ಸಾರಿಗೆ ಆರಂಭವಾಗುವವರೆಗೂ ಭೌತಿಕ ಹಾಜರಾತಿಯಿಂದ ವಿನಾಯಿತಿ ನೀಡಲು ಶಿಕ್ಷಕರ ಮನವಿ

TV9kannada Web Team

TV9kannada Web Team | Edited By: guruganesh bhat

Updated on: Jun 13, 2021 | 11:07 PM

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ನೀಡಿರುವ ಮನವಿಯಲ್ಲಿ ಶಿಕ್ಷಕರು ಸಾರಿಗೆ ಸೌಲಭ್ಯ ಆರಂಭವಾಗುವವರೆಗೂ ಭೌತಿಕ ಹಾಜರಾತಿಯಿಂದ ವಿನಾಯಿತಿ ನೀಡಲು ಕೋರಿದ್ದಾರೆ.

ಸಾರಿಗೆ ಆರಂಭವಾಗುವವರೆಗೂ ಭೌತಿಕ ಹಾಜರಾತಿಯಿಂದ ವಿನಾಯಿತಿ ನೀಡಲು ಶಿಕ್ಷಕರ ಮನವಿ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜೂನ್​​ 15ರಿಂದ ದಾಖಲಾತಿ ಪ್ರಕ್ರಿಯೆ ಆರಂಭವಾಗುವ ಹಿನ್ನೆಲೆಯಲ್ಲಿ ತರಗತಿಗಳಿಗೆ ಶಿಕ್ಷಕರು ಹಾಜರಾಗುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಇನ್ನೂ ಲಾಕ್​ಡೌನ್ ಜಾರಿ ಇದೆ. ಸಾರಿಗೆ ವ್ಯವಸ್ಥೆಯೂ ಲಭ್ಯವಿಲ್ಲದ ಕಾರಣ ಕಷ್ಟವಾಗಲಿದೆ. ಶಿಕ್ಷಕರು ತರಗತಿಗೆ ತೆರಳಲು ಕಷ್ಟವಾಗಲಿದೆ. ಹೀಗಾಗಿ ಸಾರಿಗೆ ವ್ಯವಸ್ಥೆ ಲಭ್ಯವಾಗುವವರೆಗೂ ಶಿಕ್ಷಕರ ಭೌತಿಕ ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ಕೋರಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿದೆ. 

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ನೀಡಿರುವ ಮನವಿಯಲ್ಲಿ ಶಿಕ್ಷಕರು ಸಾರಿಗೆ ಸೌಲಭ್ಯ ಆರಂಭವಾಗುವವರೆಗೂ ಭೌತಿಕ ಹಾಜರಾತಿಯಿಂದ ವಿನಾಯಿತಿ ನೀಡಲು ಕೋರಿದ್ದಾರೆ. ಸಾರಿಗೆ ಸೌಲಭ್ಯ ಆರಂಬವಾದ ನಂತರವೇ ಶಾಲೆಗಳಿಗೆ ಹಾಜರಾಗಲು ಅವಕಾಶ ನೀಡುವಂತೆ ಶಿಕ್ಷಕರ ಸಂಘ ಕೋರಿದೆ.

ಇಂದಿನ ಕೊವಿಡ್ ಸೋಂಕಿತರೆಷ್ಟು? ಕರ್ನಾಟಕದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 8 ಸಾವಿರಕ್ಕೂ ಕಡಿಮೆಯಾಗಿದೆ. ಒಂದೇ ದಿನ ಒಟ್ಟು 7,810 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 125 ಜನರು ಮೃತಪಟ್ಟಿದ್ದಾರೆ. ಬೆಂಗಳೂರಲ್ಲಿ ಒಂದೇ ದಿನ 1,348 ಜನರಿಗೆ ಸೋಂಕು ದೃಢಪಟ್ಟಿದ್ದು, 23 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 27,65,134ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 25,51,365 ಮಂದಿ ಗುಣಮುಖರಾಗಿ ಡಿಸ್​ಚಾರ್ಜ್ ಆಗಿದ್ದಾರೆ. 1,80,835 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 32,913 ಜನರು ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 1348 ಜನರಲ್ಲಿ ಸೋಂಕು ದೃಢಪಟ್ಟಿದೆ. ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 11,96,688ಕ್ಕೆ ಏರಿಕೆಯಾಗಿದೆ. 11,96,688 ಸೋಂಕಿತರ ಪೈಕಿ 10,95,385 ಜನರು ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿನಿಂದ 23 ಜನರು ಸಾವನ್ನಪ್ಪಿದ್ದಾರೆ. ಈವರೆಗೆ ನಗರದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 15,307ಕ್ಕೆ ಏರಿಕೆಯಾಗಿದೆ. 85,995 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು? ಕರ್ನಾಟಕದಲ್ಲಿ ಇಂದು ಹೊಸದಾಗಿ 7,810 ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಪೈಕಿ ಬೆಂಗಳೂರು ನಗರದಲ್ಲಿ ಅತಿಹೆಚ್ಚು, ಅಂದರೆ 1348 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಉಳಿದಂತೆ ಬಾಗಲಕೋಟೆ 62, ಬಳ್ಳಾರಿ 141, ಬೆಳಗಾವಿ 266, ಬೆಂಗಳೂರು ಗ್ರಾಮಾಂತರ 154, ಬೀದರ್ 7, ಚಾಮರಾಜನಗರ 129, ಚಿಕ್ಕಬಳ್ಳಾಪುರ 141, ಚಿಕ್ಕಮಗಳೂರು 223, ಚಿತ್ರದುರ್ಗ 128, ದಕ್ಷಿಣ ಕನ್ನಡ 434, ದಾವಣಗೆರೆ 391, ಧಾರವಾಡ 148, ಗದಗ 73, ಹಾಸನ 581, ಹಾವೇರಿ 64, ಕಲಬುರಗಿ 24, ಕೊಡಗು 125, ಕೋಲಾರ 164, ಕೊಪ್ಪಳ 76, ಮಂಡ್ಯ 467, ಮೈಸೂರು 1251, ರಾಯಚೂರು 30, ರಾಮನಗರ 47, ಶಿವಮೊಗ್ಗ 393, ತುಮಕೂರು 352, ಉಡುಪಿ 223, ಉತ್ತರ ಕನ್ನಡ 250, ವಿಜಯಪುರ 96, ಯಾದಗಿರಿ 22 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: India Pak: ಭಾರತ ಪಾಕಿಸ್ತಾನದ ನಡುವೆ ಶುರುವಾಗಿದೆ ಅಕ್ಕಿಯ ಕಲಹ; ಇಲ್ಲಿದೆ ವಿವರ

ಜಾಗತಿಕ ಮಟ್ಟದ ನಿರ್ಣಯಗಳು ಎಲ್ಲಾ ದೇಶಗಳನ್ನು ಒಳಗೊಂಡು ಹೊರಹೊಮ್ಮಬೇಕು: ಚೀನಾ

( Teachers request exemption from physical attendance until transportation begins after lockdown end)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada