Robot Teacher: 4ನೇ ತರಗತಿ ಮಕ್ಕಳಿಗೆ ಕಲಿಸಲು ಸಿದ್ದವಾಗಿರುವ ರೋಬೋಟ್!

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಟೆಕ್ ಗೀಕ್ ಒಬ್ಬರು ನಾಲ್ಕನೇ ತರಗತಿಯವರೆಗೆ ಮಕ್ಕಳಿಗೆ ಕಲಿಸುವ 'ಶಿಕ್ಷಾ' ಹೆಸರಿನ ಹ್ಯೂಮನಾಯ್ಡ್ ರೋಬೋಟ್ ಅನ್ನು ತಯಾರಿಸಿದ್ದಾರೆ.

Robot Teacher: 4ನೇ ತರಗತಿ ಮಕ್ಕಳಿಗೆ ಕಲಿಸಲು ಸಿದ್ದವಾಗಿರುವ ರೋಬೋಟ್!
ಹ್ಯೂಮನಾಯ್ಡ್ ರೋಬೋಟ್
Image Credit source: PTI

Updated on: Feb 28, 2023 | 5:34 PM

ಶಿರಸಿ: ತಂತ್ರಜ್ಞಾನ ಆಕಾಶದೆತ್ತರಕ್ಕೆ ಬೆಳೆಯುತ್ತಿರುವ ಈ ಶತಮಾನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ರೋಬೋಟ್ ಬಳಕೆ ಹೆಚ್ಚುತ್ತಿದೆ. ಇದೀಗ ನಮ್ಮ ರಾಜ್ಯದಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ ರೋಬೋಟ್ ಪಾಠ ಮಾಡಲು ಸಿದ್ಧವಾಗಿದೆಯಂತೆ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಟೆಕ್ ಗೀಕ್, ಎಲೆಕ್ಟ್ರಾನಿಕ್ಸ್‌ನಲ್ಲಿ ಪರಿಣತಿ ಹೊಂದಿರುವ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಅಕ್ಷಯ್ ಮಶೆಲ್ಕರ್ ನಾಲ್ಕನೇ ತರಗತಿಯವರೆಗೆ ಮಕ್ಕಳಿಗೆ ಕಲಿಸುವ ‘ಶಿಕ್ಷಾ’ ಹೆಸರಿನ ಹುಮನಾಯ್ಡ್ ರೋಬೋಟ್ ಅನ್ನು ತಯಾರಿಸಿದ್ದಾರೆ.

“ಮಾದರಿ ಸಿದ್ಧವಾಗಿದೆ ಆದರೆ ಅದನ್ನು ಅಧಿಕೃತವಾಗಿ ಎಲ್ಲಿಯೂ ನಿಯೋಜಿಸಲಾಗಿಲ್ಲ. ‘ಶಿಕ್ಷಾ’ ನಾಲ್ಕನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಉಪಯುಕ್ತ ಕಲಿಕೆಯ ಸಾಧನವಾಗಿದೆ” ಎಂದು ಪಿಟಿಐಗೆ ಅಕ್ಷಯ್ ಹೇಳಿದರು.

ಅಕ್ಷಯ್ ಮಶೆಲ್ಕರ್, “ಕೋವಿಡ್​ನಿಂದಾದ ಲಾಕ್‌ಡೌನ್ ಸಮಯದಲ್ಲಿ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಪಾಠ ಕೇಳಲು ಮೊಬೈಲ್ ಫೋನ್‌ಗಳು ಅಥವಾ ಕಂಪ್ಯೂಟರ್‌ಗಳಿಗೆ ಅಂಟಿಕೊಂಡಾಗ ‘ಶಿಕ್ಷಾ’ ರೋಬೋಟ್ ಅನ್ನು ಅಭಿವೃದ್ಧಿಪಡಿಸುವ ಆಲೋಚನೆ ಬಂತು” ಎಂದು ತಿಳಿಸಿದರು.

