ಮತ್ತೆ ಸಾವಿನ ಸ್ಪಾಟ್ ಆದ ಕಳ್ಳಂಬೆಳ್ಳ, ಮಾಡದ ತಪ್ಪಿಗೆ ಮಸಣ ಸೇರಿದ ಮಹಿಳೆ

ಇಂದು ಕೂಡ ಕಳ್ಳಂಬೆಳ್ಳ ಬಸ್ ನಿಲ್ದಾಣ ಬಳಿಯೇ ಅಪಘಾತ ವಾಗಿದ್ದು ಚಂದ್ರಮ್ಮ ಎನ್ನುವರು ಸಾವನ್ನಪ್ಪಿದ್ದಾರೆ. ಚಂದ್ರಮ್ಮ ಕೆಎಸ್ ಆರ್ ಟಿಸಿ ಬಸ್ ಇಳಿದು ಮನೆಯ ಕಡೆ ಹೋಗುವಾಗ ವೇಗವಾಗಿ ಬಂದ ಲಾರಿಯೊಂದು ಮಹಿಳೆಗೆ ಡಿಕ್ಕಿ ಹೊಡೆದಿದೆ.

ಮತ್ತೆ ಸಾವಿನ ಸ್ಪಾಟ್ ಆದ ಕಳ್ಳಂಬೆಳ್ಳ, ಮಾಡದ ತಪ್ಪಿಗೆ ಮಸಣ ಸೇರಿದ ಮಹಿಳೆ
ಮತ್ತೆ ಸಾವಿನ ಸ್ಪಾಟ್ ಆದ ಕಳ್ಳಂಬೆಳ್ಳ, ಮಾಡದ ತಪ್ಪಿಗೆ ಮಸಣ ಸೇರಿದ ಮಹಿಳೆ
TV9kannada Web Team

| Edited By: sadhu srinath

Sep 30, 2022 | 7:29 PM

ಹೌದು‌..ಕಳ್ಳಂಬೆಳ್ಳ ,ಈ ಹೆಸರು ಕೇಳಿದ್ರೆ ಸಾಕು,ಪ್ರಯಾಣಿಕರ, ವಾಹನ ಸವಾರರ ಎದೆ ಜಲ್ ಎನ್ನಿಸುತ್ತೆ,ಯಾಕೆಂದರೆ ಅಷ್ಟರಮಟ್ಟಿಗೆ ಈ ಹೆಸರು ಭಯಬೀಳಿಸಿದೆ.ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ವ್ಯಾಪ್ತಿ ಅಪಘಾತಕ್ಕೆ ಕುಖ್ಯಾತಿ ಪಡೆದ ಸ್ಥಳ,ಕಳೆದ ತಿಂಗಳು ಇದೇ ವ್ಯಾಪ್ತಿಯಲ್ಲಿ ಕ್ರೂಸರ್ ಹಾಗೂ ಲಾರಿ ನಡುವೆ ಅಪಘಾತ ನಡೆದು ಬರೋಬ್ಬರಿ 9 ಜನರು ಸ್ಥಳದಲ್ಲೇ ಸಾವನ್ನಪಿದ್ದರು,ಅದಾದ ಬಳಿಕ ಆಗಾಗ ಅಪಘಾತ ಗಳು ನಡೆಯುತ್ತಲೇ ಇವೆ.ಅದರಂತೆ ಇಂದು ಕೂಡ ಲಾರಿ ಅಪಘಾತ ವಾಗಿ ಮಹಿಳೆ ಸಾವನ್ನಪ್ಪಿದ್ದು,ಮನೆಗೆ ಹೋಗ್ತಿದ್ದ ಮಹಿಳೆ ಮಸಣಕ್ಕೆ ಸೇರಿದ್ದಾರೆ.

ಸಾವಿನ ಹೆದ್ದಾರಿಯಾದ ಕಳ್ಳಂಬೆಳ್ಳ @48

ಇಂದು ಕೂಡ ಕಳ್ಳಂಬೆಳ್ಳ ಬಸ್ ನಿಲ್ದಾಣ ಬಳಿಯೇ ಅಪಘಾತ ವಾಗಿದ್ದು ಚಂದ್ರಮ್ಮ ಎನ್ನುವರು ಸಾವನ್ನಪ್ಪಿದ್ದಾರೆ,ರಂಗಸ್ವಾಮಿ ಎನ್ನುವರಿಗೆ ಗಾಯವಾಗಿದೆ.ಚಂದ್ರಮ್ಮ ಕೆಎಸ್ ಆರ್ ಟಿಸಿ ಬಸ್ ಇಳಿದು ಮನೆಯ ಕಡೆ ಹೋಗುವಾಗ ವೇಗವಾಗಿ ಬಂದ ಲಾರಿಯೊಂದು ಮಹಿಳೆಗೆ ಡಿಕ್ಕಿ ಹೊಡೆದಿದೆ. ಬಳಿಕ ಲಾರಿ ಮೇಲೆ ಹರಿದು ಮಹಿಳೆ ಸಾವನ್ನಪ್ಪಿದ್ದಾಳೆ.

