ಬೆಂಗಳೂರು: ಬಿಬಿಎಂಪಿ ಪೌರಕಾರ್ಮಿಕರ ಮೇಲೆ ಟ್ರಾಫಿಕ್ ಪೊಲೀಸರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಪೊಲೀಸರಿಂದ ನಡೆದಿರುವ ಹಲ್ಲೆ ಖಂಡಿಸಿ ಬೆಂಗಳೂರಿನ ಜೆ.ಜೆ. ನಗರ ಪೊಲೀಸ್ ಠಾಣೆ ಎದುರು ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ರಸ್ತೆಯಲ್ಲೇ ವಾಹನ ನಿಲ್ಲಿಸಿ ಕಸ ತುಂಬುತ್ತಿದ್ದನ್ನು ಪ್ರಶ್ನಿಸಿದ ಟ್ರಾಫಿಕ್ ಪೊಲೀಸರ ವರ್ತನೆ ಖಂಡಿಸಿ ಪೌರಕಾರ್ಮಿಕರು ದಿಢೀರ್ ಪ್ರತಿಭಟನೆ ನಡೆಸುತ್ತಿದ್ದಾರೆ. ಜೆ.ಜೆ.ನಗರ ಠಾಣೆಯ ಎದುರು ಪೌರಕಾರ್ಮಿಕರು ಜಮಾಯಿಸಿದ್ದಾರೆ.
ಘಟನೆ ಹಿನ್ನೆಲೆ: ರಸ್ತೆಯಲ್ಲೇ ವಾಹನ ನಿಲ್ಲಿಸಿ ಪೌರಕಾರ್ಮಿಕರು ಕಸ ತುಂಬುತ್ತಿದ್ದರು. ಆಗ ಆಗಮಿಸಿದ ಟ್ರಾಫಿಕ್ ಪೊಲೀಸರು ರಸ್ತೆಯಲ್ಲಿ ಏಕೆ ಕಸದ ವಾಹನ ನಿಲ್ಲಿಸಿದ್ದೀಯಾ? ಎಂದು ಪ್ರಶ್ನಿಸಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಪೌರಕಾರ್ಮಿಕರು ಮತ್ತು ಟ್ರಾಫಿಕ್ ಪೊಲೀಸರ ನಡುವೆ ಮಾತಿಕ ಚಕಮಕಿ ನಡೆದಿದೆ.
ಇತ್ತ, ಮಾಗಡಿ ರೋಡ್ ಟ್ರಾಫಿಕ್ ಇನ್ಸ್ಪೆಕ್ಟರ್ ಆನಂದ್ಗೆ ಬೆದರಿಕೆ ಒಡ್ಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಿಬಿಎಂಪಿ ಪೌರ ಕಾರ್ಮಿಕರಿಂದ ಘೇರಾವ್ ಹಾಕಿ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಲಾಗಿದೆ. ಮುಖ್ಯ ರಸ್ತೆ ಎರಡು ಬದಿಯಲ್ಲಿ ಬಿಬಿಎಂಪಿ ಕಸದ ಆಟೋಗಳ ನಿಲ್ಲಿಸಿ ನಿಯಮ ಉಲ್ಲಂಘನೆ ಮಾಡಲಾಗಿತ್ತು. ಜೆ.ಜೆ ನಗರ ಮುಖ್ಯ ರಸ್ತೆಯಲ್ಲಿ ಡಬಲ್ ಪಾರ್ಕಿಂಗ್ ಮಾಡಿದ್ದನ್ನ ಪ್ರಶ್ನಿಸಿ ವೆಹಿಕಲ್ ತೆಗೆಯುವಂತೆ ಸೂಚಸಿದ ವೇಳೆ ಇನ್ಸ್ಪೆಕ್ಟರ್ ಆನಂದ್ರನ್ನು ಎಳೆದಾಡಿ, ವಿಡಿಯೋ ಮಾಡಿ ಪೌರ ಕಾರ್ಮಿಕರು ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ತೆಲಂಗಾಣದಲ್ಲಿ ಪೊಲೀಸಪ್ಪನ ಮದುವೆ ಪುರಾಣ: ಈತ ಮದುವೆಯಾಗಿದ್ದು ಒಂದಲ್ಲ, ಎರಡಲ್ಲ 4 ಬಾರಿ..