ಮೈಸೂರು: ನಾಲೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ನಗರದ ಹೊರವಲಯದಲ್ಲಿರುವ ಗೊರೂರು ಬಳಿಯ ವರುಣ ನಾಲೆಯಲ್ಲಿ ನಡೆದಿದೆ. ಕುವೆಂಪುನಗರದ ನಿವಾಸಿಗಳಾದ ಹರೀಶ್(16) ಮತ್ತು ವೈಭವ್(13) ನೀರುಪಾಲಾದ ಬಾಲಕರು.
ಸ್ನೇಹಿತರ ಜೊತೆ ನಾಲೆಯಲ್ಲಿ ಈಜಲು ತೆರಳಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಹುಡುಗರು ನೀರುಪಾಲಾಗಿದ್ದಾರೆ. ಇತ್ತ, ನೀರಿಗೆ ಇಳಿಯದ ಕಾರಣ ಮೃತರ ಸ್ನೇಹಿತರಾದ ಕುಮಾರ್ ಹಾಗೂ ಧರಣೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.