Karnataka Unlock 3.0: ಹೊಸ ಅನ್‌ಲಾಕ್ ಮಾರ್ಗಸೂಚಿ ಪ್ರಕಟ; ಏನೆಲ್ಲಾ ಬದಲಾವಣೆ? ಯಾವುದಕ್ಕೆಲ್ಲಾ ಅವಕಾಶ?
ಕೊವಿಡ್ ಉಸ್ತುವಾರಿ ಸಚಿವರ ಜೊತೆ ಮುಖ್ಯಮಂತ್ರಿ ಸಭೆ ನಡೆಸಿದ್ದಾರೆ. ಕೊವಿಡ್ ಉಸ್ತುವಾರಿ ಸಚಿವರು, ಅಧಿಕಾರಿಗಳ ಜತೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ನಡೆಸಿದ್ದಾರೆ. 3ನೇ ಹಂತದ ಅನ್‌ಲಾಕ್ ಪ್ರಕ್ರಿಯೆ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊರೊನಾ ಎರಡನೇ ಅಲೆಯ ಬಳಿಕ ಮೂರನೇ ಹಂತದ ಅನ್‌ಲಾಕ್ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನ್‌ಲಾಕ್ 3.O ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಜುಲೈ 5ರ ಮುಂಜಾನೆ 5 ಗಂಟೆಯಿಂದ ಅನ್‌ಲಾಕ್ 3.O ಅನ್ವಯವಾಗಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಅನ್‌ಲಾಕ್ ಅನ್ವಯವಾಗಲಿದೆ ಎಂದಿದ್ದಾರೆ. ಮಂಗಳೂರು, ಮೈಸೂರು ಸಹಿತ ಅನ್‌ಲಾಕ್ 3.0 ಅನ್ವಯವಾಗಲಿದೆ. ಕೊವಿಡ್ ಉಸ್ತುವಾರಿ ಸಚಿವರ ಜೊತೆ ಮುಖ್ಯಮಂತ್ರಿ ಸಭೆ ನಡೆಸಿದ್ದಾರೆ. ಕೊವಿಡ್ ಉಸ್ತುವಾರಿ ಸಚಿವರು, ಅಧಿಕಾರಿಗಳ ಜತೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ನಡೆಸಿದ್ದಾರೆ. 3ನೇ ಹಂತದ ಅನ್‌ಲಾಕ್ ಪ್ರಕ್ರಿಯೆ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಉಪಮುಖ್ಯಮಂತ್ರಿ ಹಾಗೂ ಕೊವಿಡ್ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷ ಅಶ್ವತ್ಥ್ ನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಡಾ.ಕೆ.ಸುಧಾಕರ್, ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಸಿ..ಎಸ್. ರವಿಕುಮಾರ್ ಸಭೆಯಲ್ಲಿ ಭಾಗಿಯಾಗಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ.
ಯಾವುದಕ್ಕೆಲ್ಲಾ ಅವಕಾಶ? ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಶೇಕಡಾ 100ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಎಲ್ಲಾ ಮಾಲ್‌ಗಳು ಓಪನ್ ಮಾಡಲು ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ದೇವಾಲಯಗಳನ್ನು ತೆರೆಯುವ ಬಗ್ಗೆ ಕೆಲವು ನಿರ್ಬಂಧಗಳೊಂದಿಗೆ ಅವಕಾಶ ನೀಡಲಾಗಿದೆ. ಭಕ್ತರಿಗೆ ದೇವಾಲಯ ಪ್ರವೇಶ, ದೇವರ ದರ್ಶನ ಮತ್ತು ಆರತಿ ಸೇವೆಗಷ್ಟೇ ಅವಕಾಶ ಮಾಡಿಕೊಡಲಾಗಿದೆ. ಬಾರ್ಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.
ಈಜುಕೊಳದಲ್ಲಿ ಕ್ರೀಡಾಪಟುಗಳು ಅಭ್ಯಾಸಕ್ಕೆ ಅವಕಾಶ ನೀಡಲಾಗಿದೆ. ಜೊತೆಗೆ, ಕ್ರೀಡಾ ಸಂಕೀರ್ಣಗಳಲ್ಲಿ ಕ್ರೀಡಾಪಟುಗಳ ಅಭ್ಯಾಸಕ್ಕೆ ಅವಕಾಶ ಕೊಡಲಾಗಿದೆ. ಮದುವೆ, ಕೌಟುಂಬಿಕ ಸಮಾರಂಭಗಳಲ್ಲಿ 100 ಜನರು ಭಾಗಿಯಾಗಬಹುದು. ಅಂತ್ಯಕ್ರಿಯೆಯಲ್ಲಿ ಕೇವಲ 20 ಜನ ಭಾಗಿಯಾಗಲು ಅವಕಾಶ ಕೊಡಲಾಗಿದೆ. ಚರ್ಚ್, ಮಸೀದಿ, ದೇವಸ್ಥಾನಗಳಿಗೆ ಭಕ್ತರ ಪ್ರವೇಶಕ್ಕೆ ಅವಕಾಶ ಕೊಡಲಾಗಿದೆ. KSRTC, BMTC ಬಸ್ಗಳಲ್ಲಿ ಶೇಕಡಾ 100ರಷ್ಟು ಪ್ರಯಾಣಿಕರಿಗೆ ಅವಕಾಶ ಕೊಡಲಾಗಿದೆ. ಮೆಟ್ರೋ ರೈಲುಗಳಲ್ಲಿ ಕೂಡ ಶೇಕಡಾ 100ರಷ್ಟು ಜನರಿಗೆ ಅವಕಾಶ ನೀಡಲಾಗಿದೆ.
