ಹಳೇ ದ್ವೇಷ, ಅಧಿಕಾರದ ಮದ.. ಅಪಘಾತ ಮಾಡಿಸಿ ವ್ಯಕ್ತಿ ಕೊಲೆ ಮಾಡಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ?

ಆ ಊರಿನ ಜನ ದಂಗಾಗಿ ಹೋಗಿದ್ದಾರೆ. ಮನೆಯಿಂದ ಹೊರ ಬರೋಕೂ ಭಯ ಪಡ್ತಿದ್ದಾರೆ. ಯಾಕಂದ್ರೆ, ಹಳೇ ದ್ವೇಷ. ಅಧ್ಯಕ್ಷನಾಗಿ ಆಯ್ಕೆಯಾದ ಜೋಷ್ ಅಧಿಕಾರದ ಮದವೇರಿಸಿಕೊಂಡಿದ್ದ ಆತ, ರಸ್ತೆಯಲ್ಲಿ ಹೆಣ ಬೀಳಿಸಿದ್ದಾನಂತೆ. ಸಾಲದ್ದಕ್ಕೆ ಸಿನಿಮಾ ಸ್ಟೋರಿಯಂತೆ ಸೀನ್ ಕ್ರಿಯೆಟ್ ಮಾಡಿದ್ದಾನಂತೆ.

ಹಳೇ ದ್ವೇಷ, ಅಧಿಕಾರದ ಮದ.. ಅಪಘಾತ ಮಾಡಿಸಿ ವ್ಯಕ್ತಿ ಕೊಲೆ ಮಾಡಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ?
ಕೊಲೆಯಾಗಿರುವ ಉದಯ್ ಗಾಣಿಗ ಮತ್ತು ಕೊಲೆ ಮಾಡಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್

ಉಡುಪಿ: ನೆಮ್ಮದಿಯಾಗಿ ಮನೆಯಲ್ಲಿ ಇರ್ತಿದ್ದ ಜೀವಗಳಿಗೆ ಉಸಿರೇ ನಿಂತು ಹೋದಂತೆ ಆಗಿತ್ತು. ಇನ್ಯಾರಿಗಾಗಿ ಈ ಬದುಕು ಎನ್ನಿಸಿತ್ತು. ಸಮಾಧಾನ ಮಾಡುವ ಕೈಗಳು ಪಕ್ಕದಲ್ಲೇ ಇದ್ರೂ ಕಣ್ಣೀರ ಕೋಡಿ ಹರಿಸಿದ್ರು. ಮತ್ತೊಂದ್ಕಡೆ ಪೊಲೀಸರು ಫುಲ್ ಅಲರ್ಟ್ ಆಗಿದ್ರು. ಬೆರಳಚ್ಚು ತಜ್ಞರು ಕೂಡ ಕೆಲಸ ಮಾಡ್ತಿದ್ರು. ಯಾಕಂದ್ರೆ, ಇಡೀ ಮನೆಗೆ ಆಧಾರವಾಗಿದ್ದ ವ್ಯಕ್ತಿಯ ನೆತ್ತರು ಹರಿದಿತ್ತು.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಯಡಮೊಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಎಂಬುವವರ ಮೇಲೆ ಕೊಲೆಗಾರ ಅನ್ನೋ ದೊಡ್ಡ ಆರೋಪ ಕೇಳಿ ಬಂದಿದೆ. ಅಂದ್ಹಾಗೆ, ಇಲ್ಲಿ ಕೊಲೆಯಾಗಿರೋದು ಉದಯ್ ಗಾಣಿಗ. ಯಡಮೊಗೆ ಗ್ರಾಮದ ನಿವಾಸಿ. ಕೃಷಿ ಮಾಡ್ಕೊಂಡು ಬದುಕು ದೂಡುತ್ತಿದ್ದ. ಆದ್ರೆ, ಪ್ರಾಣೇಶ್ ಯಡಿಹಾಳ್ ಅಂದ್ರೆ ಉದಯ್ಗೆ ಆಗುತ್ತಿರಲಿಲ್ವಂತೆ. ಯಾಕಂದ್ರೆ, ಈ ಪ್ರಾಣೇಶ್ ಕೃಷಿಕರ ಪರವಾಗಿ ನಿಲ್ಲುತ್ತಿರಲಿಲ್ವಂತೆ. ಹೀಗಾಗಿ ಇವರಿಬ್ಬರ ನಡುವೆ ದ್ವೇಷ ಹುಟ್ಟಿಕೊಂಡಿತ್ತಂತೆ. ಇದೇ ಕಾರಣಕ್ಕೆ ಈ ಪ್ರಾಣೇಶ್ ಪ್ಲ್ಯಾನ್ ಮಾಡಿ, ಮೊನ್ನೆ ಶನಿವಾರ ಉದಯ್ ಬೈಕಿಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನಂತೆ. ಈ ವೇಳೆ ಸ್ಥಳೀಯರು ಉದಯ್ನನ್ನ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಬಟ್, ಚಿಕಿತ್ಸೆ ಫಲಿಸದೇ ಉದಯ್ ಮೃತಪಟ್ಟಿದ್ದಾನೆ. ಕುಟುಂಬಸ್ಥರು ಇದು ಅಪಘಾತ ಅಲ್ಲ. ಕೊಲೆ ಅಂತ ಆರೋಪ ಮಾಡ್ತಿದ್ದಾರೆ.

