ಪಶ್ಚಿಮಘಟ್ಟ ಕಾಡಿನಲ್ಲಿರುವ ಉಳವಿ ದೇಗುಲಕ್ಕೂ ದೂರದ ಬೀದರ ಜಿಲ್ಲೆಯ ಬಸವ ಕಲ್ಯಾಣಕ್ಕೂ ಇದೆ ನಂಟು!

ಉಳವಿ ಪಶ್ಚಿಮ ಕಾಡಿನಂಚಿನಲ್ಲಿರುವ ಈ ಪ್ರದೇಶ ದಟ್ಟವಾದ ಕಾಡಿನ ಮಧ್ಯೆ ಇದೆ. ಇಂದಿಗೂ ಆ ದೇವಸ್ಥಾನಕ್ಕೆ ಹೋಗಬೇಕಂದ್ರೆ ದಟ್ಟವಾದ ಕಾಡಿನ ಮಧ್ಯೆದಿಂದ ಹಾದು ಹೋಗಬೇಕಾಗುತ್ತದೆ. ಸದ್ಯದ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನಲ್ಲಿದೆ.

ಪಶ್ಚಿಮಘಟ್ಟ ಕಾಡಿನಲ್ಲಿರುವ ಉಳವಿ ದೇಗುಲಕ್ಕೂ ದೂರದ ಬೀದರ ಜಿಲ್ಲೆಯ ಬಸವ ಕಲ್ಯಾಣಕ್ಕೂ ಇದೆ ನಂಟು!
ಪಶ್ಚಿಮ ಘಟ್ಟ ಕಾಡಿನ ಉಳವಿ ದೇವಸ್ಥಾನಕ್ಕೂ ದೂರದ ಬಸವ ಕಲ್ಯಾಣಕ್ಕೂ ಇದೆ ನಂಟು!
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಸಾಧು ಶ್ರೀನಾಥ್​

Updated on: Jan 09, 2024 | 11:41 AM

ಪಶ್ಚಿಮ ಘಟ್ಟದಲ್ಲಿನ ಕಾಡಿನ ಮಧ್ಯೆ ಇರುವ ಬೃಹತ್ ದೇವಸ್ಥಾನಕ್ಕೂ ದೂರದ ಬೀದರ ಜಿಲ್ಲೆಯ ಬಸವ ಕಲ್ಯಾಣಕ್ಕೂ ( basavakalyan in bidar) ಇದೆ ನಂಟು. ಶರಣರ ಜೀವ ಉಳಿವಿಗೆ ಕಾರಣ ಆಗಿದ್ದ ಸ್ಥಳ ಇಂದು ಉಳವಿ (Ulavi) ಎಂಬ ತೀರ್ಥಕ್ಷೇತ್ರವಾಗಿದೆ. ಸುಂದರವಾದ ನೈಸರ್ಗಿಕ ತಾಣದಲ್ಲಿರುವ ಈ ದೇವಸ್ಥಾನ (pilgrimage for Lingayat faith people) ಅತ್ಯದ್ಭುತ ಪ್ರೇಕ್ಷಣೀಯ ಸ್ಥಳವಾಗಿದ್ದೂ, ನಿತ್ಯ ಸಾವಿರಾರು ಜನ ಇಲ್ಲಿಗೆ ಬರುತ್ತಾರೆ.

