ವಾಲಿಬಾಲ್​ ಆಡುವಾಗ ಮೈದಾನದಲ್ಲೇ ಕುಸಿದು ಬಿದ್ದು ಮೃತಪಟ್ಟ ಆಟಗಾರ

ದೇವರಾಜ್ ಅಂಚನ್ ಶನಿವಾರ ರಾತ್ರಿ ಇನ್ನಂಜೆ ಮೈದಾನದಲ್ಲಿ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಆಟವಾಡುತ್ತಿರುವಾಗ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ತೀವ್ರವಾಗಿ ಅಸ್ವಸ್ಥಗೊಂಡ ಅವರು ಉಡುಪಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ.

  • TV9 Web Team
  • Published On - 19:47 PM, 29 Mar 2021
ವಾಲಿಬಾಲ್​ ಆಡುವಾಗ ಮೈದಾನದಲ್ಲೇ ಕುಸಿದು ಬಿದ್ದು ಮೃತಪಟ್ಟ ಆಟಗಾರ
ದೇವರಾಜ್ ಅಂಚನ್

ಉಡುಪಿ:ಜಿಲ್ಲೆಯ ಕಾಪು ಸಮೀಪದ ಇನ್ನಂಜೆ ಮೈದಾನದಲ್ಲಿ ಶನಿವಾರ ರಾತ್ರಿ ವಾಲಿಬಾಲ್ ಆಡುತ್ತಿದ್ದ ರಾಜ್ಯಮಟ್ಟದ ವಾಲಿಬಾಲ್ ಆಟಗಾರರೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮೃತರನ್ನು ಕುರ್ಕಾಲು ಸುಭಾಸ್ ನಗರ ನಿವಾಸಿ ದೇವು ಯಾನೆ ದೇವರಾಜ್ ಅಂಚನ್(33) ಎಂದು ಗುರುತಿಸಲಾಗಿದೆ.

ದೇವರಾಜ್ ಅಂಚನ್ ಶನಿವಾರ ರಾತ್ರಿ ಇನ್ನಂಜೆ ಮೈದಾನದಲ್ಲಿ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಆಟವಾಡುತ್ತಿರುವಾಗ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ತೀವ್ರವಾಗಿ ಅಸ್ವಸ್ಥಗೊಂಡ ಅವರು ಉಡುಪಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ. ಅವಿವಾಹಿತರಾಗಿದ್ದ ದೇವರಾಜ್ ನಾಲ್ಕು ತಿಂಗಳ ಹಿಂದೆಯಷ್ಟೇ ತಂದೆಯನ್ನು ಕಳೆದುಕೊಂಡಿದ್ದರು. ಇದೀಗ, ದೇವು ತಾಯಿ ಮತ್ತು ಐವರು ಸಹೋದರಿಯರನ್ನು ಅಗಲಿದ್ದಾರೆ.

ಇವರ ಹೆಸರು ದೇವರಾಜ್ ಆದರೂ ಜನ ಇವರನ್ನು ಪಕ್ಕಿದೇವು ಅಂತಾನೇ ಕರೆಯುತ್ತಿದ್ದರು. ಹಕ್ಕಿಯಂತೆ ಜಿಗಿದು ವಾಲಿಬಾಲ್​ ಆಡುತ್ತಿದ್ದರು ಎಂಬ ಕಾರಣಕ್ಕೆ ದೇವರಾಜ್​ಗೆ ಪಕ್ಕಿದೇವು ಎಂದು ಕರೆಯುತ್ತಿದ್ದರು. ವಾಲಿಬಾಲ್​ ಆಟದಲ್ಲಿ ನಿಪುಣರಾಗಿದ್ದ್ ದೇವರಾಜ್ ತಮ್ಮ ಆಟದ ಮೂಲಕ ರಾಷ್ಟ್ರೀಯ ಆಟಗಾರರ ಬೆವರಿಳಿಸುತ್ತಿದ್ದರು ಎಂದು ಸ್ನೆಹಿತು ಹೇಳುತ್ತಾರೆ.

ಹೃದಯಾಘಾತದಿಂದ ಮೈದಾನದಲ್ಲಿ ಮೃತನಾದ ಕ್ರಿಕೆಟಿಗ:
ಮುಂಬೈನಲ್ಲೂ ಕೂಡ ಇದೇ ರೀತಿಯ ದುರ್ಘಟನೆ ನಡೆದಿತ್ತು. ಕ್ರಿಕೆಟ್​ ಪಂದ್ಯದ ವೇಳೆ ಬ್ಯಾಟ್ಸ್​ಮನ್​ ಓರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಪುಣೆ ಬಳಿಯಿರುವ ಜುನ್ನಾರ್​ ಪಟ್ಟಣದಲ್ಲಿ ನಡೆದ ಕ್ರಿಕೆಟ್​ ಪಂದ್ಯಾವಳಿಯಲ್ಲಿ ಘಟನೆ ಸಂಭವಿಸಿದೆ. ಮೃತ ಬ್ಯಾಟ್ಸ್​ಮನ್​ನನ್ನು 47 ವರ್ಷದ ಬಾಬು ನಲವಾಡೆ ಎಂದು ಗುರುತಿಸಲಾಗಿದೆ.

ನಾನ್​ ಸ್ಟ್ರೈಕರ್​ ಎಂಡ್​ ಬಳಿ ಕಾಯುತ್ತಿದ್ದ ವೇಳೆ ಬಾಬು ನಲವಾಡೆ ಇದಕ್ಕಿದ್ದತೆ ಕುಸಿದುಬಿದ್ದಿದ್ದಾರೆ. ಈ ವೇಳೆ, ಹೃದಯಾಘಾತದಿಂದ ಅಸುನೀಗಿದ್ದಾರೆ. ಅಂದ ಹಾಗೆ, ಕುಸಿದು ಬೀಳುವ ಕೆಲವೇ ನಿಮಿಷಗಳ ಮುಂಚೆ ಬಾಬು ಅಂಪೈರ್​ ಬಳಿ ಓವರ್​ನಲ್ಲಿ ಇನ್ನೆಷ್ಟು ಬಾಲ್​ ಉಳಿದಿದೆ ಎಂದು ವಿಚಾರಿಸಿದ್ದರಂತೆ. ಇದಾದ ಕೆಲವೇ ಸೆಕೆಂಡ್​ಗಳಲ್ಲಿ ಆತ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ. ಮ್ಯಾಚ್​ ವೇಳೆ ಬ್ಯಾಟ್ಸ್​ಮನ್ ಕುಸಿದು ಬೀದ್ದಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಕೂಡ ಆಗಿತ್ತು.

ಇದನ್ನೂ ಓದಿ:

Cricket ಹೃದಯಾಘಾತದಿಂದ ಮೈದಾನದಲ್ಲಿ ಮೃತನಾದ ಕ್ರಿಕೆಟಿಗ

India Cricket Schedule 2021-23: ಸೀನಿಯರ್ ಅಟಗಾರರಿಗೆ ಬ್ರೇಕ್ ನೀಡುವ ಪ್ರಸ್ತಾಪ ಬಿಸಿಸಿಐ ಮುಂದಿಟ್ಟ ಕೋಚ್ ರವಿ ಶಾಸ್ತ್ರೀ