ಯಡಮೊಗೆ ಗ್ರಾಮದಲ್ಲಿ ಸುಮಾರು 25 ಕೊರೊನಾ ಪಾಸಿಟಿವ್ ಪ್ರಕರಣ ಇತ್ತು. ಜಿಲ್ಲಾಡಳಿತ ಹೇಳದಿದ್ದರೂ ಈ ಅಧ್ಯಕ್ಷ ಅಧಿಕ ಪ್ರಸಂಗ ಮಾಡಿ ನಿರ್ಬಂಧ ಹಾಕಿದ್ದಾನಂತೆ. ಸಾಲದಕ್ಕೆ ದೊಣ್ಣೆ ನಾಯಕನ ಹಾಗೆ ಬ್ಯಾರಿಕೇಡ್ ನಡುವೆ ಕೂತು ಪೋಸ್ ಕೊಟ್ಟು, ಎಲ್ಲೆಡೆ ಫೋಟೋ ಶೇರ್ ಮಾಡಿದ್ದಾನೆ. ಈ ಫೋಟೋ ನೋಡಿದ ಉದಯ್, ತಮ್ಮ ವಾಟ್ಸಾಪ್ ಸ್ಟೇಟಸ್ನಲ್ಲಿ ಊರಿಗೆ ಬೇಲಿ ಹಾಕುವ ಮೊದಲು ವ್ಯವಸ್ಥೆ ಕಲ್ಪಿಸಿ ಅಂತ ಬರೆದುಕೊಂಡಿದ್ದಾನೆ. ಇದನ್ನ ಗಮನಿಸಿದ ಪ್ರಾಣೇಶ್, ಉದಯ್ನ ಜೀವ ತೆಗೆದಿದ್ದಾನೆ ಅಂತ ಕುಟುಂಬಸ್ಥರು ಆರೋಪಿಸ್ತಿದ್ದಾರೆ. ಪೊಲೀಸರು ಇದೇ ಌಂಗಲ್ನಲ್ಲಿ ತನಿಖೆ ಮಾಡ್ತಿದ್ದಾರೆ.

ಅಧ್ಯಕ್ಷ ಪ್ರಾಣೇಶ್, ಉದಯ್ ಮನೆಯಲ್ಲಿ ಬೋರ್ವೆಲ್ ಕೊರೆಸಲು ಅವಕಾಶ ಕೊಟ್ಟಿಲ್ಲ ಅನ್ನೋ ವಿಷ್ಯ ದ್ವೇಷಕ್ಕೆ ಮೂಲ ಕಾರಣ ಎನ್ನಲಾಗಿದೆ. ಸದ್ಯ, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತವೋ ಕೊಲೆಯೋ ಅನ್ನೋ ಬಗ್ಗೆ ತನಿಖೆ ಮಾಡ್ತಿದ್ದಾರೆ.

ಇದನ್ನೂ ಓದಿ: ಕೊಲೆ ಆರೋಪಿಯ ಪತ್ತೆಗೆ ಆತನ ಚಪ್ಪಲಿ ಡಿಸೈನ್ ಕಾರಣವಾಯ್ತು! ಸೈ ಎನಿಸಿಕೊಂಡ ಹೆಣ್ಣೂರು ಪೊಲೀಸರು