ಶರಣರ ಸಾಲಿನ ಅಗ್ರಗಣ್ಯ ಹೆಸರುಗಳಲ್ಲಿ ಚೆನ್ನಬಸವೇಶ್ವರರ ಹೆಸರು ಕೂಡ ಒಂದು. ಬನಸವೇಶ್ವರರ ಸೋದರಳಿಯ ನಾಗಿದ್ದ ಚೆನ್ನಬಸವೇಶ್ವರ ಬಿಜ್ಜಳ ರಾಜನ ಹತ್ಯೆ ಆದ ಸಂದರ್ಭದಲ್ಲಿ, ಆ ಕೊಲೆಯ ಆರೋಪವನ್ನ ಶರಣರ ಮೇಲೆ ಹಾಕಿ, ಶರಣರ ಜೊತೆಗೆ ವಚನ ಸಾಹಿತ್ಯವನ್ನ ನಾಶ ಮಾಡಲಿಕ್ಕೆ ಕಲ್ಯಾಣದಲ್ಲಿನ ಜನ ಮುಂದಾಗ್ತಾರೆ. ಆಗ ಕಲ್ಯಾಣದಿಂದ ಹೊರಟ ಚನ್ನಬಸವಣ್ಣನವರು ವಚನ ಸಾಹಿತ್ಯವನ್ನು ಹೊತ್ತು ಕೊಂಡು ಬಂದು ಉಳಿದ ಸ್ಥಳವೇ ಉಳವಿ (Lingayat Pilgrimage).

ಉಳವಿ ಚೆನ್ನವಸವಣ್ಣನವರನ್ನು ಜೀವಂತ ಉಳಿಸಿದ ಸ್ಥಳ ಅಷ್ಟೆ ಅಲ್ಲದೆ ಶರಣರು ಸೃಷ್ಟಿಸಿದ ವಚನಗಳನ್ನ ಉಳಿಸಿದ ಸ್ಥಳವೂ ಕೂಡ ಹೌದು. ಉಳವಿಯಿಂದ ಅನೇಕ ವಚನ ಕ್ರಾಂತಿಗೆ ನಾಂದಿ ಹಾಡಿದ ಚೆನ್ನಬಸವಣ್ಣನವರು 24 ನೇ ವಯಸ್ಸಿಗೆ ಮರಣ ಹೊಂದಿದರು. ಅವರ ಸಮಾಧಿ ಅಲ್ಲಿಯೆ ಇದೆ. ಸಮಾಧಿಯೇ ಇಂದು ದೊಡ್ಡ ದೇವಸ್ಥಾನ ಆಗಿದೆ. ಬೆಳಗಾವಿ ಧಾರವಾಡ, ಹಾವೇರಿ ಹಾಗೂ ದಾವಣಗೆರೆಯಲ್ಲಿರುವ ಅನೇಕ ಲಿಂಗಾಯತ ಸಮಾಜ ಬಾಂಧವರ ಮನೆಯ ದೇವರು ಕೂಡ ಹೌದು ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ಶಂಕ್ರಯ್ಯ ಕಲ್ಮಠ ಮಾಹಿತಿ ನೀಡಿದ್ದಾರೆ.

Also Read: ಲಕ್ಷದ್ವೀಪದಲ್ಲಿ ನಿರ್ಮಾಣವಾಗಲಿವೆ ಎರಡು ವಿಶ್ವದರ್ಜೆ ರೆಸಾರ್ಟ್​ಗಳು; ತಾಜ್ ಗ್ರೂಪ್​ನ ಯೋಜನೆ

ಉಳವಿ ಪಶ್ಚಿಮ ಕಾಡಿನಂಚಿನಲ್ಲಿರುವ ಈ ಪ್ರದೇಶ ದಟ್ಟವಾದ ಕಾಡಿನ ಮಧ್ಯೆ ಇದೆ. ಇಂದಿಗೂ ಆ ದೇವಸ್ಥಾನಕ್ಕೆ ಹೋಗಬೇಕಂದ್ರೆ ದಟ್ಟವಾದ ಕಾಡಿನ ಮಧ್ಯೆದಿಂದ ಹಾದು ಹೋಗಬೇಕಾಗುತ್ತದೆ. ಸದ್ಯದ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನಲ್ಲಿದೆ. ಕಾರವಾರ ಜಿಲ್ಲಾ ಕೇಂದ್ರದಿಂದ 75 ಕಿಮೀ ಅಂತರದಲ್ಲಿರುವ ಈ ತೀರ್ಥ ಕ್ಷೇತ್ರ, ರಾಜ್ಯದ ಮೂಲೆ ಮೂಲೆಗಳಲ್ಲಿ ಭಕ್ತರನ್ನು ಹೊಂದಿದೆ. ನಿತ್ಯ ಸಾವಿರಾರು ಜನ ಇಲ್ಲಿಗೆ ಭೇಟಿ ಕೊಡುತ್ತಾರೆ. ಇದು ಕೇವಲ ಅಧ್ಯಾತ್ಮಿಕ ತಾಣವಾಗದೆ ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ ಪಡೆದಿದೆ. ಚಿರತೆ, ಕರಡಿ ಸಾರಂಗಿ ಹಾಗೂ ಕಾಡುಕೋಣಗಳನ್ನು ಹೆಚ್ಚಾಗಿ ಹೊಂದಿರುವ ಈ ಪ್ರದೇಶ ಇಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಆಕರ್ಷಣೀಯ ತಾಣವಾಗಿದೆ.

