Viral News: ಉತ್ತರ ಕನ್ನಡದ ಈ ಜಾತಿಯಲ್ಲಿ ಎಷ್ಟೋ ವರ್ಷಗಳಿಂದ ನಡೆಯುತ್ತಿದೆ ಸಲಿಂಗ ವಿವಾಹ; ಕಾರಣ ಗೊತ್ತಾ?

Uttara Kannada News: ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗ ಸಮುದಾಯದಲ್ಲಿ ಬಹಳ ಹಿಂದಿನಿಂದಲೂ ಮಹಿಳೆಯೊಂದಿಗೆ ಮಹಿಳೆಗೆ ಮದುವೆ ಮಾಡಿಸುವ ಸಂಪ್ರದಾಯ ಚಾಲ್ತಿಯಲ್ಲಿದೆ.

Viral News: ಉತ್ತರ ಕನ್ನಡದ ಈ ಜಾತಿಯಲ್ಲಿ ಎಷ್ಟೋ ವರ್ಷಗಳಿಂದ ನಡೆಯುತ್ತಿದೆ ಸಲಿಂಗ ವಿವಾಹ; ಕಾರಣ ಗೊತ್ತಾ?
ಗೋಕರ್ಣದ ಬಳಿ ಮಹಿಳೆ-ಮಹಿಳೆ ನಡುವೆ ಮದುವೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 17, 2022 | 4:00 PM

ಈಗಿನ ಕಾಲದಲ್ಲಿ ಸಲಿಂಗ ವಿವಾಹ (Lesbian Wedding) ಬಹಳ ಸಾಮಾನ್ಯ ಎನಿಸಿಕೊಂಡು ಬಿಟ್ಟಿದೆ. ಮೊದಲೆಲ್ಲ ಹುಡುಗ-ಹುಡುಗಿ ಒಟ್ಟಾಗಿ ಓಡಾಡಿದರೆ ಹುಬ್ಬು ಗಂಟಿಕ್ಕುತ್ತಿದ್ದ ಜನರು ಈಗ ಹುಡುಗ-ಹುಡುಗ ಅಥವಾ ಯುವತಿ-ಯುವತಿ ಒಟ್ಟಾಗಿ ಕೈ ಕೈ ಹಿಡಿದುಕೊಂಡು ಓಡಾಡಿದರೆ ಅನುಮಾನದಿಂದ ನೋಡುವ ಪರಿಸ್ಥಿತಿ ಉಂಟಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಸಲಿಂಗ ವಿವಾಹವೆಂಬುದು ಬಹಳ ಸಾಮಾನ್ಯವೆನಿಸಿಕೊಂಡಿದೆ. ಆದರೆ, ನಮ್ಮ ಕರ್ನಾಟಕದಲ್ಲಿ ಒಂದು ಸಮುದಾಯದಲ್ಲಿ ಬಹಳ ಹಿಂದಿನ ಕಾಲದಿಂದಲೂ ಈ ಸಲಿಂಗ ವಿವಾಹದ ಪದ್ಧತಿ ರೂಢಿಯಲ್ಲಿದೆ ಎಂಬುದು ನಿಮಗೆ ಗೊತ್ತಾ?

ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗ ಸಮುದಾಯದಲ್ಲಿ ಬಹಳ ಹಿಂದಿನಿಂದಲೂ ಮಹಿಳೆಯೊಂದಿಗೆ ಮಹಿಳೆಗೆ ಮದುವೆ ಮಾಡಿಸುವ ಸಂಪ್ರದಾಯ ಚಾಲ್ತಿಯಲ್ಲಿದೆ. ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡುವ ಸಂಪ್ರದಾಯ ಇರುವ ಬಗ್ಗೆ ನಮಗೆ ಗೊತ್ತಿದೆ. ಆದರೆ, ಈ ಹಾಲಕ್ಕಿ ಸಮುದಾಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಆಗದಂತೆ ದೇವರ ಮನವೊಲಿಸಲು ಮಹಿಳೆ-ಮಹಿಳೆಗೆ ಮದುವೆ ಮಾಡಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಕೆಲವು ದಿನಗಳ ಹಿಂದಷ್ಟೇ ಇಂದ್ರದೇವನನ್ನು ಸಂತೃಪ್ತಿಗೊಳಿಸಲು ಇಬ್ಬರು ಮಹಿಳೆಯರಿಗೆ ಮದುವೆ ಮಾಡಿಸಲಾಗಿದೆ. ಇದರಿಂದ ಮಳೆ, ಬೆಳೆ ಚೆನ್ನಾಗಿರುತ್ತದೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: Wedding: ಇಷ್ಟವಿಲ್ಲದಿದ್ದರೂ ಎರಡು ಮದುವೆ ಆಗಲೇಬೇಕು; ಈ ದೇಶದಲ್ಲಿ ಹೀಗೊಂದು ಕಾನೂನು

