ತಾಂತ್ರಿಕ ತೊಡಕು; ಎಮ್​ಆರ್​ಪಿಎಲ್​, ಎಚ್​ಪಿಸಿಎಲ್​ ವಿಲೀನ ಪ್ರಕ್ರಿಯೆ ನಾಲ್ಕು ವರ್ಷ ತಡವಾಗುವ ಸಾಧ್ಯತೆ

ಕರ್ನಾಟಕದ ಜನ ರಾಜ್ಯದಲ್ಲಿ ಹುಟ್ಟುಹಾಕಿದ್ದ ಬ್ಯಾಂಕ್​ಗಳನ್ನು​ ಬೇರೆ ಬ್ಯಾಂಕ್​ಗಳಲ್ಲಿ ವಿಲೀನ ಮಾಡಿದ್ದರ ಕುರಿತಾಗಿ ಬೇಸರ ಹೊಂದಿದ್ದರು. ಈ ಮಧ್ಯೆ ಎಮ್​ಆರ್​ಪಿಎಲ್​ ಮತ್ತು ಎಚ್​ಪಿಸಿಎಲ್​ ವಿಲೀನ ಪ್ರಕ್ರಿಯೆಯ ಸುದ್ದಿ ಜನರಿಗೆ ಶಾಕ್​ ನೀಡಿತ್ತು. ತಾಂತ್ರಿಕ ಕಾರಣದಿಂದಾಗಿ ವಿಲೀನ ಪ್ರಕ್ರಿಯೆಗೆ ಈಗ ತಾತ್ಕಾಲಿಕ ವಿರಾಮ ಸಿಕ್ಕಿದೆ. ​

  • TV9 Web Team
  • Published On - 18:50 PM, 18 Jan 2021
ತಾಂತ್ರಿಕ ತೊಡಕು; ಎಮ್​ಆರ್​ಪಿಎಲ್​, ಎಚ್​ಪಿಸಿಎಲ್​ ವಿಲೀನ ಪ್ರಕ್ರಿಯೆ ನಾಲ್ಕು ವರ್ಷ ತಡವಾಗುವ ಸಾಧ್ಯತೆ
ಎಂಆರ್​ಪಿಎಲ್ (ಚಿತ್ರಕೃಪೆ: mrpl.co.in)

ಮಂಗಳೂರಿನ ಬಳಿ ಇರುವ ಎಮ್​ಆರ್​ಪಿಎಲ್​ ಅನ್ನು ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಚ್​ಪಿಸಿಎಲ್​ನ ಜೊತೆ ವಿಲೀನಗೊಳಿಸುವ ಪ್ರಕ್ರಿಯೆ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿದೆ. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಈ ಪ್ರಕ್ರಿಯೆ ಈಗ ನಿಲ್ಲುತ್ತಿದೆ. ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರ ಎಮ್​ಆರ್​ಪಿಎಲ್​ ಒಂದು ಮಿನಿರತ್ನ ಕಂಪೆನಿ.

ಎಮ್​ಆರ್​ಪಿಎಲ್​ನಂತೆ ಮಂಗಳೂರಿನಲ್ಲಿ Oil and Natural Gas Commission ನಡೆಸುವ ಓಎನ್​ಜಿಸಿ ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್​ (OMPL) ಎಂಬ ಸಂಸ್ಥೆ ಇದೆ. ಮೊದಲು ಈ ಎಮ್​ಆರ್​ಪಿಎಲ್​ ಮತ್ತು ಓಎಮ್​ಪಿಎಲ್​ ವಿಲೀನ ಆಗಬೇಕಿದೆ.

