಿಕೆಯಿಂದಾಗಿ ವಿದ್ಯಾರ್ಥಿಗಳಲ್ಲಿ ದೃಷ್ಠಿ ಸಮಸ್ಯೆ (ವಿಷನ್ ಸಿಂಡ್ರೋಮ್) ಸಹ ಏರಿಕೆ ಆಗಿದೆ. ರಾಜ್ಯದ ಶೇ. 30 ರಿಂದ 40 ರಷ್ಟು ಮಕ್ಕಳಲ್ಲಿ ದೃಷ್ಟಿದೋಷ ಸಮಸ್ಯೆ ಕಂಡುಬಂದಿದೆ. ಕೊರೊನಾ ಆರಂಭಿಕ ಹಾಗೂ ನಂತರದ ದಿನಗಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಾಗ್ತಿದೆ. ಆದರೆ, ಪೋಷಕರು ತಮ್ಮ ಮಕ್ಕಳ ನೇತ್ರದ ತಪಾಸಣೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿ ಸಹ ಲಭ್ಯವಾಗಿದೆ.

ಸದ್ಯ, ಕೊರೊನಾ ಆರ್ಭಟ ಕೊಂಚ ಕಡಿಮೆಯಾಗಿರುವುದರಿಂದ ಪುನಃ ಶಾಲೆಗೆ ಮರಳಿರುವ ಹಲವು ವಿದ್ಯಾರ್ಥಿಗಳಲ್ಲಿ ಡ್ರೈ ಐ (Dry eye) ಕಣ್ಣಿನ ಸಮಸ್ಯೆ ಉಂಟಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಬೋರ್ಡ್ ಮೇಲಿರುವುದನ್ನ ಓದಲು ಕಷ್ಟ ಪಡುತ್ತಿರುವುದು ಕಂಡುಬಂದಿದೆ.

ಆನ್​ಲೈನ್​ ಕ್ಲಾಸ್​ಗಳಿಗಾಗಿ ಡಿಜಿಟಲ್ ಸಾಧನಗಳ ಮೊರೆ ಹೋಗಿದ್ದರಿಂದ ನಗರದ ಶೇ.30 ರಷ್ಟು ಮಕ್ಕಳಲ್ಲಿ ಒಣ ಕಣ್ಣಿನ ಸಮಸ್ಯೆ ಅಥವಾ ಡ್ರೈ ಐ ಸಮಸ್ಯೆ ಎದುರಾಗಿದೆ. ಅಷ್ಟೇ ಅಲ್ಲ, ಗ್ಲೂಕೋಮಾ ಪ್ರಕರಣಗಳ ಸಂಖ್ಯೆ ಕೂಡ ಏರಿಕೆ ಕಂಡಿದೆ. ಹಾಗಾಗಿ, ಪೋಷಕರಿಗೆ ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಟೆನ್ಷನ್​ ಶುರುವಾಗಿದೆ.

ಹಾಗಾದರೆ, ಈ ಕಣ್ಣಿನ ಸಮಸ್ಯೆಗೆ ಪರಿಹಾರವೇನು? ಅಂದ ಹಾಗೆ, ಈ ಡ್ರೈ ಐ ಅಥವಾ ಒಣ ಕಣ್ಣಿನ ಸಮಸ್ಯೆಗೂ ಪರಿಹಾರವಿದೆ. ಅದರ ವಿವರ ಹೀಗಿದೆ. 1. ಮೊಬೈಲ್, ಡಿಜಿಟಲ್ ಸಾಧನಗಳ ಕಡಿಮೆ ಬಳಕೆ 2. ಪ್ರತಿ‌ 20 ನಿಮಿಷಗಳ ನಂತರ 20 ಅಡಿ ದೂರದಲ್ಲಿರುವ ವಸ್ತುವನ್ನ 20 ಸೆಕೆಂಡ್ ನಿರಂತರವಾಗಿ ನೋಡಬೇಕು 3. ಪದೇ ಪದೇ ಕಣ್ಣಿನ ರೆಪ್ಪೆಗಳನ್ನ ಮಿಟುಕಿಸಬೇಕು 4. ಬಿಸಿ ನೀರಿನ ಮೂಲಕ ಬಟ್ಟೆ ತೇವ ಮಾಡಿ ಕಣ್ಣಿಗೆ ಮಸಾಜ್ ಮಾಡುವುದು

ಇವೆಲ್ಲವುಗಳನ್ನು ಮಾಡಿದರೆ ಈ ಒಣ ಕಣ್ಣಿನ ಸಮಸ್ಯೆಯಿಂದ ಸ್ವಲ್ಪ ಪರಿಹಾರ ಕಾಣಬಹುದು.

ಇದನ್ನೂ ಓದಿ: ದಾವಣಗೆರೆಯಲ್ಲಿ ನೋಟು, ನಾಣ್ಯಗಳ ಪ್ರದರ್ಶನ: ಸಾರ್ವಜನಿಕರ ಗಮನ ಸೆಳೆದ ರಾಜರ ಕಾಲದ ನಾಣ್ಯಗಳು, 150 ಕ್ಕೂ ಹೆಚ್ಚು ದೇಶಗಳ ಕರೆನ್ಸಿ..!

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್