ಉತ್ಸಾಹ ನಿರತ ಕಲ್ಕೆಯನ್ನು ಮಕ್ಕಳು ಅಭ್ಯಾಸ ಮಾಡುತ್ತಿದ್ದರು. ಆನ್‌ಲೈನ್‌ನಲ್ಲಿ ಮಕ್ಕಳು ನಿರಾಸೆಯಿಂದ ಪಾಠ ಕೇಳುತ್ತಿದ್ದರು. ಇಂತಹ ಸಮಯದಲ್ಲಿ ಆನ್‌ಲೈನ್‌ನಲ್ಲಿ ಪಾಠ ಮಾಡುವ ಬದಲು ಜನರು ಸಂವಾದಾತ್ಮಕ ಸಾಧನವನ್ನು ಬಯಸುತ್ತಾರೆ. ಕಲಿಕೆಯಲ್ಲಿ ವಿನೋದ ತರಗತಿಯನ್ನು ಉತ್ಸಾಹ ಇವೆರಡು ಕಾಣಸಿಗುತ್ತದೆ. ಇದರಿಂದ ಮಕ್ಕಳಿಗೆ ಪಾಠಗಳನ್ನು ಗ್ರಹಿಸುವುದು ಸುಲಭವಾಗುತ್ತದೆ. ಅದಕ್ಕಾಗಿಯೇ ನಾನು ಈ ರೋಬೋಟ್ ತಯಾರಿಸುವುದರ ಬಗ್ಗೆ ಯೋಚಿಸಿದೆ, ”ಎಂದು ಮಶೆಲ್ಕರ್ ಪಿಟಿಐಗೆ ತಿಳಿಸಿದರು.

ಶಿರಸಿಯ ಚೈತನ್ಯ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಮಶೇಲ್ಕರ್ ಅವರು ತರಗತಿಯ ಸಮಯದಲ್ಲಿ ಮಕ್ಕಳು ತಂತ್ರಜ್ಞಾನದ ಜೊತೆ ಪಾಠವನ್ನು ಕೇಳಲಾಗುತ್ತಿಲ್ಲ ಎಂದು ಯೋಚಿಸಿದರು.

ತರಗತಿಯಲ್ಲಿ ಹೆಚ್ಚಿನ ತಾಂತ್ರಿಕ ಪರಿಕಲ್ಪನೆಗಳನ್ನು ತರಲು ಇಂತಹ ಒಂದು ರೋಬೋಟ್ ಅನ್ನು ತಯಾರಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ‘ಶಿಕ್ಷಾ’ ರೋಬೋಟ್ ಒಂದು ಕ್ರಾಂತಿಯನ್ನು ಸೃಷ್ಟಿಸಲಿದೆ ಎಂದು ಮಶೇಲ್ಕರ್ ನಂಬಿದ್ದಾರೆ.

“ಇದು ಹೆಚ್ಚಿನ ತಂತ್ರಜ್ಞಾನ ಒಳಗೊಂಡ ರೋಬೋಟ್‌ನಂತಿಲ್ಲ ಏಕೆಂದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಾ ರೋಬೋಟ್ ಕೈಗೆಟುಕುವಂತೆ ಮಾಡುವುದು ನನ್ನ ಮೂಲ ಉದ್ದೇಶವಾಗಿತ್ತು. ಮಕ್ಕಳು ಸರಿಯಾದ ಉತ್ತರವನ್ನು ನೀಡಿದಾಗ ಶಿಕ್ಷಾ ತಲೆದೂಗುತ್ತದೆ. ಸರಿಯಾದ ಉತ್ತರಗಳಿಗಾಗಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಆಕೆ ತನ್ನ ಕೈಯನ್ನು ಚಾಚುತ್ತಾಳೆ” ಎಂದು ಮಶೆಲ್ಕರ್ ತಿಳಿಸಿದರು.

ಶಿಕ್ಷಾ ರೋಬೋಟ್ ಕುರಿತು ಮಾತನಾಡುತ್ತಾ, “ಪ್ರಾಸಗಳು ಮತ್ತು ಕೋಷ್ಟಕಗಳಿಗೆ, ಇದು ಒಂದು ಕೈಯನ್ನು ವಿಸ್ತರಿಸುತ್ತದೆ ಮತ್ತು ಸಮಾನಾರ್ಥಕ ಮತ್ತು ಆಂಟೊನಿಮ್‌ಗಳಿಗೆ, ಇದು ಎರಡೂ ಕೈಗಳನ್ನು ವಿಸ್ತರಿಸುತ್ತದೆ” ಎಂದು ರೋಬೋಟ್‌ನ ಡೆವಲಪರ್ ಅಕ್ಷಯ್ ಮಶೆಲ್ಕರ್ ತಿಳಿಸಿದರು.