ಆ ಪ್ರಕ್ರಿಯೆ ಮುಗಿದ ಮೇಲೆ ಎಚ್​ಪಿಸಿಎಎಲ್​ ಮತ್ತು ಎಮ್​ಆರ್​ಪಿಎಲ್ ವಿಲೀನದ ಪ್ರಕ್ರಿಯೆ ಪ್ರಾರಂಭವಾಗುವುದು. ಅಂದಾಜಿನ ಪ್ರಕಾರ, ಎಮ್​ಆರ್​ಆರ್​ಪಿಎಲ್​ ಮತ್ತು ಎಚ್​ಪಿಸಿಎಲ್​ ವಿಲೀನ ಪ್ರಕ್ರಿಯೆ ಕನಿಷ್ಠ ನಾಲ್ಕು ವರ್ಷ ತಡವಾಗುವ ನಿರೀಕ್ಷೆ ಇದೆ ಎಂದು ಓಎನ್​ಜಿಸಿ ಹೇಳಿದೆ.

ಕಳೆದ ವರ್ಷ ಆಕ್ಟೋಬರ್​ 19 ರಂದು ಎಮ್​ಆರ್​ಪಿಎಲ್​ನ ನಿರ್ದೇಶಕ ಮಂಡಳಿ ಓಎಮ್​ಪಿಎಲ್​ ನ ಶೇ 49ರಷ್ಟು ಷೇರುಗಳನ್ನು ಖರೀದಿಸಲು ನಿರ್ಧರಿಸಿತು. ಈ ಓಎಮ್​ಪಿಎಲ್,​ ಎಮ್​ಆರ್​ಪಿಎಲ್​ ಮತ್ತು ಓಎನ್​ಜಿಸಿ ಸೇರಿ ಹುಟ್ಟು ಹಾಕಿರುವ ಒಂದು ಸಂಸ್ಥೆ. ಈಗ ಪ್ರಕ್ರಿಯೆ ಪ್ರಾರಂಭವಾಗಿದೆ. ಕಾನೂನಿನ ಪ್ರಕಾರ ಈ ಪ್ರಕ್ರಿಯೆ ಮುಗಿಸಿದ ನಂತರ ಆ ಕಂಪೆನಿ ಕನಿಷ್ಠ ನಾಲ್ಕು ವರ್ಷ ಸ್ವತಂತ್ರವಾಗಿ ವ್ಯವಹಾರ ನಡೆಸಬೇಕು. ಅದಾದ ಮೇಲೆ, ಎಮ್​ಆರ್​ಪಿಎಎಲ್​ ಅನ್ನು ಎಚ್​ಪಿಸಿಎಲ್​ ಜೊತೆ ವಿಲೀನ ಮಾಡಬಹುದಾಗಿದೆ. ಆದ್ದರಿಂದ ಇಂದಿನಿಂದ ಲೆಕ್ಕ ಹಾಕಿದರೂ, 2024 ಕೊನೆಯ ಹೊತ್ತಿಗೆ ಎಮ್​ಆರ್​ಪಿಎಎಲ್​ನ ವಿಲೀನ ಎಚ್​ಪಿಸಿಎಲ್​ನಲ್ಲಿ ಆಗುವ ಸಾಧ್ಯತೆ ಇದೆ.

ಎಮ್​ಆರ್​ಪಿಎಲ್​ನಲ್ಲಿ ಹೆಚ್ಚುಳಿದ ನಾಪ್ಥಾ ಮತ್ತು ಆರೋಮಾಟಿಕ್​ ರಾಸಾಯನಿಕವನ್ನು ಬಳಸಿಕೊಂಡು ಒಎಂಪಿಎಲ್​ನಲ್ಲಿ ಬೇರೆ ಬೇರೆ ಪೆಟ್ರೋಲಿಯಮ್​ ಉತ್ಪನ್ನಗಳನ್ನು ಅಂದರೆ, ಪ್ಯಾರಾ ಕ್ಸೈಲೀನ್​ ಮತ್ತು 283 ಕೆಟಿಪಿಎ ಬೆಂಜಿನ್​ ಉತ್ಪಾದಿಸಲಾಗುತ್ತಿದೆ.

ಕರ್ನಾಟಕದ ಬ್ಯಾಂಕ್​ಗಳ ವಿಲೀನವಾಯ್ತು…ಈಗ ಮಂಗಳೂರಿನ MRPL ಸರದಿ​.. ಯಾರಿಗೆ ಹಾನಿ? ಹೇಗೆ?