ರೈತರಿಗೆ ಗುಡ್​ನ್ಯೂಸ್: 2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

|

Updated on: Nov 21, 2024 | 7:18 PM

ತುಂಗಭದ್ರಾ ಜಲಾಶಯದ ಅಣೆಕಟ್ಟು ಪ್ರದೇಶ ರೈತರಿಗೆ ಗುಡ್​ನ್ಯೂಸ್ ಸಿಕ್ಕಿದೆ. ಎರಡನೇ ಬೆಳೆಗೆ ಕಾಲುವೆಗಳಿಗೆ ನೀರು ಹರಿಸಲು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ತೀರ್ಮಾನಿಸಿದೆ. ಇದರಿಂದ 2ನೇ ಬೆಳೆಗೆ ನೀರು ಬಿಡುತ್ತಾರೋ ಇಲ್ವೋ ಎಂದು ಆತಂಕದಲ್ಲಿದ್ದ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಯ ರೈತರು ನಿಟ್ಟುಸಿರು ಬಿಡುವಂತಾಗಿದೆ. ಹಾಗಾದ್ರೆ, ಯಾವಾಗ ಎಷ್ಟೆಷ್ಟು ನೀರು ಎನ್ನುವ ವಿವರ ಇಲ್ಲಿದೆ.

ರೈತರಿಗೆ ಗುಡ್​ನ್ಯೂಸ್: 2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ
Follow us on

ಬೆಂಗಳೂರು, (ನವೆಂಬರ್ 21): ತುಂಗಭದ್ರಾ ಜಲಾಶಯದ ಅಣೆಕಟ್ಟು ಪ್ರದೇಶದ ಎರಡನೇ ಬೆಳೆಗೆ ಕಾಲುವೆಗಳಿಗೆ ನೀರು ಹರಿಸಲು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ತೀರ್ಮಾನಿಸಿದೆ. ಇದೇ ಡಿಸೆಂಬರ್ 01ರಿಂದ ಹಂತ ಹಂತವಾಗಿ ಕಾಲುವೆಗಳಿಗೆ ನೀರು ಬಿಡಲು ತೀರ್ಮಾನಿಸಲಾಗಿದೆ. ಇಂದು (ನವೆಂಬರ್ 21) ಬೆಂಗಳೂರಿನಲ್ಲಿ ಸಚಿವ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರಿಂದ 2ನೇ ಬೆಳೆ ನೀರಿನ ಆತಂಕದಲ್ಲಿದ್ದ ನಾಲ್ಕು ಜಿಲ್ಲೆಗಳ ರೈತರು ನಿಟ್ಟುಸಿರುಬಿಡುವಂತಾಗಿದೆ.

ಎಡದಂತೆ ಕಾಲುವೆಗೆ ಯಾವಾಗಿನಿಂದ ಎಷ್ಟು ನೀರು?

  • ಡಿಸೆಂಬರ್ 1ರಿಂದ ಡಿ.15ರವರೆಗೆ 1500 ಕ್ಯೂಸೆಕ್ಸ್​.
  • ಡಿ.15ರಿಂದ ಡಿ.31ರವರೆಗೆ 2ಸಾವಿರ ಕ್ಯೂಸೆಕ್ಸ್.
  • 2025ರ ಜನವರಿ 1ರಿಂದ ಜನವರಿಗೆ 31ರ ವರೆಗೆ 3800 ಕ್ಯೂಸೆಕ್ಸ್.
  • ಫೆಬ್ರವರಿ 01ರಿಂದ ಫೆ.28ರ ವರೆಗೆ 3800 ಕ್ಯೂಸೆಕ್ಸ್.
  • ಮಾರ್ಚ್ 1ರಿಂದ ಮಾ.31ರವರೆಗೆ 3800 ಕ್ಯೂಸೆಕ್ಸ್ ನೀರು ಹರಿಸಲು ತೀರ್ಮಾನವಾಗಿದೆ.
  • ಹಾಗೇ ಮಾರ್ಚ್ 1ರಿಂದ ಮಾ.10ರವರೆಗೆ 1650 ಕ್ಯೂಸೆಕ್ಸ್​ ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆ ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.

ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ್ ತಂಗಡಗಿ, ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ್ದು, ತುಂಗಭದ್ರಾ ಎಡದಂಡೆ ಕಾಲುವೆ, ಬಲದಂಡೆ ಕಾಲುವೆ, ಎಡದಂಡೆ ವಿಜಯನಗರ ಕಾಲುವೆ, ರಾಯಬಸಣ್ಣ ಕಾಲುವೆ, ಕೆಳಮಟ್ಟದ ಕಾಲುವೆ, ಮೇಲ್ಮಟ್ಟದ ಕಾಲುವೆಯಲ್ಲಿ ನೀರು ಬಿಡಲು ನಿರ್ಧಾರ ಮಾಡಿದ್ದೇವೆ. ನಿಗದಿತ ದಿನಾಂಕಗಳಂದು ಎಲ್ಲ ಕಾಲುವೆಗಳಲ್ಲಿ ನೀರು ಬಿಡುತ್ತೇವೆ. 97 ಟಿಎಂಸಿ ನೀರು ನಮ್ಮಲ್ಲಿ(ತುಂಗಾಭದ್ರ ಜಲಾಶಯ) ಲಭ್ಯವಿದೆ. 20-25 ಟಿಎಂಸಿ ನೀರು ಹರಿದು ಹೋಗಿ ಮತ್ತೆ ಡ್ಯಾಂ ತುಂಬಿದ್ದು ಇತಿಹಾಸ. ಎರಡನೇ ಬೆಳೆಗೆ ನೀರು ಕೊಡುತ್ತೇವೆ ಎಂದು ಸಿಎಂ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಅದರ ಪ್ರಕಾರ ನೀರು ರೈತರಿಗೆ ತಲುಪಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಹಿಂದಿನ ಬಿಜೆಪಿ ಸರ್ಕಾರ 19ನೇ ಗೇಟ್ ಮುರಿದಾಗ ಆರೋಪ ಮಾಡಿದ್ದರು. ಡ್ಯಾಂ ನ ನಿರ್ವಹಣೆ ಮಾಡುವುದು ಸೆಂಟ್ರಲ್ ಬೋರ್ಡ್. ಗೇಟ್ ಮುರಿದಾಗ ನಾವೆಲ್ಲ ಸತತ ಪ್ರಯತ್ನ ಮಾಡಿದ್ದೇವೆ. 6 ದಿನಗಳ ಒಳಗೆ 35 ಟಿಎಂಸಿ ನೀರು ಉಳಿಸಿದ್ದೇವೆ. ಅದರ ಬಗ್ಗೆ ಬಿಜೆಪಿ ನಾಯಕರು ತಿಳಿದುಕೊಳ್ಳದೇ ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸಿದ್ರು/ ಬಿಜೆಪಿಯವರು ಶಾಸಕರು ಸಭೆಗೆ ಬಂದು ನಾವೇ ಗೇಟ್ ಮುರಿದ ಹಾಗೇ ಆರೋಪ ಮಾಡಿದ್ದರು. ಗೇಟ್ ಹೊಸದಾಗಿ ಅಳವಡಿಸಬೇಕು ಎಂದು ವರದಿ ಕೊಟ್ಟಿದ್ದೇ ಬಿಜೆಪಿ ಸರ್ಕಾರದ ಕಾಲದಲ್ಲಿ. ಆಗ ತುಂಗಭದ್ರಾ ಡ್ಯಾಂ ಗೇಟ್ ಅಳವಡಿಸಲು ಬಿಜೆಪಿ ಏನೂ ಮಾಡಲಿಲ್ಲ ಎಂದು ಕಿಡಿಕಾರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:04 pm, Thu, 21 November 24