ಸಂಸದ ಅನಂತ ಕುಮಾರ ಹೆಗೆಡೆಗೆ ಮತ್ತೊಮ್ಮೆ ಜೀವ ಬೆದರಿಕೆ ಕರೆ, ಪ್ರಕರಣ ದಾಖಲು

ದೂರಿನ ಪ್ರಕಾರ, ಮುಂದುವರಿದು ಮಾತಾಡಿರುವ ಈ ಅನಾಮಧೇಯ ವ್ಯಕ್ತಿಯು, ಸಂಸದರನ್ನು ಸುಮ್ಮನೆ ಬಿಡುವುದಿಲ್ಲ ಅಂತ ಬೆದರಿಕೆ ಹಾಕಿದ್ದಾನಂತೆ.

  • TV9 Web Team
  • Published On - 0:14 AM, 7 Apr 2021
ಸಂಸದ ಅನಂತ ಕುಮಾರ ಹೆಗೆಡೆಗೆ ಮತ್ತೊಮ್ಮೆ ಜೀವ ಬೆದರಿಕೆ ಕರೆ, ಪ್ರಕರಣ ದಾಖಲು
ಸಂಸದ ಅನಂತ ಕುಮಾರ ಹೆಗಡೆ

ಶಿರಸಿ: ಇತ್ತೀಚಿಗಷ್ಟೇ ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಬಿಜೆಪಿ ಸಂಸದ ಅನಂತ ಕುಮಾರ ಹೆಗಡೆ ಅವರಿಗೆ ಮಂಗಳವಾರದಂದು ಬೆದರಿಕೆ ಕರೆ ಬಂದ ನಂತರ ಸಂಸದರ ಆಪ್ತ ಕಾರ್ಯದರ್ಶಿ ಸುರೇಶ್​ ಗೋವಿಂದ ಶೆಟ್ಟಿ ಅವರಿಂದ ಹೊಸ ಮಾರುಕಟ್ಟೆ ಠಾಣೆಯಲ್ಲಿ ಜೀವ ಬೆದರಿಕೆಯ ದೂರು ದಾಖಲಾಗಿದೆ.

ಶಿರಸಿಯಲ್ಲಿರುವ ಸಂಸದರ ಮನೆಗೆ ಕರೆಮಾಡಿದ ವ್ಯಕ್ತಿಯು, ‘ನೀನು ಅನಂತ ಕುಮಾರ ಹೆಗಡೆ, ಬಿಜೆಪಿ ಪಕ್ಷದ ಸಂಸದ….. ಹೌದು ತಾನೆ? ನಾನು ಹಿಂದಿನ‌ ಬಾರಿ ಕರೆ ಮಾಡಿದ್ದಾಗ ಪೊಲೀಸ್​ ಠಾಣೆಗೆ ಹೋಗಿ ದೂರು ನೀಡಿದ್ದೆ. ಈ ಬಾರಿ ಏನು ಮಾಡುತ್ತೀಯಾ? ನೀನು ಪೊಲೀಸರಿಗೆ ದೂರು ನೀಡಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು,’ ಎಂದು ಉರ್ದು ಮಿಶ್ರಿತ ಹಿಂದಿಯಲ್ಲಿ ಮಾತನಾಡಿ ಜೀವ ಬೆದರಿಕೆ ಹಾಕಿದ್ದಾನೆಂದು ದೂರಿನಲ್ಲಿ ಹೇಳಲಾಗಿದೆ.

ದೂರಿನ ಪ್ರಕಾರ, ಮುಂದುವರಿದು ಮಾತಾಡಿರುವ ಈ ಅನಾಮಧೇಯ ವ್ಯಕ್ತಿಯು, ಸಂಸದರನ್ನು ಸುಮ್ಮನೆ ಬಿಡುವುದಿಲ್ಲ ಅಂತ ಬೆದರಿಕೆ ಹಾಕಿದ್ದಾನಂತೆ.

‘ಈ ಬಾರಿ ನಾನು ನಿನ್ನನ್ನು ಏನು ಮಾಡುತ್ತೇನೆ ನೋಡ್ತಾ ಇರು, ನಿನ್ನನ್ನು ಸುಮ್ಮನೆ ಬಿಡಲ್ಲ,’ ಎಂದು ಸುಮಾರು ಬೆಳಗಿನ ಜಾವ ಸುಮಾರು 2 ಗಂಟೆಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನಂತೆ.

ಸಂಸದ ಅನಂತ ಕುಮಾರ್ ಹೆಗಡೆಯವರಿಗೆ ಈ ಹಿಂದೆಯೂ ಜೀವ ಬೆದರಿಕೆ ಬಂದಿತ್ತು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ

ಅನಾಮಧೇಯ ವ್ಯಕ್ತಿಯು 94645540399 ನಂಬರಿನಿಂದ ಫೋನ್ ಕರೆ‌ ಮಾಡಿ ಜೀವ ಬೆದರಿಕೆ ಹಾಕಿರುವನೆಂದು ದೂರಿನಲ್ಲಿ ತಿಳಿಸಲಾಗಿದೆ.

ಸಂಸದರಿಗೆ ಪದೇ ಪದೇ ಜೀವ ಬೆದರಿಕೆ ಕರೆ ಬರುತ್ತಿರುವುದರಿಂದ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಮತ್ತು ಕರೆ ಮಾಡಿರುವ ವ್ಯಕ್ತಿಯನ್ನು ಬಂಧಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ಸುರೇಶ್ ಮಾಧ್ಯಮಗಳಿಗೆ ಹೇಳಿದರು.

ಕಳೆದ ಬಾರಿ ಅಂದರೆ ಫೆಬ್ರುವರಿ 16,2019 ರಂದು ಸಂಸದರಿಗೆ ಜೀವ ಬೆದರಿಕೆ ಕರೆ ಬಂದಾಗಲೂ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಹೊಸದಾಗಿ 6,150 ಮಂದಿಗೆ ಕೊರೊನಾ ದೃಢ