ಉಡುಪಿ: ಸಮುದ್ರಮಟ್ಟಕ್ಕಿಂತ 300 ಅಡಿ ಎತ್ತರದಲ್ಲಿರುವ ಈ ಬಾವಿಯಲ್ಲಿ ವರ್ಷದ 365 ದಿನವೂ ಇರುತ್ತೆ ನೀರು!
ಜಿಲ್ಲೆಯ ಪಶ್ಚಿಮ ದಿಕ್ಕಿನಲ್ಲಿ ಬೋರ್ಗೆರೆಯುವ ಆರಬ್ಬೀ ಸಮುದ್ರವಿದ್ದರೂ ಕೂಡ ಉಡುಪಿಯ ಜನರಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಭವಣೆ ತಪ್ಪಿದ್ದಲ್ಲ. ಸದ್ಯ ಜಿಲ್ಲೆಯ ಸಮುದ್ರ ಮಟ್ಟಕ್ಕೆ ಸಮಾನಾಂತರವಾಗಿರುವ ಬಹುತೇಕ ಜಾಗಗಳಲ್ಲಿ ಜಲಮೂಲಗಳು ಇಂಗಿ ಹೋಗಿವೆ. ಆದರೆ, ಸಮುದ್ರ ಮಟ್ಟಕ್ಕಿಂತ 300 ಅಡಿ ಎತ್ತರದಲ್ಲಿ ಕುಡಿಯುವ ನೀರು ಸಮೃದ್ಧವಾಗಿದೆ!
ಉಡುಪಿ, ಮೇ 18: ಉಡುಪಿ (Udupi) ಜಿಲ್ಲೆಯಲ್ಲಿ ಕುಡಿಯುವ ನೀರಿಗೂ (Drinking Water) ತತ್ವಾರ ಎದುರಾಗಿದ್ದು, ನಗರ ಪ್ರದೇಶಗಳಲ್ಲಿ ಈಗಾಗಲೇ ನೀರಿನ ರೇಷನ್ (Water Ration) ಪದ್ಧತಿ ಆರಂಭವಾಗಿದೆ. ಇಂತಹ ಜಿಲ್ಲೆಯಲ್ಲಿ ಸಮುದ್ರಮಟ್ಟಕ್ಕಿಂತ 300 ಅಡಿಗಳ ಎತ್ತರದಲ್ಲಿರುವ ಪ್ರದೇಶದಲ್ಲಿ ಸಮೃದ್ಧವಾಗಿ ನೀರು ಸಿಗುತ್ತಿದೆ ಎಂದರೆ ನೀವು ನಂಬುತ್ತೀರಾ? ಅದೂ ಸಹ ವರ್ಷದ 365 ದಿನವೂ! ಜಿಲ್ಲೆಯ ಪಶ್ಚಿಮ ದಿಕ್ಕಿನಲ್ಲಿ ಬೋರ್ಗೆರೆಯುವ ಆರಬ್ಬೀ ಸಮುದ್ರವಿದ್ದರೂ ಕೂಡ ಉಡುಪಿಯ ಜನರಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಭವಣೆ ತಪ್ಪಿದ್ದಲ್ಲ. ಸದ್ಯ ಜಿಲ್ಲೆಯ ಸಮುದ್ರ ಮಟ್ಟಕ್ಕೆ ಸಮಾನಾಂತರವಾಗಿರುವ ಬಹುತೇಕ ಜಾಗಗಳಲ್ಲಿ ಜಲಮೂಲಗಳು ಇಂಗಿ ಹೋಗಿವೆ. ಜೂನ್ ಮೊದಲ ವಾರದಲ್ಲಿ ಬರಬಹುದಾದ ಮಳೆಯ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ. ಇಂತಹ ಜಿಲ್ಲೆಯಲ್ಲಿ ಸಮುದ್ರ ಮಟ್ಟಕ್ಕಿಂತ 300 ಅಡಿ ಎತ್ತರದಲ್ಲಿ ಕುಡಿಯುವ ನೀರು ಸಮೃದ್ಧವಾಗಿದೆ. ಕುಂದಾಪುರ ತಾಲೂಕಿನ ಸಿದ್ದಾಪುರ ಹೊಸಂಗಡಿ ಬಳಿಯ ಮೆಟ್ಕಲ್ ಗುಡ್ಡ (Metkalgudde) ಈ ಪ್ರಕೃತಿ ವೈಚಿತ್ರಕ್ಕೆ ಸಾಕ್ಷಿಯಾಗಿದೆ.