800 ವರ್ಷಗಳ ಹಿಂದೆ ಚೆನ್ನಬಸವಣ್ಣನವರ ಬಂದು ನೆಲೆಸಿದ್ದ ಈ ಸ್ಥಳ ಇಂದು ಬೃಹತ್ ದೇವಸ್ಥಾನ ಆಗಿದೆ. ಪ್ರತಿವರ್ಷ ಫೆಬ್ರವರಿಯಲ್ಲಿ ನಡೆಯುವ ಜಾತ್ರೆಗೆ ಲಕ್ಷ ಲಕ್ಷ ಜನ ಬರುತ್ತಾರೆ. ದೊಡ್ಡ ಗಾತ್ರದ ರಥ ಎಳೆಯುವುದರ ಮೂಲಕ ಅನೇಕರು ತಮ್ಮ ಭಕ್ತಿಯನ್ನ ಸಮರ್ಪಿಸುತ್ತಾರೆ. ಉತ್ತರ ಕರ್ನಾಟಕದ ಜನರೆ ಈ ಕ್ಷೆತ್ರಕ್ಕೆ ಹೆಚ್ಚಿನ ಭಕ್ತರಿದ್ದು ಎತ್ತಿನ ಬಂಡಿ, ಟ್ರ್ಯಾಕ್ಟರ್ ಹಾಗೂ ಟಂ ಟಂ ಮೂಲಕ ಜಾತ್ರೆಗೆ ಬರುತ್ತಾರೆ. ಜಾತ್ರಾ ಮಹೋತ್ಸವದಲ್ಲಿ ಎಲ್ಲಿ ನೋಡಿದರಲ್ಲಿ ಎತ್ತಿನ ಬಂಡಿ ಟ್ರ್ಯಾಕ್ಟರ್ ಗಳೆ ಹೆಚ್ಚಾಗಿ ಕಾಣಸಿಗುತ್ತವೆ. ಪಕ್ಕಾ ಹಳ್ಳಿ ಪ್ರದೇಶದಿಂದ ಬರುವ ಜನ ಇಲ್ಲಿ ಎರಡ್ಮೂರು ದಿನಗಳ ಕಾಲ ಇದ್ದು ಜಾತ್ರೆ ಮುಗಿ ಮನೆಗೆ ಹೋಗುತ್ತಾರೆ.

ಒಟ್ಟಾರೆಯಾಗಿ 12 ನೇ ಶತಮಾನದಲ್ಲಿ ಶರಣರು ಬಂದು ತಂಗಿದ್ದ ಪವಿತ್ರ ಸ್ಥಳ ಇಂದು ಲಕ್ಷಾಂತರ ಭಕ್ತರ ತಾಣವಾಗಿದೆ. ಅಲ್ಲದೆ, ಅತ್ಯದ್ಭುತ ಪ್ರೇಕ್ಷಣೀಯ ಸ್ಥಳವಾಗಿದ್ದು ವಚನ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡುವವರು ಕೂಡ ಇಲ್ಲಿಗೆ ಭೇಟಿ ಕೋಡುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