ಉಡುಪಿ ಕೃಷ್ಣಮಠದಲ್ಲಿ ಗೊಡ್ಡ ಮೊಗೇರ ಸಮುದಾಯದ ಕೌಶಲ ಪ್ರದರ್ಶನಕ್ಕೆ ಅವಕಾಶ; ನಶಿಸುತ್ತಿರುವ ಕಲೆಯ ಉಳಿವಿಗೆ ಆದ್ಯತೆ

ಬುಡಕಟ್ಟು ಸಮುದಾಯದ ಕೌಶಲವನ್ನು ಗುರುತಿಸಿ ಅದಕ್ಕೆ ಅವಕಾಶ ಕಲ್ಪಿಸಿ ಅದನ್ನೊಂದು ವಾಣಿಜ್ಯೋದ್ಯಮವಾಗಿ ಬೆಳೆಸುವ ಸಾಧ್ಯತೆಗಳನ್ನು ಕೃಷ್ಣಮಠ ತೆರೆದಿಟ್ಟಿದೆ.

ಉಡುಪಿ ಕೃಷ್ಣಮಠದಲ್ಲಿ ಗೊಡ್ಡ ಮೊಗೇರ ಸಮುದಾಯದ ಕೌಶಲ ಪ್ರದರ್ಶನಕ್ಕೆ ಅವಕಾಶ; ನಶಿಸುತ್ತಿರುವ ಕಲೆಯ ಉಳಿವಿಗೆ ಆದ್ಯತೆ
ಬುಡಕಟ್ಟು ಸಮುದಾಯ ಜನರ ಕೌಶಲ
Follow us
TV9 Web
| Updated By: shruti hegde

Updated on: Sep 29, 2021 | 9:46 AM

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪ್ರತಿದಿನ ನಡೆಯುವ ಷೋಡಶೋಪಚಾರ ಪೂಜೆಗಳ ಜತೆಗೆ ಪರ್ಯಾಯ ಅದಮಾರು ಮಠದ ಆಡಳಿತ ಗೊಡ್ಡ ಮೊಗೇರ ಬುಡಕಟ್ಟು ಜನಾಂಗದ ಅಪರೂಪದ ಕೌಶಲವೊಂದಕ್ಕೆ ಅವಕಾಶ ಒದಗಿಸಿಕೊಡಲಾಗಿದೆ ಅದೇನು ಅಂತೀರಾ? ಇಲ್ಲಿದೆ ಓದಿ.. 

ಕರಾವಳಿ ಕಡೆಗೆ ಬಂದರೆ ಇಡ್ಲಿಯನ್ನು ಹೊಸರೂಪದಲ್ಲಿ ತಿನ್ನಲಾಗುತ್ತದೆ. ಒಲಿತ ಕಡುಬು ಎಂದು ಕರೆಯಲಾಗುವ ಈ ಅಪರೂಪದ ಖಾದ್ಯವನ್ನು ಹೆಚ್ಚಾಗಿ ಎಲ್ಲರೂ ಇಷ್ಟಪಡುತ್ತಾರೆ. ಮುಂಡಾಕದ ಎಲೆಯನ್ನು ಸುರುಳಿಯಾಗಿ ಸುತ್ತಿ ಅದರೊಳಗೆ ಕಡುಬು ಮಾಡುವುದು ಇಲ್ಲಿನ ಪದ್ಧತಿ. ಈ ಮುಂಡಾಕದ ಎಲೆಯಿಂದ ನಾನಾ ಬಗೆಯ ಪ್ರಯೋಜನಗಳಿವೆ. ಈ ಎಲೆಯನ್ನು ಬಳಸಿಕೊಂಡು, ಗೊಡ್ಡ ಮೊಗೇರ ಎಂಬ ಬುಡಕಟ್ಟು ಸಮುದಾಯದ ಜನರು ಅನೇಕ ಉತ್ಪನ್ನಗಳನ್ನು ತಯಾರಿಸುತ್ತಾರೆ. ಎಲ್ಲಕ್ಕಿಂತಲೂ ಅವರು ಈ ಎಲೆಯಿಂದ ತಯಾರಿಸುವ ಚಾಪೆ ಅದ್ಭುತವಾಗಿರುತ್ತದೆ. ಕಲಾತ್ಮಕವಾಗಿ ಎಲೆಯನ್ನು ಜೋಡಿಸಿ ಚಾಪೆ ತಯಾರಿಸುವ ಕೈಚಳಕ ಈ ಜನಾಂಗದವರಿಗೆ ಮಾತ್ರ ಗೊತ್ತು. ಈ ಜನಾಂಗದ ಜನರನ್ನು ಉಡುಪಿಯ ಕೃಷ್ಣಮಠಕ್ಕೆ ಬರಮಾಡಿಕೊಳ್ಳಲಾಗಿತ್ತು. ಮಠದ ಆವರಣದಲ್ಲಿ ಎಲೆಗಳನ್ನೆಲ್ಲ ಜೋಡಿಸಿ ಬಗೆಬಗೆಯ ಚಾಪೆಯನ್ನು ತಯಾರಿಸಲು ಅವಕಾಶ ನೀಡಲಾಗಿತ್ತು. ಮಠದ ಪ್ರತಿಯೊಂದು ಆಚರಣೆಯಲ್ಲೂ ದೇಸಿತನಕ್ಕೆ ಒತ್ತು ನೀಡುವ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರು, ಈ ಬುಡಕಟ್ಟು ಜನರ ಪ್ರತಿಭೆಗೆ ಮಾರುಹೋಗಿದ್ದರು. ರಾಜಾಂಗಣದ ಆವರಣದಲ್ಲಿ ಚಾಪೆ ತಯಾರಿಸಿ ಪ್ರದರ್ಶಿಸಿ ಮಾರಾಟ ಮಾಡಲು ಅವಕಾಶ ನೀಡಿದ್ದರು. ನಶಿಸುತ್ತಿರುವ ಬುಡಕಟ್ಟು ಜನಾಂಗಗಳ ಇಂತಹ ಅಪರೂಪದ ಕಲೆಗೆ, ವೇದಿಕೆ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿತ್ತು.