ಚಾಲಕನ ಅತಿವೇಗ ಹಾಗೂ ಅಜಾಗರೂಕತೆ ಸಾವಿಗೆ ಕಾರಣ

ಇನ್ನೂ ಲಾರಿ ಚಾಲಕ ವೇಗವಾಗಿ ಬರ್ತಿದ್ದ ಎನ್ನಲಾಗಿದೆ, ಲಾರಿ ವೇಗ ಸ್ಥಳಿಯರು ಗಮನಿಸಿದ್ದು ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದೆ ಎನ್ನಲಾಗಿದೆ. ಸೈಡ್ ನಲ್ಲಿದ್ದ ಡಿವೈಡರ್ ಗೆ ಡಿಕ್ಕಿಯಾಗಿ, ಬಳಿಕ ಮಹಿಳೆಗೆ ಡಿಕ್ಕಿ ಹೊಡೆದ ಕಾರಣ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ನಾಲ್ಕೈದು ಜನರು ಮಸಣ ಸೇರಬೇಕಿತ್ತು. ಅದೃಷ್ಟವಶಾತ್ ಸ್ಥಳೀಯರು ಚೆಲ್ಲಾಪಿಲ್ಲಿಯಾಗಿ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಲಾರಿ ಯಾವಾಗ ಅತಿ ವೇಗದಿಂದ ಬರ್ತಿತ್ತೋ ಇದನ್ನ ಗಮನಿಸಿ, ನಿಂತಿದ್ದ ಸ್ಥಳೀಯರು ಕೂಗಾಡಿ ದೂರ ಹೋಗಿದ್ದಾರೆ. ಆದರೆ ಚಂದ್ರಮ್ಮ ದೂರ ಹೋಗಲು ಆಗದೆ ಲಾರಿಯಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ತಿಂಗಳಿಗೆ, ವಾರಕ್ಕೊಮ್ಮೆ ಅಪಘಾತಗಳು ನಡೆಯುತ್ತಿದ್ದು ಸಾವಿನ ಹೆದ್ದಾರಿಯಿಂದ ಜನರು ಧೃತಿಗೆಟ್ಟಿದ್ದಾರೆ. (ವರದಿ -ಮಹೇಶ್ ಟಿವಿ 9 ತುಮಕೂರು)

ನಿಯಂತ್ರಣ ತಪ್ಪಿದ ಕೆಎಸ್ಆರ್ ಟಿಸಿ ಬಸ್ ಹರಿದು ಗಂಡ-ಮಗುವಿನೊಂದಿಗೆ ದೇವಸ್ಥಾನಕ್ಕೆ ಹೋಗ್ತಿದ್ದ ಮಹಿಳೆ ಬಲಿ

ಬಾಗಲಕೋಟೆ: ಕೆಎಸ್ಆರ್ ಟಿಸಿ ಬಸ್ ನಿಯಂತ್ರಣ ತಪ್ಪಿದ ಪರಿಣಾಮ ಗಂಡ ಮತ್ತು ಮಗುವಿನೊಂದಿಗೆ ದೇವಸ್ಥಾನಕ್ಕೆ ಹೋಗ್ತಿದ್ದ ಮಹಿಳೆಯೊಬ್ಬರು ಮೃತಪಟ್ಟ ದುರ್ಘಟನೆ ನಡೆದಿದೆ. ಬಸ್ ಪಾಟಾ ಕಟ್ ಆದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಹೋಗ್ತಿದ್ದ ವೆಂಕುಬಾಯಿ ರಾಮಣ್ಣ ಚವ್ಹಾಣ್ (35) ಎಂಬ ಮಹಿಳೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ ಹೊರವಲಯದಲ್ಲಿ ಘಟನೆ ನಡೆದಿದೆ. ಕೆಎಸ್ಆರ್ ಟಿಸಿ ಬಸ್ ಬಾದಾಮಿಯಿಂದ ಕೆರೂರು ಕಡೆಗೆ ಹೋಗುತ್ತಿತ್ತು.

ಮೃತ ವೆಂಕುಬಾಯಿ ತನ್ನ ಗಂಡ ಹಾಗೂ ಮಗುವಿನೊಂದಿಗೆ ಕರೆಮ್ಮ ದೇವಸ್ಥಾನಕ್ಕೆ ಹೋಗ್ತಿದ್ದಾಗ ಡಿಕ್ಕಿಯಾಗಿದೆ. ಅದೃಷ್ಟವಶಾತ್ ವೆಂಕುಬಾಯಿ ಗಂಡ ಹಾಗೂ ಮಗುವಿಗೆ ಯಾವುದೇ ಗಾಯಗಳಾಗಿಲ್ಲ. ಮೃತ ವೆಂಕುಬಾಯಿ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಕಾಳಾಪುರ ತಾಂಡಾ ನಿವಾಸಿ. ವೆಂಕುಬಾಯಿ ಹಾಗೂ ಕುಟುಂಬ ಬಾದಾಮಿ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಬಸ್ ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ರು. ಅದೃಷ್ಟವಶಾತ್ ಬಸ್ ಪಲ್ಟಿಯಾಗದ ಹಿನ್ನೆಲೆ ಎಲ್ಲರೂ ಬಚಾವ್ ಆಗಿದ್ದಾರೆ. ಬಾದಾಮಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada