AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನತಾ ಕರ್ಫ್ಯೂ ಬಿಸಿಗೆ ಬಾಡಿಹೋದ ಮಲ್ಲಿಗೆ; ಹೂವಿನ ಬೆಳೆಗೆ ಸರಿಯಾದ ಬೆಲೆ ಸಿಗದೆ ಕಂಗಾಲಾದ ಉಡುಪಿ ಬೆಳೆಗಾರರು

ಪೇಟೆಂಟ್ ಪಡೆದ ಅಪರೂಪದ ಪುಷ್ಪ ಎನ್ನುವುದು ಉಡುಪಿ ಮಲ್ಲಿಗೆಯ ಹೆಗ್ಗಳಿಕೆ. ಈ ಹೂವಿನ ದರ 11.30 ರಿಂದ11.45 ಗಂಟೆಗೆ ಸಾಮಾನ್ಯವಾಗಿ ನಿಗದಿಯಾಗುತ್ತದೆ. ಆದರೆ ಲಾಕ್​ಡೌನ್ ಕಾರಣದಿಂದ 9.45 ಗಂಟೆಗೆ ಅಟ್ಟೆಯೊಂದಕ್ಕೆ 150 ರೂಪಾಯಿ ದರ ನಿಗದಿಯಾಗಿದೆ.

ಜನತಾ ಕರ್ಫ್ಯೂ ಬಿಸಿಗೆ ಬಾಡಿಹೋದ ಮಲ್ಲಿಗೆ; ಹೂವಿನ ಬೆಳೆಗೆ ಸರಿಯಾದ ಬೆಲೆ ಸಿಗದೆ ಕಂಗಾಲಾದ ಉಡುಪಿ ಬೆಳೆಗಾರರು
ಮಲ್ಲಿಗೆ
preethi shettigar
|

Updated on: Apr 30, 2021 | 10:09 AM

Share

ಉಡುಪಿ: ಬಿಳಿ‌ ಮುತ್ತಿನಂತೆ ಕಾಣುವ ಮಲ್ಲಿಗೆ ಹೂವಿಗೆ ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ಶಂಕರ್​ಪುರದ ಮಲ್ಲಿಗೆ ಹೂ ಇಲ್ಲದೆ ಮದುವೆ, ಧಾರ್ಮಿಕ ಪೂಜೆ ,ನೇಮ, ನಡಾವಳಿಗಳು‌ ನಡೆಯುವುದೇ ಇಲ್ಲ ಎನ್ನುವಷ್ಟರಮಟ್ಟಿಗೆ ಮಲ್ಲಿಗೆ ಹೂವಿಗೆ ಆದ್ಯತೆ. ಆದರೆ ಸದ್ಯ ಮಲ್ಲಿಗೆ ಹೂವನ್ನು ಕೇಳುವವರೇ ಇಲ್ಲದಂತಾಗಿದೆ. ಮಲ್ಲಿಗೆ ಹೂಗಳನ್ನು ಗಿಡದಿಂದ ತೆಗೆದು ಪೊಣಿಸಿ ಅಟ್ಟೆ ಕಟ್ಟಿ ಮಾರುಕಟ್ಟೆಗೆ ಬರುವಾಗಲೇ ಅಂಗಡಿ ಬಂದ್ ಆಗಿರುತ್ತದೆ. ಅಲ್ಲದೇ ಜನತಾ ಕರ್ಪ್ಯೂ ನಡುವೆ ಪೂರ್ವಾಹ್ನ 10 ಗಂಟೆಯವರೆಗೆ ಮಾತ್ರ ಹೂವಿನ‌ ಮಾರುಕಟ್ಟೆ ತೆರೆಯಲು ಅವಕಾಶ ಇದೆ. ಇದರಿಂದ ಮಲ್ಲಿಗೆ ಬೆಳೆಗಾರರ ಜೊತೆಗೆ ಹೂವಿನ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ.

ಮಲ್ಲಿಗೆ ಮೊಗ್ಗುಗಳನ್ನು ಬೆಳಗ್ಗಿನ ಜಾವ ಗಿಡಗಳಿಂದ ಬಿಡಿಸಿ, ಅವುಗಳನ್ನು ಕಟ್ಟಿ ಚೆಂಡು ಮಾಡಿ ಮಾರುಕಟ್ಟೆಗೆ ಕಳುಹಿಸುವಾಗ ಬೆಳಗ್ಗೆ 10 ಗಂಟೆಯಾಗುತ್ತದೆ. ಆದರೆ ಈಗ ಜನತಾ ಕರ್ಫ್ಯೂ ಜಾರಿಯಲ್ಲಿದ್ದು, ಬೆಳಗ್ಗೆ 10 ಗಂಟೆಗೆ ಅಗತ್ಯ ವಸ್ತುಗಳಿಗಾಗಿ ತೆರೆದಿರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕು. ಇದರಿಂದ ಮಲ್ಲಿಗೆ ಮೊಗ್ಗನ್ನು ಮಾರುಕಟ್ಟೆಗೆ ಕಳುಹಿಸಿದರೂ ಅದನ್ನು ಮಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಮಲ್ಲಿಗೆ ವ್ಯಾಪಾರಿ ರಮೇಶ್ ಹೇಳಿದ್ದಾರೆ.

ಪೇಟೆಂಟ್ ಪಡೆದ ಅಪರೂಪದ ಪುಷ್ಪ ಎನ್ನುವುದು ಉಡುಪಿ ಮಲ್ಲಿಗೆಯ ಹೆಗ್ಗಳಿಕೆ. ಈ ಹೂವಿನ ದರ 11.30 ರಿಂದ 11.45 ಗಂಟೆಗೆ ಸಾಮಾನ್ಯವಾಗಿ ನಿಗದಿಯಾಗುತ್ತದೆ. ಆದರೆ ಲಾಕ್​ಡೌನ್ ಕಾರಣದಿಂದ 9.45 ಗಂಟೆಗೆ ಅಟ್ಟೆಯೊಂದಕ್ಕೆ 150 ರೂಪಾಯಿ ದರ ನಿಗದಿಯಾಗಿದೆ. ಪ್ರತೀವರ್ಷ ಈ ದಿನಗಳಲ್ಲಿ ಸಾವಿರಕ್ಕೂ ಅಧಿಕ ದರದಲ್ಲಿ ಮಲ್ಲಿಗೆ ಮಾರಾಟವಾಗುತ್ತಿತ್ತು. ಆದರೆ ಈಗ ಮಲ್ಲಿಗೆ ಕೊಯ್ದು ಮಾರುಕಟ್ಟೆಗೆ ಬರುವಾಗಲೇ ತಡವಾಗುತ್ತದೆ.

ಬೆಳಗ್ಗೆ 11 ಗಂಟೆಗೆ ಮಲ್ಲಿಗೆ ಮಾರುಕಟ್ಟೆಗೆ ಬಂದರೆ, ಅದನ್ನು ತೆಗೆದು ಕೆಡದಂತೆ ಇಡಬೇಕಾಗುತ್ತದೆ. ಅಂಗಡಿಗಳಿಗೆ 10 ಗಂಟೆಯವರೆಗೆ ಮಾತ್ರ ಅವಕಾಶ ಇರುವ ಕಾರಣ ಅಂದಿನ‌ ಮಲ್ಲಿಗೆನಾ ಅಂದೇ ಮಾರಾಟ ಮಾಡುವುದಕ್ಕೆ ಆಗುವುದಿಲ್ಲ. ಮದುವೆಯಂತಹ ಕಾರ್ಯಕ್ರಮಗಳಿಗೆ ಅನುಮತಿ ಇರುವುದರಿಂದ ಮದುವೆ ಮನೆಯವರಿಗೆ ಮಲ್ಲಿಗೆ ವ್ಯವಸ್ಥೆ ಮಾಡಿಕೊಡಬೇಕಾಗುತ್ತದೆ. ಆರ್ಡರ್ ಇದ್ದರೆ ಹೂವನ್ನು ಪೂರೈಕೆ ಮಾಡಬೇಕಾಗುತ್ತದೆ. ತಾಜಾ ಹೂವಿನ ದರದಲ್ಲಿ ಮಾರಾಟ ಮಾಡುವುದಕ್ಕೆ ಆಗುವುದಿಲ್ಲ ಎಂದು ಕೃಷಿಕರಾದ ದಿವಕಾರ್ ಹೇಳಿದ್ದಾರೆ.

jasmine

ಮಲ್ಲಿಗೆ ಬೆಳೆಗಾರರಲ್ಲಿ ಆತಂಕ

ಈ ಹಿಂದೆ ಮಧ್ಯಾಹ್ನ 1 ಗಂಟೆಯವರೆಗೂ ಮಲ್ಲಿಗೆ ಹೂವು ಮಾರುಕಟ್ಟೆಗೆ ಪೂರೈಕೆ ಆಗುತ್ತಿತ್ತು. ಆದರೆ ಈಗ ಸಕಾಲದಲ್ಲಿ ಹೂವು ತಲುಪಿಸಲು ಬೆಳೆಗಾರರಿಗೆ ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಬೆಳೆಗಾರರು ಮಲ್ಲಿಗೆ ದರ ಕಡಿಮೆ ಇದೆ ಎನ್ನುವ ಕಾರಣಕ್ಕೆ ಮೊಗ್ಗು ಕೊಯ್ಯದೇ ಗಿಡದಲ್ಲೇ ಬಿಡುತ್ತಿದ್ದಾರೆ. ಮಲ್ಲಿಗೆ ಬೇಡಿಕೆ ಕಡಿಮೆ ಇರುವ ಕಾರಣ ಮಲ್ಲಿಗೆ ‌ಹೂವು ಕಟ್ಟಿ ಮಾರುಕಟ್ಟೆಗೆ ಹಾಕುವುದಕ್ಕೆ ಮಲ್ಲಿಗೆ ಬೆಳೆಗಾರರು ಮುಂದಾಗುತ್ತಿಲ್ಲ. ಸಿಗುವ ದರಕ್ಕಿಂತ ‌ಹೂವನ್ನು‌ ಮಾರುಕಟ್ಟೆಗೆ ಒದಗಿಸುವ ವೆಚ್ಚವೇ ಹೆಚ್ಚಾಗುವ ಕಾರಣ ರೈತರು‌ ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ. ಜನತಾ ಕರ್ಪ್ಯೂ ಮುಗಿಯುವ ವೇಳೆಗೆ ಮಲ್ಲಿಗೆ ಬೆಳೆಗಾರರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಲಿದ್ದಾರೆ ಎನ್ನುವುದು ಮಾತ್ರ ಸತ್ಯ.

ಇದನ್ನೂ ಓದಿ:

ರೈತರ ನಿರಾಸಕ್ತಿ! ಮಾಯವಾಗುತ್ತಿದೆ ಮೈಸೂರು ಮಲ್ಲಿಗೆ.. ಪರಿಮಳವೇ ಇಲ್ಲದ ಮದುರೈ ಮಲ್ಲಿಗೆ ಆಟಾಟೋಪ ಜಾಸ್ತಿಯಾಗಿದೆ!

ಅರಳಿ ನಿಂತ ಚೆಂಡು ಹೂ ಗಿಡಗಳ ಮೇಲೆ ಟ್ರ್ಯಾಕ್ಟರ್ ಪ್ರಹಾರ; ಬೆಳೆಸಿದವನ ಕೈಯಿಂದಲೇ ಮಣ್ಣುಪಾಲಾದ ಸುಂದರ ಹೂವುಗಳು

(Udupi Covid Lockdown Jasmin flowers sear due to Janatha Curfew in Udupi and many parts of Karnataka)

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