ಸೈಬರ್ ಕ್ರೈಂ ಇಂದ ಹಿರಿಯ ಅಧಿಕಾರಿಗಳೇ ಮೋಸಗೊಳಗಾಗಿದ್ದಾರೆ; ವಿಧಾನಪರಿಷತ್ನಲ್ಲಿ ಸೈಬರ್ ಕ್ರೈಂ ಬಗ್ಗೆ ಚರ್ಚೆ
ಪ್ರತಿವರ್ಷ 10 ಸಾವಿರಕ್ಕೂ ಹೆಚ್ಚು ಸೈಬರ್ ಕ್ರೈಂ ಪ್ರಕರಣ ದಾಖಲಾಗುತ್ತಿವೆ. ಅದರಲ್ಲಿ ಕೇವಲ 2 ಸಾವಿರ ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ. ಹಿರಿಯ ಪೊಲೀಸ್ ಅಧಿಕಾರಿಗಳೇ ಮೋಸ ಹೋಗುತ್ತಿದ್ದಾರೆ ಎಂದು ವಿಧಾನಪರಿಷತ್ನಲ್ಲಿ ಸುನಿಲ್ ವಲ್ಯಾಪುರೆ ಪ್ರಶ್ನಿಸಿದ್ದಾರೆ.
ವಿಧಾನಪರಿಷತ್: 2017ರಲ್ಲಿ ಸೈಬರ್ ರಾಬರಿಗಳು ತಡೆಯಲು ವಿಶೇಷ ವಿಭಾಗ ಪ್ರತ್ಯೇಕವಾಗಿ ತೆರೆದಿದ್ದೇವೆ. ಸಿಐಡಿ ಕಚೇರಿಯಲ್ಲಿ ಪ್ರತ್ಯೇಕವಾಗಿ ತರಬೇತಿ ಕೊಡುತ್ತಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ಸೈಬರ್ ಸ್ಟೇಷನ್ ಮಾಡಿದ್ದೇವೆ ಎಂದು ವಿಧಾನಪರಿಷತ್ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲೇ 8 ಸಿಇಎನ್ ಠಾಣೆಗಳನ್ನು ತೆರೆದಿದ್ದು, ಅಕೌಂಟ್ ಫ್ರೀಜ್ ಮೂಲಕ 70 ಕೋಟಿ ರೂ. ಉಳಿಸಿಕೊಂಡಿದ್ದೇವೆ ಎಂದರು. ಮೋಸವಾದ 2 ಗಂಟೆಯೊಳಗೆ ಸೈಬರ್ ಕ್ರೈಂ (Cyber crime) ಗೆ ಮಾಹಿತಿ ನೀಡಿದರೆ, ಅಕೌಂಟ್ ಫ್ರೀಜ್ ಮಾಡಬಹುದು. ರಾಜಸ್ಥಾನದ ಒಂದು ಹಳ್ಳಿಗೆ ಹಳ್ಳಿಯೇ ಸೈಬರ್ ಕ್ರೈಂನಲ್ಲಿ ಭಾಗಿಯಾಗಿದ್ದಾರೆ. ಒಟಿಪಿ ವಂಚನೆ ಯಾರ್ ಯಾರಿಗೆ ಆಗಿದೆ ಹೇಳೋದಕ್ಕೇ ಸಾಧ್ಯವಿಲ್ಲ. ಇದೊಂದು ತಂತ್ರಜ್ಞಾನದ ಪಿಡುಗು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಪ್ರತಿವರ್ಷ 10 ಸಾವಿರಕ್ಕೂ ಹೆಚ್ಚು ಸೈಬರ್ ಕ್ರೈಂ ಪ್ರಕರಣ ದಾಖಲಾಗುತ್ತಿವೆ. ಅದರಲ್ಲಿ ಕೇವಲ 2 ಸಾವಿರ ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ. ಹಿರಿಯ ಪೊಲೀಸ್ ಅಧಿಕಾರಿಗಳೇ ಮೋಸ ಹೋಗುತ್ತಿದ್ದಾರೆ ಎಂದು ವಿಧಾನಪರಿಷತ್ನಲ್ಲಿ ಸುನಿಲ್ ವಲ್ಯಾಪುರೆ ಪ್ರಶ್ನೆ ಮಾಡಿದರು. ರಾಜ್ಯದ ಜನರು ಹೆಚ್ಚೆಚ್ಚು ಸೈಬರ್ ಕ್ರೈಂ ಮೋಸಕ್ಕೆ ಒಳಗಾಗುತ್ತಿದ್ದಾರೆ. ಸೂಕ್ತ ತರಬೇತಿ ಇರುವ ಅಧಿಕಾರಿಗಳ ನೇಮಕ ಮಾಡಿ. ಹೆಚ್ಚಿನ ತಂತ್ರಜ್ಞಾನ ಕೊಟ್ಟರೆ ಪ್ರಕರಣ ಇತ್ಯರ್ಥಮಾಡಬಹುದು. ಇಲ್ಲದಿದ್ದರೆ ಹೆಚ್ಚಿನ ಜನ ಮೋಸ ಹೋಗುತ್ತಾರೆ ಎಂದರು.
