PDO: ಸ್ವತಃ ಗೃಹ ಸಚಿವ ಸೇರಿದಂತೆ ಜನಪ್ರತಿನಿಧಿಗಳಿಂದ ತುಮಕೂರು ಪಿಡಿಓ ಗಳ ವರ್ತನೆ ಬಗ್ಗೆ ಅಸಮಾಧಾನ

ತುರುವೇಕೆರೆ ಇ.ಒ. ಸತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಇದು ಪ್ರಜಾಪ್ರಭುತ್ವ... ಸರ್ವಾಧಿಕಾರಿತನ ತೋರಬೇಡಿ ಎಂದು ಗರಂ ಆದರು.

PDO: ಸ್ವತಃ ಗೃಹ ಸಚಿವ ಸೇರಿದಂತೆ ಜನಪ್ರತಿನಿಧಿಗಳಿಂದ ತುಮಕೂರು ಪಿಡಿಓ ಗಳ ವರ್ತನೆ ಬಗ್ಗೆ ಅಸಮಾಧಾನ
ಸ್ವತಃ ಗೃಹ ಸಚಿವ ಸೇರಿದಂತೆ ಜನಪ್ರತಿನಿಧಿಗಳಿಂದ ಪಿಡಿಓ ಗಳ ವರ್ತನೆ ಬಗ್ಗೆ ಅಸಮಾಧಾನ
TV9kannada Web Team

| Edited By: sadhu srinath

Sep 30, 2022 | 4:07 PM

ತುಮಕೂರು: ಜಿಲ್ಲೆಯ (Tumkur district) ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿಗಳ ಸಮ್ಮುಖದಲ್ಲಿ ಪಿಡಿಓಗಳ (PDOs) ದರ್ಪದ ವರ್ತನೆ ಬಗ್ಗೆ ಜನಪ್ರತಿನಿಧಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ. ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ (Home minister Araga Jnanendra) ಸೇರಿದಂತೆ ಅನೇಕ ಜನಪ್ರತಿನಿಧಿಗಳಿಂದ ಪಿಡಿಓ ಗಳ ವರ್ತನೆ ಕುರಿತು ತೀವ್ರ ಚರ್ಚೆಗಳು ನಡೆದಿವೆ. ಪಿ.ಡಿ.ಓ.ಗಳು ಇ.ಒ.ಗಳನ್ನ ಕಂಟ್ರೋಲ್ ಮಾಡ್ತಿದ್ದಾರೆ. ಇ.ಒ.ಗಳು ಮಾತನಾಡುವುದಿಲ್ಲ, ಪಿಡಿಓ ಗಳು ಹೇಳಿದಂತೆ ಇಒಗಳು ಕುಣಿತಾರೆ ಎಂದು ತುರುವೇಕೆರೆ ಶಾಸಕ ಮಾಸಾಲ ಜಯರಾಂ ಆರೋಪ ಮಾಡಿದರು.

ಅದಕ್ಕೆ ಧ್ವನಿಗೂಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೆಲ ಪಿಡಿಒ ಗಳು ಬಹಳ ಆ ರೀತಿ ಮಾಡ್ತಾರೆ. ಪಂಚಾಯ್ತಿ ಅಧ್ಯಕ್ಷರು ರಿಸರ್ವೇಷನ್ ನಲ್ಲಿ ಬಂದ್ರೆ ಅವರನ್ನ ಕೇಳೋರೆ ಗತಿ ಇಲ್ಲ. ಅಧ್ಯಕ್ಷರು ಬೆಲ್ ಮಾಡಿದಾಗ ಪಿಡಿಓ ಅಧ್ಯಕ್ಷರ ಚೇಂಬರ್ ಗೆ ಹೋಗ್ಬೇಕೋ ಬೇಡ್ವೋ ಅನ್ನೋದ್ರ ಬಗ್ಗೆ ಅವರವರಲ್ಲೇ ಚರ್ಚೆಯಿರುತ್ತೆ.