ಯಾವುದಕ್ಕೆಲ್ಲಾ ನಿರ್ಬಂಧ? ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಧಾರ್ಮಿಕ, ಸಭೆ ಸಮಾರಂಭಗಳಿಗೆ ಅವಕಾಶ ಇರುವುದಿಲ್ಲ. ಚರ್ಚ್, ಮಸೀದಿ, ದೇಗುಲಗಳಲ್ಲಿ ಭಕ್ತರ ಪ್ರವೇಶಕ್ಕೆ ಅನುಮತಿ ಇದ್ದರೂ ಸೇವೆಗಳಿಗೆ ನಿರ್ಬಂಧ ಹೇರಲಾಗಿದೆ. ಜುಲೈ 19ರ ವರೆಗೆ ಶಾಲಾ-ಕಾಲೇಜುಗಳನ್ನ ತೆರೆಯುವಂತಿಲ್ಲ. ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯದಂತೆ ಸರ್ಕಾರ ಆದೇಶ ಹೊರಡಿಸಿದೆ. ಸಿನಿಮಾ ಹಾಲ್ಗಳು ಕೂಡ ತೆರೆಯಲು ಅವಕಾಶ ನೀಡಲಾಗಿಲ್ಲ. ಮಾಸ್ಕ್ ಧರಿಸದವರಿಗೆ ನಗರಗಳಲ್ಲಿ 250 ರೂಪಾಯಿ ದಂಡ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 100 ರೂ. ದಂಡ ವಿಧಿಸಲಾಗುತ್ತೆ ಎಂದು ತಿಳಿಸಲಾಗಿದೆ.
ರಾತ್ರಿ ಕರ್ಫ್ಯೂ ಇದೆ, ವೀಕೆಂಡ್ ಕರ್ಫ್ಯೂ ಇಲ್ಲ ರಾಜ್ಯಾದ್ಯಂತ ಪ್ರತಿದಿನ ಸಂಜೆ 9ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಹಾಗೂ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿ ಇರುವುದಿಲ್ಲ. ಧಾರ್ಮಿಕ, ರಾಜಕೀಯ ಇತರ ಸಮಾರಂಭಗಳಿಗೆ ಅವಕಾಶ ಇರುವುದಿಲ್ಲ. ನೈಟ್ ಕರ್ಫ್ಯೂ ವೇಳೆ ಜನರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ನೈಟ್ ಕರ್ಫ್ಯೂ ವೇಳೆ ತುರ್ತು ಸೇವೆಗಳಿಗಷ್ಟೇ ಅವಕಾಶ ಕೊಡಲಾಗಿದೆ. ಎಲ್ಲಾ ಅಂಗಡಿ, ರೆಸ್ಟೋರೆಂಟ್, ಶಾಪಿಂಗ್ ಮಾಲ್‌ಗಳು, ಖಾಸಗಿ ಕಚೇರಿಗಳಲ್ಲಿ ಕೊವಿಡ್ ನಿಯಮ ಪಾಲನೆ ಕಡ್ಡಾಯ ಎಂದು ಹೇಳಲಾಗಿದೆ.
ಕೊರೊನಾ ಎರಡನೇ ಅಲೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಇಳಿಕೆಯಾಗಿದೆ. ಪಾಸಿಟಿವಿಟಿ ದರ ಕೂಡ ಕಡಿಮೆ ಆಗಿದೆ. ಕೊವಿಡ್-19 ಎರಡನೇ ಅಲೆ ಆತಂಕ ಕಡಿಮೆಯಾಗುತ್ತಿರುವಂತೆ ಲಾಕ್ಡೌನ್ ನಿಯಮಾವಳಿಗಳನ್ನು ಹಂತಹಂತವಾಗಿ ಸಡಿಲಿಕೆ ಮಾಡಲಾಗುತ್ತಿದೆ. ಜೂನ್ 14ರಂದು ಮೊದಲ ಅನ್‌ಲಾಕ್ ಘೋಷಿಸಲಾಗಿತ್ತು. ಆ ಬಳಿಕ, ಜೂನ್ 21ರಂದು ಮತ್ತೊಂದು ಹಂತದ ಲಾಕ್ಡೌನ್ ಸಡಿಲಿಕೆ ಮಾಡಲಾಗಿತ್ತು. ಇಂದು (ಜುಲೈ 3) ಮೂರನೇ ಹಂತದ ಅನ್‌ಲಾಕ್ ಘೋಷಿಸಲಾಗಿದೆ. ಜುಲೈ 5 ಅಂದರೆ ಸೋಮವಾರದಿಂದ ಈ ನಿಯಮಾವಳಿಗಳು ಜಾರಿಗೆ ಬರಲಿದೆ.
ಇದನ್ನೂ ಓದಿ: Karnataka Unlock 3.0: ಬಹುತೇಕ ನಿರ್ಬಂಧಗಳ ಸಡಿಲಿಕೆ; ಅನ್‌ಲಾಕ್ ಹೊಸ ಮಾರ್ಗಸೂಚಿ ಘೋಷಿಸಿದ ಬಿ ಎಸ್ ಯಡಿಯೂರಪ್ಪ
ಅನ್‌ಲಾಕ್ ಮಾಡುವುದು ಸುಲಭ ಆದರೆ, ಅನ್‌ಲಾಕ್ ನಂತರ ವೈರಸ್ ಹರಡುವ ಸಾಧ್ಯತೆಯಿದೆ: ಗೌರವ್ ಗುಪ್ತಾ
Published On - 7:27 pm, Sat, 3 July 21