ಇನ್ನೂ ಸಲೀಂ ಅಹಮದ್ ಪ್ರಶ್ನೆಗೆ ಸಚಿವ ಅರಗ ಜ್ಞಾನೇಂದ್ರ ಉತ್ತರಿಸಿದ್ದು, ರಾಜ್ಯದಲ್ಲಿ 1,05,864 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಇದ್ದಾರೆ. ರಾಜ್ಯದಲ್ಲಿರುವ ಜನಸಂಖ್ಯೆಗೆ ಅನುಪಾತವೂ 577 ಇದೆ. 577 ಜನರಿಗೆ ಒಬ್ಬ ಪೊಲೀಸ್ ಇದ್ದಾರೆ. ಕಳೆದ 5 ವರ್ಷಗಳಲ್ಲಿ 35 ಸಾವಿರ ಹುದ್ದೆ ಭರ್ತಿ ಮಾಡಲಾಗಿದೆ. ಬಾಕಿ ಇರೋ ಸಬ್ ಇನ್ಸ್ ಪೆಕ್ಟರ್ ನೇಮಕ ಆಗಿದೆ. ಅವ್ರಿಗೆ ಟ್ರೈನಿಂಗ್ ಆಗ್ತಿದೆ. ಅವ್ರು ಬಂದ್ರೆ ಸಬ್ ಇನ್ಸ್ ಪೆಕ್ಟರ್ ಎಲ್ಲಾ ಹುದ್ದೆ ಭರ್ತಿ ಆಗುತ್ತೆ. ಪೇದೆಗಳ ನೇಮಕಾತಿಯೂ ಆಗಿದೆ. ಪ್ರತಿ ವರ್ಷ 4 ಸಾವಿರ ಪೊಲೀಸರ ನೇಮಕ ಆಗುತ್ತಿದೆ. ಮೊದಲು 6 FSL ಲ್ಯಾಬ್ ಇತ್ತು. ಈಗ ಇದನ್ನ ಹೆಚ್ಚಳ ಮಾಡಿ ಬಲಪಡಿಸಲಾಗಿದೆ. ಹುಬ್ಬಳ್ಳಿ, ಬಳ್ಳಾರಿಯಲ್ಲೂ FSL ಪ್ರಾರಂಭ ಮಾಡ್ತೀವಿ. ಮೊದಲು ನಮಗೆ DNA ಸ್ಯಾಂಪಲ್ ವರದಿ ತಡವಾಗುತ್ತಿತ್ತು. ಈಗ ಹುಬ್ಬಳ್ಳಿಯಲ್ಲಿ DNA ಲ್ಯಾಬ್ ಪ್ರಾರಂಭ ಮಾಡಿದ್ದೇವೆ. ಪೊಲೀಸರಿಗೆ ಹೊಸ ಹೊಸ ವೆಹಿಕಲ್ ಕೊಡಿಸಿದ್ದೇವೆ. ತಂತ್ರಜ್ಞಾನ ಅಳವಡಿಕೆಯನ್ನು ಇಲಾಖೆಯಲ್ಲಿ ಮಾಡಲಾಗಿದೆ. ಟೋಯಿಂಗ್ ವ್ಯವಸ್ಥೆ ಜಾರಿ ಸದ್ಯಕ್ಕೆ ನಿಲ್ಲಿಸಲಾಗಿದೆ. ಈಗಾಗಲೇ ಸಿಎಂ ಜೊತೆ ಈ ಬಗ್ಗೆ ಚರ್ಚೆ ಆಗಿದೆ. ಹೊಸ ಟೋಯಿಂಗ್ ವ್ಯವಸ್ಥೆ ಶೀಘ್ರವಾಗಿ ಜಾರಿ ಮಾಡ್ತೀವಿ. ಟ್ರಾಫಿಕ್ ಇಲಾಖೆ ವ್ಯವಸ್ಥೆಯಲ್ಲೂ ವಿಶೇಷ ಕಾರ್ಯಕ್ರಮ ಜಾರಿ ಮಾಡ್ತಿದ್ದೇವೆ. ಜನ ಸ್ನೇಹಿ ಟ್ರಾಫಿಕ್ ವ್ಯವಸ್ಥೆ ತರುತ್ತಿದ್ದೇವೆ. ಶೀಘ್ರವೇ ಈ ವ್ಯವಸ್ಥೆ ಜಾರಿಗೆ ಬರುತ್ತೆ. ಇಂಟೆಲಿಜೆನ್ಸ್ ವಿಭಾಗಕ್ಕೆ ಪ್ರತ್ಯೇಕ ತಂಡ ಮಾಡುವ ಚಿಂತನೆ ಇದೆ. ಈಗ ಇಲಾಖೆಯಲ್ಲಿ ಇರೋರನ್ನೆ ಇಂಟಲಿಜೆನ್ಸ್ ಗೆ ಬಳಕೆ ಮಾಡಲಾಗುತ್ತಿದೆ. ಪ್ರತ್ಯೇಕ ನೇಮಕಾತಿ ಮಾಡಿಕೊಂಡು, ಅದಕ್ಕೆ ವಿಶೇಷ ತರಬೇತಿ ನೀಡುವ ಬಗ್ಗೆ ಚರ್ಚೆ ಆಗುತ್ತಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಲಾಗಿದೆ. ಇಂಟಲಿಜೆನ್ಸ್ ವಿಭಾಗಕ್ಕೆ ಪ್ರತ್ಯೇಕ ನೇಮಕಾತಿ ಮಾಡಿಕೊಂಡ ತಂಡ ರಚನೆ ಮಾಡುತ್ತೇವೆ ಎಂದು ಹೇಳಿದರು.
ಬೆಂಗಳೂರು ನಗರದಲ್ಲಿ ರಸ್ತೆಗಳ ನಿರ್ಮಾಣಕ್ಕೆ ಪ್ರತ್ಯೇಕ ತಂತ್ರಜ್ಞಾನದ ಅವಶ್ಯಕತೆ ಇದೆ. ಸರಿಯಾದ ರಸ್ತೆ ವಿನ್ಯಾಸ ಬೇಕಿದೆ ಎಂದು ಸದಸ್ಯ ಪಿ.ಆರ್.ರಮೇಶ್ ಕೇಳಿದ ಪ್ರಶ್ನೆಗೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರಿಸಿದ್ದು, ರಸ್ತೆಗಳ ನಿರ್ಮಾಣಕ್ಕೆ ಪ್ರತ್ಯೇಕ ತಂತ್ರಜ್ಞಾನ ಅವಶ್ಯಕತೆ ಇದೆ. ಸರಿಯಾದ ರೋಡ್ ಡಿಸೈನಿಂಗ್ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ:
ಮದುವೆ ಬಳಿಕ ಬೇರೆ ನಟನ ಜತೆ ಕತ್ರಿನಾ ಕಣ್ಣಾಮುಚ್ಚಾಲೆ; ವಿಕ್ಕಿ ಎಲ್ಲಿ ಎಂದು ಕೇಳುತ್ತಿರುವ ಫ್ಯಾನ್ಸ್
Published On - 12:47 pm, Thu, 10 March 22