ನಾನ್ಯಾಕೆ ಹೋಗ್ಬೇಕು ಅಂತ ಪಿಡಿಓ?

ಕರೆದರೂ ಪಿಡಿಓ ಬರಲ್ಲ ಅಂತೇಳಿ ಒಬ್ಬ ಎಸ್ಸಿ ಗ್ರಾ.ಪಂ. ಅಧ್ಯಕ್ಷೆ ನನ್ನಲ್ಲಿ ಅಳಲು ತೋಡಿಕೊಂಡ್ರು. ಮೊದಲು ನಾನೇ ಪಿಡಿಓ ಚೇಂಬರ್ ಗೆ ಹೋಗ್ತಿದ್ದೆ, ಎಲ್ಲರೂ ಹೇಳಿದ್ರು ನೀನ್ಯಾಕೆ ಅವರ ಚೇಂಬರ್ ಗೆ ಹೋಗ್ತಿಯಾ? ನೀನೆ ಕರೆಸಿಕೋ ಅಂತ ಹೇಳಿದ್ದರು. ಆದ್ರೆ, ಈಗ ಬೆಲ್ ಮಾಡಿದ್ರೂ ಆತ ಪಿಡಿಓ ಬರಲ್ಲ. ಸಿಎಂ ಬೊಮ್ಮಾಯಿ ಬೆಲ್ ಮಾಡಿದ್ರೆ ಚೀಫ್ ಸೆಕರೇಟರಿ ಸಿಎಂ ಚೇಂಬರ್ ಗೆ ಹೋಗ್ತಾರೆ. ಆದರೆ ಇಲ್ಲಿ… ಒಬ್ಬ ಚೇರ್ಮನ್ ಗೆ ಗೌರವ ಕೊಡಲು ಬಾರದ ಪಿಡಿಓ ಗಳ ತಲೆಯಲ್ಲಿ ಭಾರಿ ಏನೋ ತುಂಬಿಕೊಂಡಿದೆ. ಇವರು ಪೂರ್ತಿ ತಿಳಿದುಕೊಂಡಿಲ್ಲ,, ಇವರು ಅರ್ಧಂಬರ್ಧ ತಿಳಿದ್ಕೊಂಡಿದ್ದಾರೆ. ಕಾನೂನು ನೆಪ ಹೇಳಿ ಕೆಲಸ ಮಾಡದೆಯೇ ಸುಮ್ಮನೆ ಕೂರ್ತಾರೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಈ ವೇಳೆ ಮುಂದುವರಿದು ಮಾತನಾಡಿದ ಶಾಸಕ ಮಸಾಲ ಜಯರಾಂ ಸಂಜೆ ಆರು ಗಂಟೆ ಆದಮೇಲೆ ಸೆಕ್ರೆಟರಿ, ಬಿಲ್ ಕಲೆಕ್ಟರ್ ನ ಅಧ್ಯಕ್ಷರನ್ನ ಕೂರಿಸಿಕೊಂಡು ರೆಸಾರ್ಟ್ ನಲ್ಲಿ ಮಜಾ ಮಾಡ್ತಾರೆ. ಇನೋವಾ ಕಾರ್ ನಲ್ಲಿ ಓಡಾಡ್ತಾರೆ ಎಂದರು. ಈ ವೇಳೆ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ತುರುವೇಕೆರೆ ಇ.ಒ. ಸತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಪಿಡಿಒಗಳ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಫುಲ್ ಕ್ಲಾಸ್ ನೀಡಿದರು. ಇದು ಪ್ರಜಾಪ್ರಭುತ್ವ… ಸರ್ವಾಧಿಕಾರಿತನ ತೋರಬೇಡಿ ಎಂದು ಸಚಿವ ಆರಗ ಕ್ಲಾಸ್ ತೆಗೆದುಕೊಂಡರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada