ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಸ್ಟೋರ್ವೊಂದರಲ್ಲಿ ಅಪರೂಪದ ಕಾಡುಪ್ರಾಣಿ ಉಡ ಕಾಣಿಸಿಕೊಂಡಿದೆ. ಉಡ ಪ್ರಾಣಿಯನ್ನು ನೋಡಿದ ಜನರು ಕೆಲಕಾಲ ಗಾಬರಿಗೊಂಡಿದ್ದಾರೆ. ಬಳಿಕ ಸಾರ್ವಜನಿಕರು ಉಡ ಪ್ರಾಣಿಯನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಉಡ ಪ್ರಾಣಿಯು ಹೆಚ್ಚಾಗಿ ಕಾಡು ಪ್ರದೇಶಗಳಲ್ಲಿ ಕಂಡುಬರುತ್ತದೆ.