ಉಡುಪಿಯ ನದಿ ಮತ್ತು ಸಮುದ್ರ ತೀರಗಳಲ್ಲಿ ವಾಸಿಸುವ ಗೊಡ್ಡ ಮೊಗೇರ ಜನಾಂಗದವರು, ಯಾವುದೇ ಆರ್ಥಿಕ ಲಾಭ ಇಲ್ಲದ ಕಾರಣಕ್ಕೆ ಈ ಚಾಪೆ ನೇಯುವ ಕೆಲಸವನ್ನು ಬಹುತೇಕ ಕೈಬಿಟ್ಟಿದ್ದರು. ಇವರ ಕಲೆಗೆ ಆಧುನಿಕ ಸ್ಪರ್ಶವನ್ನು ನೀಡಿ, ಆನ್ಲೈನ್ ಮಾರುಕಟ್ಟೆಯ ಮೂಲಕ ಹೊಸ ಗ್ರಾಹಕರನ್ನು ಸೆಳೆಯಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈಗಾಗಲೇ ಉಡುಪಿ ಸೀರೆ, ಕೊರಗ ಜನಾಂಗದ ಡೋಲು, ಇಂತಹ ಅಪರೂಪದ ಬುಡಕಟ್ಟು ರಚನೆಗಳಿಗೆ ಅದಮಾರು ಮಠ ವೇದಿಕೆ ನೀಡಿದೆ. ಗುಡ್ಡಗಾಡುಗಳಲ್ಲಿ ಅಲೆದಾಡಿ ಈ ಜನಾಂಗದ ಮಹಿಳೆಯರು ಮುಂಡಾಕದ ಎಲೆಗಳನ್ನು ಸಂಗ್ರಹಿಸಿ, ಹರಸಾಹಸಪಟ್ಟು ಚಾಪೆ ತಯಾರಿಸುತ್ತಾರೆ. ವಿಶೇಷವಾಗಿ ದೇವಸ್ಥಾನದ ಸಂತರ್ಪಣೆಯ ಸಂದರ್ಭದಲ್ಲಿ, ಅನ್ನವನ್ನು ರಾಶಿ ಹಾಕಲು ಇದೇ ಚಾಪೆ ಬಳಸಲಾಗುತ್ತದೆ. ಆರಾಧನೆಗೆ ಬಳಸುವ ಈ ಚಾಪೆಯನ್ನು ಪಲ್ಲ ಚಾಪೆ ಎಂದು ಕರೆಯುತ್ತಾರೆ. ಅದೇ ರೀತಿಯಲ್ಲಿ ಮಲಗುವ ಚಾಪೆ, ಪೂಜೆಯ ಚಾಪೆ, ತೊಟ್ಟಿಲು ಚಾಪೆ, ಜಾಪೆಯ ಕೈಚೀಲವನ್ನು ಕಲಾಕೃತಿಯ ರೀತಿಯಲ್ಲಿ ಈ ಸಮುದಾಯದ ಮಹಿಳೆಯರು ತಯಾರಿಸುತ್ತಾರೆ. ಸದಾಕಾಲ ಆಧ್ಯಾತ್ಮಿಕ ಚಟುವಟಿಕೆಗಳು ಮಾತ್ರ ನಡೆಯುವ ಮಠದ ಆವರಣದಲ್ಲಿ, ಬುಡಕಟ್ಟು ಕಲೆಗೆ ಅವಕಾಶ ನೀಡಿದ್ದು ಸಮುದಾಯದವರಿಗೂ ಖುಷಿಯನ್ನು ಉಂಟುಮಾಡಿದೆ ಎಂದು ಸಮುದಾಯದ ಮುಖಂಡ ರಾಜಶೇಖರ ಅವರು ಹರ್ಷ ವ್ಯಕ್ತಪಡಿಸುತ್ತಾರೆ.

Udupi Krishna Mutt

ಪ್ರತಿಭೆಗಿರಲಿ ಪ್ರೋತ್ಸಾಹ

ಸೌಲಭ್ಯಗಳು ಬಡ ಸಮುದಾಯಗಳನ್ನು ಖುಷಿಪಡಿಸಬಹುದು. ಆದರೆ ಅವರ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಅವಕಾಶ ಕಲ್ಪಿಸಿ ಅದನ್ನೊಂದು ವಾಣಿಜ್ಯೋದ್ಯಮವಾಗಿ ಬೆಳೆಸುವ ಸಾಧ್ಯತೆಗಳನ್ನು ಕೃಷ್ಣಮಠ ತೆರೆದಿಟ್ಟಿದೆ. ಈ ಮೂಲಕ ಬುಡಕಟ್ಟು ಸಮುದಾಯ ಮತ್ತು ಕಲಾಸೇವೆ ಎರಡನ್ನು ಶ್ರೀಮಠವು ಮಾಡುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ವಿಶೇಷ ವರದಿ : ಹರೀಶ್ ಪಾಲೆಚ್ಚಾರ್ ಟಿವಿ 9 ಉಡುಪಿ

ಇದನ್ನೂ ಓದಿ: 

ದೇಸಾಯಿವಾಡೆ: ಶಂಕರ್ ನಾಗ್ ಅವರ ಜೋಕುಮಾರ ಸ್ವಾಮಿ ಚಿತ್ರ ಶೂಟಿಂಗ್ ನಡೆದದ್ದು ಇಲ್ಲೇ

ಕೈ ನಡಿಗೆಯಿಂದ 20 ಮೀಟರ್ ದೂರವನ್ನು ಕೇವಲ 4.78 ಸೆಕೆಂಡ್​ನಲ್ಲಿ ತಲುಪಿದ ವಿಶೇಷ ಚೇತನ ಯುವಕ; ಗಿನ್ನೆಸ್ ದಾಖಲೆಗೆ ಸೇರ್ಪಡೆ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