ಕೊರೊನಾ ಸೋಂಕು ನಿರ್ವಹಣೆಗೆ ದೆಹಲಿಯತ್ತ ಮಣಿಪಾಲ ಕೆಎಂಸಿ ತಂಡ; ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಗಳಿಗೆ ಗೌರವ

ಮಣಿಪಾಲದಿಂದ ತೆರಳಿದ ವೈದ್ಯಕೀಯ ಸಿಬ್ಬಂದಿಗಳಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಮತ್ತು ವಿಮಾನ ನಿಲ್ದಾಣದಲ್ಲಿ ವಿಶೇಷವಾದ ಗೌರವವನ್ನು ಸಲ್ಲಿಸಲಾಯಿತು. ಏರ್ ಪೋರ್ಟ್ ಸಿಬ್ಬಂದಿಗಳು ಚಪ್ಪಾಳೆ ಬಾರಿಸುವ ಮೂಲಕ ಸಿಬ್ಬಂದಿಗಳಿಗೆ ಗೌರವ ಸಲ್ಲಿಸಿದರು.

  • TV9 Web Team
  • Published On - 15:37 PM, 5 May 2021
ಕೊರೊನಾ ಸೋಂಕು ನಿರ್ವಹಣೆಗೆ ದೆಹಲಿಯತ್ತ ಮಣಿಪಾಲ ಕೆಎಂಸಿ ತಂಡ; ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಗಳಿಗೆ ಗೌರವ
ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ 19 ಮಂದಿ ನರ್ಸ್​ಗಳನ್ನು ದೆಹಲಿಗೆ ಕಳುಹಿಸಲಾಗಿದೆ

ಉಡುಪಿ: ದೇಶದಾದ್ಯಂತ ಕೊರೊನಾ ಎರಡನೇ ಅಲೆ ಅತಿ ವೇಗವಾಗಿ ಪ್ರಸರಣವಾಗುತ್ತಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದೆ. ಇನ್ನು ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯೂ ಕೂಡ ಏರಿಕೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ ಕೊರೊನಾ ಜಾಗೃತಿ, ಲಾಕ್​ಡೌನ್ ಹೀಗೆ ಹಲವು ಅಸ್ತ್ರಗಳನ್ನು ರಾಜ್ಯ ಸರ್ಕಾರ ಪ್ರಯೋಗ ಮಾಡಿದರು ಯಾವುದೇ ಬದಲಾವಣೆ ಕಂಡುಬಂದಿಲ್ಲ. ಈ ನಡುವೆ ದೆಹಲಿಯ ಹಲವಾರು ಆಸ್ಪತ್ರೆಯ ವೈದ್ಯರಿಗೆ ನರ್ಸ್​ಗಳಿಗೆ ಕೊರೊನಾ ಆವರಿಸಿದೆ. ರೋಗಿಗಳ ಸಂಖ್ಯೆ ಜಾಸ್ತಿ ಆಗುತ್ತಿರುವುದರಿಂದ ಹೆಚ್ಚುವರಿ ದಾದಿಯರ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಉಡುಪಿಯ ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ 19 ಮಂದಿ ನರ್ಸ್​ಗಳನ್ನು ದೆಹಲಿಗೆ ಕಳುಹಿಸಿಕೊಡಲಾಗಿದೆ.

ಮಣಿಪಾಲ ಸಂಸ್ಥೆಯ ಸಹ ಸಂಸ್ಥೆಯಾದ ದೆಹಲಿಯ ಮಣಿಪಾಲ ದ್ವಾರಕಾ ಆಸ್ಪತ್ರೆಯ ಬೇಡಿಕೆ ಮೇರೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯ 19 ಮಂದಿ ದಾದಿಯರ ಮೊದಲ ತಂಡ ದೆಹಲಿಗೆ ತೆರಳಿದೆ.  ಮೇ 3 ರಂದು ದ್ವಾರಕಾ ಆಸ್ಪತ್ರೆ ಆಡಳಿತ ಮಂಡಳಿ ನರ್ಸಿಂಗ್ ವೃತ್ತಿಪರರ ಆವಶ್ಯಕತೆಯ ತಿಳಿಸಿದ್ದು, ಕೋರಿಕೆಯನ್ನು ಮಣಿಪಾಲ ದ್ವಾರಕಾ ಆಸ್ಪತ್ರೆಯ ಮುಂದೆ ಇಟ್ಟಿತ್ತು. ಅದರಂತೆ ಈಗ ನಡೆದುಕೊಳ್ಳಲಾಗಿದೆ.

ಮಣಿಪಾಲದಿಂದ ತೆರಳಿದ ವೈದ್ಯಕೀಯ ಸಿಬ್ಬಂದಿಗಳಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಮತ್ತು ವಿಮಾನ ನಿಲ್ದಾಣದಲ್ಲಿ ವಿಶೇಷವಾದ ಗೌರವವನ್ನು ಸಲ್ಲಿಸಲಾಯಿತು. ಏರ್ ಪೋರ್ಟ್ ಸಿಬ್ಬಂದಿಗಳು ಚಪ್ಪಾಳೆ ಬಾರಿಸುವ ಮೂಲಕ ಸಿಬ್ಬಂದಿಗಳಿಗೆ ಗೌರವ ಸಲ್ಲಿಸಿದರು.

ಮಣಿಪಾಲ ಕೆಎಂಸಿ ವೈದ್ಯಕೀಯ ಅಧೀಕ್ಷಕ ಅವಿನಾಶ್ ಶೆಟ್ಟಿ ಈ ಸಂದರ್ಭದಲ್ಲಿ ಮಾತನಾಡಿ, ಪಕ್ಕದ ರಾಜ್ಯಗಳಿಗೆ ಸಾಂಕ್ರಾಮಿಕ ರೋಗ ಅವರಿಸಿರುವ ಕಾರಣ ಸಹಾಯಹಸ್ತ ನೀಡುವುದು ನಮ್ಮ ಜವಾಬ್ದಾರಿ. ಉಡುಪಿ ಜಿಲ್ಲೆಯಲ್ಲಿ ವಿಪರೀತ ಕೊರೊನಾ ವ್ಯಾಪಿಸಿರುವ ಸಂದಿಗ್ಧ ಸ್ಥಿತಿ ಇದ್ದರೂ, ದೆಹಲಿಯಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ ಎಂಬುವುದನ್ನು ಅರಿತು. ಅಲ್ಲಿನ ಆಸ್ಪತ್ರೆಯ ಕಾರ್ಯನಿರ್ವಹಣೆಗಾಗಿ ನಾವು ಸಹಾಯಹಸ್ತ ನೀಡುತ್ತಿದ್ದೇವೆ. ಇದು ನಮ್ಮ ಜವಾಬ್ದಾರಿ ಕೂಡ ಹೌದು ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಯಾದಗಿರಿಯ ವೈದ್ಯರಿಗೆ ಕೊರೊನಾ ಸೋಂಕು; ಕೊವಿಡ್​ ಗೆದ್ದು ಇತರರಿಗೆ ಮಾದರಿಯಾದ ಕೊರೊನಾ ವಾರಿಯರ್ಸ್

ಕೊರೊನಾ ಸಂಕಷ್ಟ: ದೇಶದ 80 ಕೋಟಿ ಬಡವರಿಗೆ 2 ತಿಂಗಳು ಆಹಾರಧಾನ್ಯ ನೀಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