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಳಿ ಇರುವ ತಾರಮಕ್ಕಿ ಗ್ರಾಮದಲ್ಲಿ ಹುಲಸ್ಕೆರೆ ಹಾಲಕ್ಕಿ ಸಮುದಾಯದ ಜನರು ಸೇರಿ ಈ ಸಲಿಂಗ ವಿವಾಹ ನಡೆಸಿದ್ದಾರೆ. ಸಾಂಪ್ರದಾಯಿಕ ಜಾನಪದ ಹಾಡುಗಳ ಮಧ್ಯೆ ಈ ಕಾರ್ಯಕ್ರಮ ನಡೆದಿದೆ. ಮಹಿಳೆ ಹಾಗೂ ಮಹಿಳೆಗೆ ನಡೆಯುವ ಈ ಮದುವೆಯಲ್ಲಿ ಪುರುಷರ ಸಂಖ್ಯೆ ಕಡಿಮೆ ಇರುತ್ತದೆ. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುತ್ತಾರೆ.

ಮಹಿಳೆಯರಿಬ್ಬರು ಮೊದಲು ಹೂವಿನ ಹಾರಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಹಿಂದೂಗಳ ಮದುವೆಯಲ್ಲಿ ಪಠಿಸಲಾಗುವ ಸಂಸ್ಕೃತ ಮಂತ್ರದ ಬದಲಿಗೆ ಇಲ್ಲಿ ಸ್ಥಳೀಯ ಭಾಷೆಯಲ್ಲಿ ಜಾನಪದ ಹಾಡುಗಳು, ಸಂಗೀತ, ಲಾವಣಿ ಹಾಡುಗಳನ್ನು ಹಾಡಲಾಗುತ್ತದೆ. ಹಾಲಕ್ಕಿ ಸಮುದಾಯದ ಹಿರಿಯರ ಸಮ್ಮುಖದಲ್ಲಿ ಧಾರೆ ಎರೆಸಲಾಗುತ್ತದೆ. ನಂತರ ಬೇರೆ ಮದುವೆಗಳಲ್ಲಿ ನೀಡುವಂತೆ ಈ ಮದುವೆಗೆ ಬಂದ ಅತಿಥಿಗಳು ದಂಪತಿಗೆ ಉಡುಗೊರೆಗಳನ್ನು ನೀಡುತ್ತಾರೆ. ಹಾಗಂತ, ಈ ಮದುವೆ ನಡೆದ ನಂತರ ಆ ಇಬ್ಬರು ಮಹಿಳೆಯರು ಒಟ್ಟಿಗೇ ವಾಸಿಸುವುದಿಲ್ಲ. ಮದುವೆಯಾದ ನಂತರ ಅವರಿಬ್ಬರೂ ತಮ್ಮ ತಮ್ಮ ಮನೆಗೆ ವಾಪಾಸ್ ಹೋಗುತ್ತಾರೆ.

ಇದನ್ನೂ ಓದಿ: ಬಿಹಾರದ ಮಧುಬನಿಯ ವಿಶೇಷ ಮಾರುಕಟ್ಟೆಯಲ್ಲಿ ವರನೂ ಲಭ್ಯ, ಮದುವೆಗೆ ಗಂಡು ಹುಡುಕುವುದು ಇಲ್ಲಿ ಸುಲಭ!

ಉತ್ತರ ಕನ್ನಡದ ಹಾಲಕ್ಕಿ ಸಮುದಾಯದಲ್ಲಿ ಈ ಆಚರಣೆಯ ಇತಿಹಾಸವು ತುಂಬಾ ಹಳೆಯದಾಗಿದೆ. ಇದು ಯಾವಾಗ ಮತ್ತು ಹೇಗೆ ಪ್ರಾರಂಭವಾಯಿತು ಎಂದು ಈ ಸಮುದಾಯದಲ್ಲಿ ವಾಸಿಸುವ ಯಾರಿಗೂ ತಿಳಿದಿಲ್ಲ. ಈ ಸಮುದಾಯದಲ್ಲಿ ಈ ವಿಶಿಷ್ಟ ರೀತಿಯ ಮದುವೆಯನ್ನು ದಡ್ಡುವೆ ಮದುವೆ ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ಕರ್ಕಿ ವಿನಾಯಕ ಮತ್ತು ಕರಿಯಮ್ಮ ದೇವಸ್ಥಾನದಲ್ಲಿ ಈ ಸಲಿಂಗ ವಿವಾಹ ನೆರವೇರಿತು. ಹಾಲಕ್ಕಿ ಜನಾಂಗದಲ್ಲಿ ಈ ದೇವತೆಗಳಿಗೆ ವಿಶೇಷ ಸ್ಥಾನವಿದೆ. ಈ ಮದುವೆಯಲ್ಲಿ ಜನರು ನವವಿವಾಹಿತರ ಕುತ್ತಿಗೆಗೆ ಚಿಪ್ಸ್ ಪ್ಯಾಕೆಟ್‌ಗಳ ಹಾರವನ್ನು ಹಾಕುತ್ತಾರೆ. ನಂತರ ಡೋಲು, ಪಟಾಕಿ, ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಗುತ್ತದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್