ಮೆಟ್ಕಲ್ ಗುಡ್ಡವು ಉಡುಪಿ ಜಿಲ್ಲೆಯ ಹೊಸಂಗಡಿ ಗ್ರಾಮದಲ್ಲಿದೆ. ಈ ಸ್ಥಳವು ಬಿದನೂರು ಮತ್ತು ಕೆಳದಿ ಸಾಮ್ರಾಜ್ಯದ ಐತಿಹಾಸಿಕವಾಗಿ ಮಹತ್ವದ್ದಾಗಿದೆ. ಕೆಳದಿ ಸಾಮ್ರಾಜ್ಯದ ರಾಜ ಶಿವಪ್ಪ ನಾಯಕ ಈ ಪ್ರದೇಶವನ್ನು ಆಳಿದಾಗ ಪ್ರಮುಖ ಸ್ಥಳವಾಗಿತ್ತು. ವಿಶೇಷವಾಗಿ ಬೆಟ್ಟದ ತುದಿಯಲ್ಲಿ ಕೋಟೆಗಳ ಅವಶೇಷಗಳಿವೆ. ಸಾಹಸ ಪ್ರಿಯರಿಗೆ ಗಮನಾರ್ಹ ಮತ್ತು ದೊಡ್ಡ ಅನ್ವೇಷಣೆಯಾಗಿದೆ. ಈ ಸ್ಥಳವು ವರಾಹಿ ಭೂಗತ ವಿದ್ಯುತ್ ಯೋಜನೆಗೆ ಸಮೀಪದಲ್ಲಿದೆ.
ಇಡೀ ಹುಲಿಕಲ್ ಘಾಟ್ (ಬಾಳೆಬರೆ) ಪ್ರದೇಶ ಮತ್ತು ಉಳಿದ ಕುಂಚಿಕಲ್ ಜಲಪಾತವು ಮೇಲಿನಿಂದ ಗೋಚರಿಸುತ್ತದೆ. ಬೆಟ್ಟದ ತುದಿಯಲ್ಲಿ ಇರುವ ಗಣೇಶ ದೇವಾಲಯದ ಮುಂಭಾಗದಲ್ಲಿರುವಂತ ಪುರಾತನ ಜಲ ವಿಸ್ಮಯ ಎನ್ನುವಂತಿದೆ. ಈ ಬಾವಿಯಲ್ಲಿ ವರ್ಷದ 365 ದಿನಗಳು ಕೂಡ ನೀರು ಲಭ್ಯವಿದ್ದು, ಇಲ್ಲಿಗೆ ಭೇಟಿ ನೀಡುವ ಎಲ್ಲರನ್ನ ಆಶ್ಚರ್ಯಚಕಿತರನ್ನಾಗಿಸುತ್ತಿದೆ.
ಇದನ್ನೂ ಓದಿ: ಮಂಗಳೂರು-ಉಡುಪಿಯಲ್ಲಿ ನೀರಿನ ಪಡಿತರ ಆರಂಭ -ಈ ಮಧ್ಯೆ ವನ್ಯಜೀವಿಗಳಿಗಾಗಿ ಅಧಿಕಾರಿಗಳು ಏನು ಮಾಡಿದ್ದಾರೆ ನೋಡಿ
ಒಟ್ಟಾರೆಯಾಗಿ ಜಿಲ್ಲೆಯಲ್ಲಿ ನೀರಿನ ಭವಣೆ ಇದ್ದರೂ ಕೂಡ ಬಹುತೇಕ ಇಂತಹ ಪುರಾತನ ಮತ್ತು ಐತಿಹಾಸಿಕ ಸ್ಥಳಗಳಲ್ಲಿ ಇಂದಿಗೂ ನೀರಿನ ಲಭ್ಯತೆ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